Sunday, September 20, 2026
spot_img
More
    spot_img
    HomeSportsCricketರನ್‌ಗಾಗಿ ಮುಂದುವರಿದ ಕರುಣ್‌ ನಾಯರ್‌ ಪರದಾಟ; ಈ ಇನ್ನಿಂಗ್ಸ್‌ನಲ್ಲೂ ಬರಲಿಲ್ಲ ಅರ್ಧಶತಕ!

    ರನ್‌ಗಾಗಿ ಮುಂದುವರಿದ ಕರುಣ್‌ ನಾಯರ್‌ ಪರದಾಟ; ಈ ಇನ್ನಿಂಗ್ಸ್‌ನಲ್ಲೂ ಬರಲಿಲ್ಲ ಅರ್ಧಶತಕ!

    ಬರ್ಮಿಂಗ್‌ಹ್ಯಾಮ್:‌ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 180 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

    Advertisement

    ಇಂದು ( ಜೂನ್‌ 5 ) ನಾಲ್ಕನೇ ದಿನದಾಟದಂದು ಎರಡನೇ ಇನ್ನಿಂಗ್ಸ್‌ನ ಆಟವನ್ನು ಮುಂದುವರಿಸಿರುವ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್‌ ನಾಯರ್‌ 26 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಇದೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್‌ಗೆ ಔಟ್‌ ಆಗಿದ್ದ ಕರುಣ್‌ ನಾಯರ್‌ ಇಂದಿನ ಪಂದ್ಯದಲ್ಲಿಯೂ ರನ್‌ ಗಳಿಸಲು ಪರದಾಡಿದ್ದಾರೆ.

    ಈ ಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ ಅಜೇಯ 303 ರನ್‌ ಬಾರಿಸಿ ಅಬ್ಬರಿಸಿದ್ದ ಕರುಣ್‌ ನಾಯರ್‌ ಮತ್ತೊಮ್ಮೆ 50 ರನ್‌ ದಾಟಲಾಗದೇ ಕಳಪೆ ಫಾರ್ಮ್‌ಗೆ ಸಿಲುಕಿಕೊಂಡಿದ್ದಾರೆ.

    ಕರುಣ್‌ ನಾಯರ್‌ 11 ಟೆಸ್ಟ್‌ ಇನ್ನಿಂಗ್ಸ್‌ ರನ್‌ಗಳು ( ಕ್ರಮವಾಗಿ ): 4, 13, 303*, 26, 0, 23, 5, 0, 20, 31 ಹಾಗೂ 26 ರನ್.

    ಭಾರತ ಮೊದಲ ಇನ್ನಿಂಗ್ಸ್:‌ ತಂಡದ ಪರ ಯಶಸ್ವಿ ಜೈಸ್ವಾಲ್‌ 87, ಕೆಎಲ್‌ ರಾಹುಲ್‌, ಕರುಣ್‌ ನಾಯರ್‌ 31, ಶುಬ್‌ಮನ್‌ ಗಿಲ್‌ 269, ರಿಷಬ್‌ ಪಂತ್‌ 25, ನಿತಿಶ್‌ ಕುಮಾರ್‌ ರೆಡ್ಡಿ 1, ರವೀಂದ್ರ ಜಡೇಜಾ 89, ವಾಷಿಂಗ್ಟನ್‌ ಸುಂದರ್‌ 42, ಆಕಾಶ್‌ ದೀಪ್‌ 6, ಮೊಹಮ್ಮದ್‌ ಸಿರಾಜ್‌ 8, ಪ್ರಸಿದ್ಧ್‌ ಕೃಷ್ಣ ಅಜೇಯ 5 ರನ್‌ ಕಲೆಹಾಕಿದರು. ನಾಲ್ಕನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿದ ಗಿಲ್‌ 30 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 269 ರನ್‌ ಬಾರಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ಭಾರತದ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಅಲ್ಲದೇ ಇಂಗ್ಲೆಂಡ್‌ ನೆಲದಲ್ಲಿ ಅತ್ಯಧಿಕ ರನ್‌ ಬಾರಿಸಿದ ಭಾರತದ ಆಟಗಾರ ಎಂಬ ದಾಖಲೆಯನ್ನೂ ಸಹ ನಿರ್ಮಿಸಿದರು.

