Tuesday, November 3, 2026
spot_img
More
    spot_img
    HomeChampions Trophy 2025ಚಾಂಪಿಯನ್ಸ್ ಟ್ರೋಫಿ ಅತಿಹೆಚ್ಚು ರನ್: 2ನೇ ಸ್ಥಾನಕ್ಕೇರಿದ ಕೊಹ್ಲಿ; ಗೇಲ್ ದಾಖಲೆ ಮುರಿದು ನಂ.1 ಆಗಲು...

    ಚಾಂಪಿಯನ್ಸ್ ಟ್ರೋಫಿ ಅತಿಹೆಚ್ಚು ರನ್: 2ನೇ ಸ್ಥಾನಕ್ಕೇರಿದ ಕೊಹ್ಲಿ; ಗೇಲ್ ದಾಖಲೆ ಮುರಿದು ನಂ.1 ಆಗಲು ಇನ್ನೆಷ್ಟು ರನ್ ಬೇಕು?

    ದುಬೈ: ನಿನ್ನೆ ( ಮಾರ್ಚ್ 4 ) ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ತಲುಪಿತು.

    ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್ ಕಲೆಹಾಕಿ ಆಲ್‌ಔಟ್ ಆಗಿ ಭಾರತಕ್ಕೆ 265 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿತು.

    ಇನ್ನು ಪಂದ್ಯದಲ್ಲಿ ಕೊಹ್ಲಿ ಜವಾಬ್ದಾರಿಯುತ ಆಟವಾಡಿದ್ದು, ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ತಂಡ ಆರಂಭಿಕ ಆಘಾತ ಅನುಭವಿಸಿದಾಗ ಐದನೇ ಓವರ್‌ನಲ್ಲಿ ಕಣಕ್ಕಿಳಿದ ಕೊಹ್ಲಿ 42ನೇ ಓವರ್‌ವರೆಗೂ ಬ್ಯಾಟ್ ಬೀಸಿದರು. ಒಂದೆಡೆ ಉಳಿದ ಆಟಗಾರರು ತಮ್ಮ ಕಾಣಿಕೆ ನೀಡಿ ನಿರ್ಗಮಿಸುತ್ತಿದ್ದರೆ ಮತ್ತೊಂದೆಡೆ ಕೊಹ್ಲಿ ಎಲ್ಲರ ಜೊತೆ ಜತೆಯಾಟವನ್ನಾಡಿ ತಂಡವನ್ನು ಗೆಲುವಿನ ದಡಕ್ಕೆ ತಂದಿಟ್ಟರು.

    ಈ ಇನ್ನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ 746 ರನ್‌ಗಳನ್ನು ಬಾರಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಹೇಲಾ ಜಯವರ್ಧನೆಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 791 ರನ್ ಬಾರಿಸಿರುವ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು, ಕೊಹ್ಲಿ ಈ ದಾಖಲೆ ಮುರಿಯಲು 45 ರನ್‌ಗಳನ್ನು ಬಾರಿಸಬೇಕಿದೆ.

    ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರು

    ಕ್ರಿಸ್ ಗೇಲ್ – 791 ರನ್

    ವಿರಾಟ್ ಕೊಹ್ಲಿ – 746 ರನ್

    ಮಹೇಲಾ ಜಯವರ್ಧನೆ – 742 ರನ್

    ಶಿಖರ್ ಧವನ್ – 701 ರನ್

    ಕುಮಾರ್ ಸಂಗಕ್ಕಾರ – 683 ರನ್

    ಸೌರವ್ ಗಂಗೂಲಿ – 665 ರನ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search