Saturday, September 19, 2026
spot_img
More
    spot_img
    HomeSportsCricketಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ ಪಡೆದ ಮೊಹಮ್ಮದ್ ಸಿರಾಜ್;‌ 7 ವಿಕೆಟ್‌ ಪಡೆದಿರುವುದು ಈತ ಒಬ್ಬನೇ!

    ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ ಪಡೆದ ಮೊಹಮ್ಮದ್ ಸಿರಾಜ್;‌ 7 ವಿಕೆಟ್‌ ಪಡೆದಿರುವುದು ಈತ ಒಬ್ಬನೇ!

    ಬರ್ಮಿಂಗ್‌ಹ್ಯಾಮ್:‌ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟ ನಿನ್ನೆಗೆ ( ಜುಲೈ 4 ) ಮುಕ್ತಾಯವಾಗಿದ್ದು, ಭಾರತ 244 ರನ್‌ಗಳ ಮುನ್ನಡೆ ಸಾಧಿಸಿದೆ.

    Advertisement

    ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ 180 ರನ್‌ಗಳ ಮುನ್ನಡೆ ಸಾಧಿಸಿದ್ದ ಟೀಮ್‌ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ನಷ್ಟಕ್ಕೆ 64 ಗಳಿಸಿದೆ. ತಂಡದ ಪರ ಯಶಸ್ವಿ ಜೈಸ್ವಾಲ್‌ 28 ರನ್‌ ಗಳಿಸಿದ್ದು, ಕೆಎಲ್‌ ರಾಹುಲ್‌ ಅಜೇಯ 28 ಹಾಗೂ ಕರುಣ್‌ ನಾಯರ್‌ ಅಜೇಯ 7 ರನ ಗಳಿಸಿದ್ದಾರೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಶುಬ್‌ಮನ್‌ ಗಿಲ್‌ ದ್ವಿಶತಕದ ನೆರವಿನಿಂದ 587 ರನ್‌ ಕಲೆಹಾಕಿತು. ಇಂಗ್ಲೆಂಡ್‌ ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್‌ ಶತಕಗಳ ನೆರವಿನಿಂದ 407 ರನ್‌ ಕಲೆಹಾಕಿತು.

    ಇಂಗ್ಲೆಂಡ್‌ ಪರ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್‌ ಶತಕಗಳನ್ನು ಬಾರಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರನೂ 20 ರನ್‌ ಗಡಿ ದಾಟಲಿಲ್ಲ. ಬರೋಬ್ಬರಿ 6 ಆಟಗಾರರು ಡಕ್‌ಔಟ್‌ ಆದರು. ಆರಂಭಿಕ ಆಟಗಾರ ಜಾಕ್‌ ಕ್ರಾವ್ಲಿ ವಿಕೆಟ್‌ ಪಡೆದ ಸಿರಾಜ್‌ ಬಳಿಕ ರೂಟ್‌, ನಾಯಕ ಬೆನ್‌ ಸ್ಟೋಕ್ಸ್‌, ಬೌಲರ್‌ಗಳಾದ ಬ್ರೈಡನ್‌ ಕಾರ್ಸ್‌, ಜೋಶ್‌ ಟಂಗ್‌ ಹಾಗೂ ಶೋಯೆಬ್ ಶಬೀರ್‌ ವಿಕೆಟ್‌ಗಳನ್ನು ಪಡೆದು 6 ವಿಕೆಟ್‌ಗಳ ಗೊಂಚಲನ್ನು ಪಡೆದರು.

    ಈ ಮೂಲಕ ಇಂಗ್ಲೆಂಡ್‌ ನೆಲದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಎರಡನೇ ಅತಿಹೆಚ್ಚು ವಿಕೆಟ್‌ ಪಡೆದ ಭಾರತದ ಬೌಲರ್‌ ಎನಿಸಿಕೊಂಡರು. ಈ ಹಿಂದೆ ಬಿ ಸಿಂಗ್‌ ಬೇಡಿ, ದಿಲಿಪ್‌ ಜೋಶಿ, ಭುವನೇಶ್ವರ್‌ ಕುಮಾರ್‌, ಚೇತನ್‌ ಶರ್ಮಾ, ಚಂದ್ರಶೇಖರ್ ಹಾಗೂ ಅಮರ್‌ ಸಿಂಗ್‌ ಇಂಗ್ಲೆಂಡ್‌ ನೆಲದಲ್ಲಿ 6 ವಿಕೆಟ್‌ ಪಡೆದಿದ್ದರು.

    ಇಶಾಂತ್‌ ಶರ್ಮಾ ಇಂಗ್ಲೆಂಡ್‌ ನೆಲದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

    ಮೈಸೂರು: ಸಂಸದರು ಭೇಟಿ ನೀಡಿದ್ದ ಜಾಗದಲ್ಲೇ ಮಲಯಾಳಂ ಬೋರ್ಡ್;‌ ಕಿಡಿಕಾರಿದ ಕನ್ನಡಿಗರು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading