ನವದೆಹಲಿ: ಇಂದು (ಫೆಬ್ರವರಿ 5) ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆದಿದ್ದು, ಹಲವು ವಿವಾದ, ಗೊಂದಲಗಳ ನಡುವೆಯೇ ಎಲ್ಲಾ 70 ಕ್ಷೇತ್ರಗಳಲ್ಲೂ 6.30ಕ್ಕೆ ಅಂತ್ಯಗೊಂಡಿದೆ. ಒಟ್ಟು 699 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ದಾಖಲಾಗಿದೆ. ಇದೇ ತಿಂಗಳ 8ರಂದು ಫಲಿತಾಂಶ ಹೊರಬೀಳಲಿದೆ.
ಇನ್ನು ಅತ್ತ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ಇತ್ತ ವಿವಿಧ ಸಂಸ್ಥೆಗಳು ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಬಿಡುಗಡೆಗೊಳಿಸಿವೆ.
ಈ ಪೈಕಿ ನಡೆಸಿದ ಪಿ ಮಾರ್ಕ್ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 39ರಿಂದ 49, ಎಎಪಿಗೆ 21-31 ಹಾಗೂ ಕಾಂಗ್ರೆಸ್‌ಗೆ 0-1 ಕ್ಷೇತ್ರಗಳಲ್ಲಿ ಬಹುಮತ ಸಿಗಲಿದೆ ಎಂದು ತಿಳಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


