ಹುಬ್ಬಳ್ಳಿ: ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಬೇಕೆಂದು ಬಿಜೆಪಿಯಲ್ಲಿ ಆಂತರಿಕವಾಗಿ ಚರ್ಚೆ ನಡೆಯುತ್ತಿದೆ. ಆದರೆ ಬಹಿರಂಗವಾಗಿ ಮಾತನಾಡುವ ಧೈರ್ಯ ಇಲ್ಲವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆ ಕುರಿತು ಚರ್ಚೆಗಳು ಎದುರಾದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಸಿಎಂ ಬದಲಾವಣೆ ಬಗ್ಗೆ ಆಮೇಲೆ ಮಾತನಾಡೋಣ. ದೇಶದಲ್ಲಿ ಪ್ರಧಾನಿಯನ್ನು ಬದಲಾವಣೆ ಮಾಡಬೇಕು ಎಂದು ಬಿಜೆಪಿಯ ಒಳಗೆ ದೊಡ್ಡ ಚರ್ಚೆಯಿದೆ. ಮೋದಿಯವರಿಂದ ಆರ್ಥಿಕ ಕುಸಿತವಾಗಿದೆ. ವಿಶ್ವಗುರು ಕಡೆಯಿಂದ ಯಾವುದೇ ಸಾಧನೆಯಾಗುವುದಿಲ್ಲ. ಹೀಗಾಗಿ ನಿತಿನ್ ಗಟ್ಕರಿಯವರನ್ನು ಬದಲಾವಣೆ ಮಾಡಬೇಕೆಂಬುದು ಹಲವರ ಅಭಿಪ್ರಾಯ. ತಾವು ಇತ್ತೀಚೆಗೆ ದೆಹಲಿಗೆ ತೆರಳಿದಾಗ ಬಿಜೆಪಿಯ ಹಲವು ಸ್ನೇಹಿತರು ನನ್ನ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು ಎಂದು ಹೇಳಿದರು.
ಬಿಜೆಪಿಯಲ್ಲಿ ಯಾರಿಗೂ ಮೋದಿಯ ವಿರುದ್ಧ ಮಾತನಾಡುವ ಧೈರ್ಯ ಇಲ್ಲ. ಆಂತರಿಕ ಪ್ರಜಾಪ್ರಭುತ್ವವೂ ಇಲ್ಲ. ಬಿಜೆಪಿಯ ಮುಖಂಡರೇ ಆದಂತಹ ಸುಬ್ರಹಣ್ಯಸ್ವಾಮಿಯವರು ರಾಹುಲ್‌ಗಾಂಧಿಯವರ ವಿರುದ್ಧ ಮಾತನಾಡಿದಾಗ ಬಿಜೆಪಿಯ ಎಲ್ಲಾ ನಾಯಕರೂ ಬೆರಳು ತೋರಿಸಿ ಬೆಂಬಲ ಸೂಚಿಸಿದ್ದಾರೆ.
ಅದೇ ಮೋದಿಯ ವಿರುದ್ಧ ಅವರು ಮಾತನಾಡುತ್ತಿರುವುದರ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆಗಳು ಕಂಡುಬರುತ್ತಿಲ್ಲ. ಮೋದಿಗೆ ಆರ್ಥಿಕತೆ ಗೊತ್ತಿಲ್ಲ, ಬಂಡಲ್ ಬಡಾಯಿ ಎಂದೆಲ್ಲಾ ಸುಬ್ರಹಣ್ಯಸ್ವಾಮಿ ಟೀಕಿಸ್ದಿರೆ. ಯಾರೂ ಅದನ್ನು ಪ್ರತಿರೋಧಿಸಿಲ್ಲ. ಅದರರ್ಥ ಸುಬ್ರಹಣ್ಯಸ್ವಾಮಿ ಅವರ ಟೀಕೆಯನ್ನು ಒಪ್ಪಿಕೊಂಡಿದ್ದಾರೆ ಎಂದರ್ಥವೇ? ಎಂದು ಪ್ರಶ್ನಿಸಿದರು.
ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಬಿಜೆಪಿಯವರು ಟೀಕೆ ಮಾಡುತ್ತಾರೆ. ಇದು ಜನರಿಗೆ ನೇರವಾಗಿ ತಲುಪುವ ಹಣ. 50-60 ಸಾವಿರ ಕೋಟಿ ಜನರಿಗೆ ತಲುಪಿದಾಗ ಸಹಜವಾಗಿಯೇ ಅದು ಜಿಡಿಪಿಯ ಅಭಿವೃದ್ಧಿಗೆ ಸಹಾಯವಾಗುವುದಿಲ್ಲವೇ? ಇದನ್ನು ಸಕಾರಾತಕವಾಗಿ ಏಕೆ ನೋಡುವುದಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಮೂರು ಕೋಟಿ ರೈತರಿಗೆ 12 ಲಕ್ಷ ಕೋಟಿ ರೂ.ಗಳನ್ನು ನೀಡುತ್ತಿದೆ. ಇದು ಉಚಿತ ಕೊಡುಗೆ ಅಲ್ಲವೇ?, ಕಾಂಗ್ರೆಸ್‌ನವರು ಕೊಟ್ಟರೆ ಮಾತ್ರ ಏಕೆ ಟೀಕೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡಿರುವ ಸಾಲ ಕಾಂಗ್ರೆಸ್‌ನವರ ಅವಧಿಯಲ್ಲಾದ ಸಾಲದ ಬಗ್ಗೆಯೂ ವಿಮರ್ಶೆ ಮಾಡಲು ನಾವು ಸಿದ್ಧ. ಬಿಜೆಪಿಯವರು 70 ವರ್ಷಗಳಲ್ಲಾಗದಷ್ಟು ಸಾಲವನ್ನು ಕೇವಲ 10 ವರ್ಷದಲ್ಲಿ ಮಾಡಿದ್ದಾರೆ. ಮೋದಿಯವರ ಆಡಳಿತಾವಧಿಯಲ್ಲಿ ಜಿಡಿಪಿ ಕುಸಿದು ಹೋಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪಾಸ್‌ಪೋರ್ಟ್ ಸಾಮರ್ಥ್ಯ 80 ರಿಂದ 81ಕ್ಕೆ ಇಳಿಕೆಯಾಗಿದೆ. ಡಾಲರ್ 87 ರೂ.ಗೆ ತಲುಪಿದೆ. ಪ್ರತಿ ತಿಂಗಳು ಒಂದೊಂದು ರೂಪಾಯಿ ಕುಸಿಯುತ್ತಿದೆ. ಬಹುತೇಕ ಮುಂದಿನ ತಿಂಗಳಿಗೆ 90 ರೂ. ದಾಟಬಹುದು. ಇದೇ ಮೋದಿಯವರು ಚುನಾವಣೆಯ ಸಂದರ್ಭದಲ್ಲಿ ಡಾಲರ್ ಮೌಲ್ಯವನ್ನು 20 ರೂ. ಗೆ ಇಳಿಸುವುದಾಗಿ ಹೇಳಿದರು. ಆದರೆ ಆಗುತ್ತಿರುವುದೇನು? ಇದರ ಬಗ್ಗೆ ಯಾರಿಯೂ, ಎಲ್ಲಿಯೂ ಚರ್ಚೆ ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗೆ ಹಣ ಕೊಟ್ಟ ಕಾರಣಕ್ಕೆ ಅಭಿವೃದ್ಧಿಗೆ ಕೊರತೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಸೂರ್ಯ, ಚಂದ್ರ ಇರುವವರೆಗೆ ಅನುದಾನದ ಕೊರತೆ ಸಹಜ. ಆದರೆ ನಮ ಸರ್ಕಾರ ಅದನ್ನು ಸರಿದೂಗಿಸುತ್ತಿದೆ. ಸಿದ್ದರಾಮಯ್ಯನವರು ಉತ್ತಮ ಬಜೆಟ್ ಮಂಡಿಸಲಿದ್ದಾರೆ ಎಂದು ವಿವರಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


