ಇದು ಡಿಜಿಟಲ್ ಯುಗ. ಒಂದು ಕ್ಷಣವೂ ಮೊಬೈಲ್ ಬಿಟ್ಟು ಇರುವುದಿಲ್ಲ. ಅದರಲ್ಲೂ ಯುವ ಪೀಳಿಗೆ ಬೊಬೈಲ್ನಲ್ಲಿ ಹುಳುವಾಗಿಬಿಟ್ಟಿದ್ದಾರೆ. ಅಷ್ಟೊಂದು ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಡಿಜಿಟಲ್ ಯುಗ ಎಷ್ಟು ಒಳೆಯದೋ ಅಷ್ಟೇ ಮಾರಕವಾಗಿದೆ. ಆನ್ ಲೈನ್ ಗೇಮ್ಗೀಳಿಗೆ ಸಿಲುಕಿ ದುಡಿದ ಹಣವನ್ನ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿದ್ದಾರೆ.ಇದೀಗ ಆನ್ ಲೈನ್ ಗೇಮ್ ಗೀಳಿಗೆ ಬಿದ್ದ ಸ್ಟಾಫ್ ನರ್ಸ್ ಓರ್ವ ನಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದಿದೆ.ಆನ್ ಲೈನ್ ಗೇಮ್ ನಿಂದ ಲಕ್ಷಾಂತರ ಹಣ ಕಳೆದುಕೊಂಡ ಐಐಟಿ(IIT) ಸ್ಟಾಫ್ ನರ್ಸ್ ನೇಣಿಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದಿದೆ. ಯುವಕ ನಾಗರಾಜ್ ಶಿವಪ್ಪ ಉಳವಣ್ಣವರ(30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ನೈನ್ ಗೇಮ್ ಚಟದಿಂದ ನೇಣಿಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಮೃತ ನಾಗರಾಜ್ ಆನ್ನೈನ್ ಗೇಮ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದು, ತೀವ್ರ ನಷ್ಟಕ್ಕೊಳಗಾಗಿದ್ದ. ಅಲ್ಲದೇ ಈತ IIT ಸ್ಟಾಫ್ ನರ್ಸ್ ಎಂದು ತಿಳಿದುಬಂದಿದೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


