Wednesday, September 2, 2026
spot_img
More
    spot_img
    HomeStateDistrictಧರ್ಮಸ್ಥಳ: ಪ್ರಕರಣದ ದಿಕ್ಕು ಬದಲಿಸಿದ 11ನೇ ಪಾಯಿಂಟ್;‌ ಸಿಕ್ಕಿದ್ದು ಕೇವಲ ಒಂದು ಅಸ್ತಿಪಂಜರವಲ್ಲ!

    ಧರ್ಮಸ್ಥಳ: ಪ್ರಕರಣದ ದಿಕ್ಕು ಬದಲಿಸಿದ 11ನೇ ಪಾಯಿಂಟ್;‌ ಸಿಕ್ಕಿದ್ದು ಕೇವಲ ಒಂದು ಅಸ್ತಿಪಂಜರವಲ್ಲ!

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ, ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ದೂರು ನೀಡಿದ್ದ ಅನಾಮಿಕ ವ್ಯಕ್ತಿ ಸದ್ಯ ಎಸ್‌ಐಟಿ ಅಧಿಕಾರಿಗಳ ಜತೆ ತನಿಖೆಗೆ ಸಹಕರಿಸುತ್ತಿದ್ದಾನೆ.

    Advertisement

    ಮೊದಲಿಗೆ 13 ಸ್ಥಳಗಳನ್ನು ಗುರುತಿಸಿದ್ದ ಅನಾಮಿಕ ವ್ಯಕ್ತಿ ಈ ಜಾಗಗಳಲ್ಲಿ ಅಗೆದರೆ ಅಸ್ತಿಪಂಜರ ಸಿಗಲಿದೆ ಎಂದು ಹೇಳಿದ್ದ. ಅದರಂತೆ ಎಸ್‌ಐಟಿ ಅಧಿಕಾರಿಗಳು 10 ಪಾಯಿಂಟ್‌ಗಳಲ್ಲಿ ಗುಂಡಿ ಅಗೆಸಿದರಾದರೂ ಅಸ್ತಿಪಂಜರದ ಅವಶೇಷ ಪತ್ತೆಯಾದದ್ದು ಆರನೇ ಪಾಯಿಂಟ್‌ ಒಂದರಲ್ಲಿ ಮಾತ್ರ.

    ಹೀಗೆ ಹತ್ತರಲ್ಲಿ ಒಂದರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದನ್ನು ಕಂಡ ಜನತೆ ಹಾಗೂ ಪ್ರಕರಣದ ವಿರೋಧಿಗಳು ಈ ಕೇಸ್‌ ವ್ಯರ್ಥ, ಇದೆಲ್ಲ ಕಾಲಹರಣ ಎಂದು ನಾಲಿಗೆ ಹರಿಬಿಟ್ಟಿದ್ದರು. ಆದರೆ 11ನೇ ಪಾಯಿಂಟ್‌ನಲ್ಲಿ ನಡೆದ ಕಾರ್ಯಾಚರಣೆ ಈ ಎಲ್ಲರ ಬಾಯಿಮುಚ್ಚಿಸಿದೆ. ಏಕೆಂದರೆ ಅಲ್ಲಿ ಬರೋಬ್ಬರಿ 4 ಮೃತದೇಹಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ.

    ಈ ಪೈಕಿ ಒಂದು ಮಹಿಳೆಯ ಮೃತದೇಹವಾಗಿದ್ದು, ಇವುಗಳ ಜತೆ ಸೀರೆ ಸಹ ಲಭ್ಯವಾಗಿದೆ ಎನ್ನಲಾಗಿದೆ. ಇನ್ನು ಎಸ್‌ಐಟಿ ಅಧಿಕಾರಿಗಳು ಮೂರು ಕವರ್‌ ಮಾಡಲಾದ ಬಕೆಟ್‌ ಹಾಗೂ ಉದ್ದನೆಯ ಕವರ್‌ ಮಾಡಲಾದ ವಸ್ತುವನ್ನು ಹಿಡಿದು ವಾಪಸ್ಸಾಗಿದ್ದು, ದೊಡ್ಡ ಮಟ್ಟದಲ್ಲಿ ಅವಶೇಷಗಳು ಲಭ್ಯವಾಗಿವೆ ಎಂಬುದನ್ನು ಇದು ಹೇಳುತ್ತಿದೆ.

    ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರಿಗೆ ಶಾಕ್:‌ ರಜೆ ಹಾಗೂ ವಾರದ ರಜೆ ರದ್ದು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading