ದಕ್ಷಿಣ ಕನ್ನಡ: ನಿನ್ನೆ ( ಆಗಸ್ಟ್ 4 ) ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಸಾಕ್ಷಿದಾರ ಈ ಹಿಂದೆ ಗುರುತಿಸಿದ್ದ 11ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ಆರಂಭಿಸಲು ಮುಂದಾಗಿದ್ದರು.
ಆದರೆ ಕಾರ್ಯಾಚರಣೆ ಆರಂಭವಾಗುವ ಸಮಯಕ್ಕೆ ಅನಾಮಿಕ ದೂರುದಾರ 11ನೇ ಪಾಯಿಂಟ್ ಸಮೀಪದಲ್ಲೇ ಇದ್ದ ಕಾಡಿನೊಳಗೆ ಕರೆದುಕೊಂಡು ಹೋಗಿ ಬಂಗ್ಲ ಗುಡ್ಡ ಎಂಬ ಗುಡ್ಡದ ಮೇಲೆ ಅಗೆಯುವಂತೆ ಹೇಳಿದ್ದ.
ಕೊನೆ ಕ್ಷಣದಲ್ಲಿ ಅನಾಮಿಕ ಸ್ಪಾಟ್ ಬದಲಿಸಿದ್ದು ನೋಡಿ ಎಸ್‌ಐಟಿ ಅಧಿಕಾರಿಗಳು ಆಶ್ಚರ್ಯಕ್ಕೊಳಗಾಗಿದ್ದರು. ಆದರೆ ಪಟ್ಟು ಬಿಡದ ಅನಾಮಿಕ ಇಲ್ಲಿಯೇ ಅಗೆಯಿರಿ ಎಂದು ಹೇಳಿದ್ದ.
ಅದರಂತೆ ಬಂಗ್ಲ ಗುಡ್ಡದಲ್ಲಿ ಅಗೆಯಲು ಮುಂದಾದ ಕಾರ್ಮಿಕರಿಗೆ ಕೆಲವೇ ನಿಮಿಷಗಳಲ್ಲಿ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಹೀಗೆ ಕೊನೆ ನಿಮಿಷದಲ್ಲಿ 11ನೇ ಪಾಯಿಂಟ್ ಬದಲು ಬೇರೆ ಜಾಗ ಅಗೆಯಲು ಹೇಳಿ ಯಶಸ್ವಿಯಾದ ಅನಾಮಿಕನನ್ನು ಕಂಡು ಎಸ್‌ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಏಕೆಂದರೆ ಈ ಜಾಗದಿಂದ ಎಸ್‌ಐಟಿ ಅಧಿಕಾರಿಗಳು 3 ಬಕೆಟ್, ಉದ್ದನೆಯ ಒಂದು ಕವರ್ ಮಾಡಿದ ವಸ್ತು, ಮೂರ್ನಾಲ್ಕು ಕವರ್‌ಗಳಲ್ಲಿ ಮೂಳೆಗಳ ಅವಶೇಷಗಳನ್ನು ಪತ್ತೆ ಹಚ್ಚಿದೆ. ಈ ಮೂಲಕ ಅನಾಮಿಕ ವ್ಯಕ್ತಿ ಮತ್ತೆ ತನ್ನ ಮೇಲೆ ಜನ ಸಾಮಾನ್ಯರಿಗೆ ನಂಬಿಕೆ ಬರುವಂತೆ ಮಾಡಿದ್ದು, ತನ್ನನ್ನು ಅನುಮಾನಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾನೆ.
ಪ್ರಜ್ವಲ್ ರೇವಣ್ಣ ಜೈಲು ಪಾಲಾದದ್ದರಿಂದ ಬಿಜೆಪಿಗೆ ಮುಜುಗರವಿಲ್ಲ ಎಂದ ಪ್ರಲ್ಹಾದ್ ಜೋಶಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


