ಬೆಂಗಳೂರು: ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಓಡಿ ಹೋಗಿ ಕ್ಯೂನಲ್ಲಿ ನಿಂತು ವ್ಯಾಕ್ಸಿನ್ ತೆಗೆದುಕೊಂಡವರು ಸಿಎಂ ಸಿದ್ದರಾಮಯ್ಯ ಅವರೇ. ಓಡಿಹೋಗಿ ಮೊದಲು ವ್ಯಾಕ್ಸಿನ್ ತೆಗೆದುಕೊಂಡವರು ಅವರೇ. 5 ವರ್ಷ ನಾನೇ ಸಿಎಂ ಎಂದು ಹೇಳೋದಕ್ಕೂ ವ್ಯಾಕ್ಸಿನ್ ಕಾರಣ ಎಂದು ಕಿಡಿಕಾರಿದರು.
ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆರ್‌ಎಸ್‌ಎಸ್ ನಿಷೇಧ ಸಾಧ್ಯವೇ ಇಲ್ಲದ ಮಾತು. ಪ್ರಿಯಾಂಕ್ ಖರ್ಗೆ ವ್ಯಾಪ್ತಿ ಮೀರಿ ಹೋಗುತ್ತಿದ್ದಾರೆ. ಹುಚ್ಚರಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಅಧಿಕಾರಕ್ಕೆ ಬರುವ ಯೋಗ್ಯತೆ ಇಲ್ಲ. ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್ ಮುಟ್ಟಿ ನೋಡಲಿ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲೂ ಆಂತರಿಕ ಗೊಂದಲಗಳು ಸಹಜ. ಆಂತರಿಕ ಭಿನ್ನಮತವೇ ಕಳೆದ ಚುನಾವಣೆಯ ಹಿನ್ನಡೆಗೆ ಕಾರಣ. ಸ್ಥಳೀಯ ವಿಷಯಗಳಲ್ಲಿ ಸ್ಥಳೀಯ ನಾಯಕರೇ ಪರಿಹಾರ ನೀಡಬೇಕು. ಈಗ ಒಂದು ರೀತಿಯ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಕೊಡವರಲ್ಲಿ ಮೊದಲು ನಟಿಯಾದವಳು ನಾನೇ ಎಂದು ಮಹಾ ಯಡವಟ್ಟು ಮಾಡಿಕೊಂಡ ರಶ್ಮಿಕಾ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