    ಇಂಗ್ಲೆಂಡ್‌ ಪರ ಶೋಯೆಬ್‌ ಬಷೀರ್‌ 3, ಕ್ರಿಸ್‌ ವೋಕ್ಸ್‌ ಹಾಗೂ ಜೋಶ್‌ ಟಾಂಗ್‌ ತಲಾ ಎರಡೆರಡು ವಿಕೆಟ್‌, ಬ್ರೈಡನ್‌ ಕಾರ್ಸ್‌, ಬೆನ್‌ ಸ್ಟೋಕ್ಸ್‌ ಹಾಗೂ ಜೋ ರೂಟ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬೆನ್‌ ಡಕೆಟ್‌ (0), ಜಾಕ್‌ ಕ್ರಾವ್ಲೆ (19) ಕಳಪೆ ಆರಂಭ ನೀಡಿದರು. ಹಾಗೂ ಓಲಿ ಪೊಪ್‌ (0) ಅವರ ವಿಕೆಟ್‌ಗಳನ್ನು ಕಳೆದುಕೊಂಡು ಕೆಟ್ಟ ಆರಂಭ ಮಾಡಿದ್ದ ಇಂಗ್ಲೆಂಡ್‌ ಇಂದು ಜೋ ರೂಟ್‌ (22) ನಾಯಕ ಬೆನ್‌ ಸ್ಟೋಕ್ಸ್‌ (0) ವಿಕೆಟ್‌ ಕಳೆದುಕೊಳ್ಳುವ ಮೂಲಕ ದಿನದಾಟದ ಆರಂಭದಲ್ಲೇ ಮುಗ್ಗರಿಸಿತು. ಹೀಗೆ 84 ರನ್‌ಗೆ 5 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ಗೆ ಹ್ಯಾರಿ ಬ್ರೂಕ್‌ ಹಾಗೂ ಜೆಮಿ ಸ್ಮಿತ್‌ ಆಸರೆಯಾದರು. 303 ರನ್‌ಗಳ ಅಮೋಘ ಜತೆಯಾಟವನ್ನಾಡಿತು. ಬ್ರೂಕ್‌ 158 ರನ್‌ ಗಳಿಸಿ ಔಟ್‌ ಆದ ಬಳಿಕ ಮತ್ತೆ ಇಂಗ್ಲೆಂಡ್‌ ಸಾಲು ಸಾಲಾಗಿ ವಿಕೆಟ್‌ ಕಳೆದುಕೊಂಡಿತು. ಕ್ರಿಸ್‌ ವೋಕ್ಸ್‌ 5, ಬ್ರೈಡನ್‌ ಕಾರ್ಸ್‌ ಡಕ್‌ಔಟ್‌, ಜೋಶ್‌ ಟಂಗ್‌ ಡಕ್‌ಔಟ್‌, ಶೋಯೆಬ್‌ ಬಷೀರ್‌ ಡಕ್‌ಔಟ್‌ ಆದರು. ಮತ್ತೊಂದೆಡೆ ಅಜೇಯರಾಗಿ ಉಳಿದ ಜೇಮಿ ಸ್ಮಿತ್‌ 184 ರನ್‌ ಬಾರಿಸಿದರು.

    ಭಾರತದ ಪರ ಮೊಹಮ್ಮದ್‌ ಸಿರಾಜ್‌ 6 ವಿಕೆಟ್‌ ಹಾಗೂ ಆಕಾಶ್‌ ದೀಪ್‌ 4 ವಿಕೆಟ್‌ ಪಡೆದರು.

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಅತಿಹೆಚ್ಚು ವ್ಯೂಸ್‌ ಪಡೆದ ಗ್ಲಿಂಪ್ಸ್ ದಾಖಲೆ ಮುರಿಯುವಲ್ಲಿ ಎಡವಿದ ರಾಮಾಯಣ; ಕಾರಣವೇನು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading