ಕಲಬುರಗಿ: ರಾಜ್ಯದಲ್ಲಿ ಲಯ ಕಳೆದುಕೊಂಡಿರುವ ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು, ಎಲ್ಲೆಡೆ ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕಲಬುರಗಿಗೂ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಮಾಡಿರುವ ಆರೋಪಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.
ವಿರೋಧ ಪಕ್ಷದವರು ಹೇಳ್ತಾ ಇಲ್ಲ ಬಿಆರ್ ಪಾಟೀಲ್ ಅವರು ಲಾಟರಿ ಮುಖ್ಯಮಂತ್ರಿಗಳು ಅಂತ ಬಿರುದು ಕೊಟ್ಟಿದ್ದಾರೆ ಎಂದರು. ಬೆನ್ನಲ್ಲೇ ಇದನ್ನು ನಾವು ಹೇಳಿದ್ದಲ್ಲ, ನಮ್ಮ ಸಿದ್ರಾಮಣ್ಣನ ಬಗ್ಗೆ ನಾವು ಅಷ್ಟು ಕೇವಲವಾಗಿ ಮಾತನಾಡಲ್ಲ, ದೇವೇಗೌಡರ ರಾಜಕೀಯ ಗರಡಿಯಲ್ಲಿ ಬೆಳೆದಂತವರು ಸಿದ್ರಾಮಣ್ಣ, ಎಲ್ಲಾದ್ರೂ ಉಂಟಾ ಸಿದ್ರಾಮಣ್ಣನ ಬಗ್ಗೆ ಕೆಟ್ಟದಾಗಿ ಮಾತನಾಡೋಕಾಗುತ್ತಾ? ಅವರಿಗೆ ಅನುಭವ ಆಗಿರೋ ಅಷ್ಟು ವಯಸ್ಸಾಗಿಲ್ಲ ನನಗೆ ಎಂದು ನಗುತ್ತಲೇ ಕುಟುಕಿದರು.
ಅಲ್ಲದೇ ಆದರೆ ನಾನು ಒಂದಷ್ಟು ವಿಷಯ ತಿಳಿದುಕೊಂಡಿದ್ದೇನೆ ಎಂದ ನಿಖಿಲ್ ಸಿದ್ದರಾಮಯ್ಯನವರು ದೇವೇಗೌಡರು ತನ್ನನ್ನು ಜೆಡಿಎಸ್‌ನಿಂದ ಹೊರಹಾಕಿಬಿಟ್ಟರು ಎನ್ನುತ್ತಾರೆ. ಆದರೆ ಸಿದ್ದರಾಮಯ್ಯನವರಿಂದ ಮೊದಲ ಬಜೆಟ್ ಮಂಡಿಸಿದ್ದೇ ದೇವೇಗೌಡರು, ಆಗ ಜನತಾದಳ ಪಕ್ಷದಲ್ಲಿ ಅನೇಕ ಹಿರಿಯ, ಅನುಭವಿ ನಾಯಕರಿದ್ದರು. ಆದರೆ ಓರ್ವ ಒಬಿಸಿ ಕೆಟಗರಿ ನಾಯಕನನ್ನು ಬೆಳೆಸಬೇಕು ಎಂದು ದೇವೇಗೌಡರು ಸಿದ್ದರಾಮಯ್ಯನವರ ಬಳಿ ಬಜೆಟ್ ಮಂಡಿಸಿದರು. ತುಂಬಾ ಜನ ಆಗ ಸಿದ್ದರಾಮಯ್ಯನವರ ಅನುಭವದ ಮೇಲೆ ಪ್ರಶ್ನೆ ಮಾಡ್ತಾರೆ, ಇದನ್ನು ಸಿದ್ರಾಮಣ್ಣ ಮರೆತುಬಿಟ್ಟಿದ್ದಾರೆ. ಅಲ್ಲದೇ 2004ರಲ್ಲಿ ನಮ್ಮ ಪಕ್ಷದಿಂದ ಉಪಮುಖ್ಯಮಂತ್ರಿಯಾದವರು ಯಾರು ಸಿದ್ದರಾಮಯ್ಯನವರಲ್ಲವೇ? ಎಂದು ಕಾಲೆಳೆದರು.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅತಿಹೆಚ್ಚು ವ್ಯೂಸ್ ಪಡೆದ ಗ್ಲಿಂಪ್ಸ್ ದಾಖಲೆ ಮುರಿಯುವಲ್ಲಿ ಎಡವಿದ ರಾಮಾಯಣ; ಕಾರಣವೇನು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


