Monday, November 2, 2026
spot_img
More
    spot_img
    HomeEntertainment‘ಸು ಫ್ರಮ್ ಸೋ’ ಸಿನಿಮಾದ ಭಾವನ ಬಗ್ಗೆ ಇಲ್ಲಿದೆ ಮಹತ್ವದ ವಿಷಯ !

    ‘ಸು ಫ್ರಮ್ ಸೋ’ ಸಿನಿಮಾದ ಭಾವನ ಬಗ್ಗೆ ಇಲ್ಲಿದೆ ಮಹತ್ವದ ವಿಷಯ !

    ‘ಸು ಫ್ರಮ್ ಸೋ’ ಸಿನಿಮಾ ಪ್ರಚಾರವಿಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಸಾಧಿಸುತ್ತಿದೆ. ಕರಾವಳಿ ಸೊಬಗಿನ ಹಾಸ್ಯ, ಭಾವನಾತ್ಮಕ ಕಥಾವಸ್ತು, ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಸು ಫ್ರಂ ಸೋ ಸಿನೆಮಾ ‘ಹಾಸ್ಯಭರಿತ ಚಿತ್ರ’ ಎಂದು ಸದ್ದು ಮಾಡುತ್ತಿದೆ. ಸಿನೆಮಾ ನೋಡಿದ ಎಲ್ಲರೂ ‘ಹೊಟ್ಟೆ ಹುಣ್ಣಾಗುವಷ್ಟು ನಗಾಡಿದೆ’ ಎಂದು ವಿಮರ್ಶಿಸುತ್ತಿದ್ದಾರೆ. ಟ್ರೇಲರ್ ಮೂಲಕ ಅಷ್ಟೇನು ಗಮನ ಸೆಳೆಯದಿದ್ದರೂ ಸು ಫ್ರಮ್ ಸೋ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸುತ್ತಿದೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕಳೆದ ನಾಲ್ಕು ದಿನಗಳಿಂದ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.

    ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವ ಪಾತ್ರ ಹೈಲೈಟ್ ಆಗಿದೆ. ಬಾವನ ಪಾತ್ರಕ್ಕೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈ ಪಾತ್ರದ ಎಂಟ್ರಿ ವೇಳೆ ವಿಶೇಷ ಹಾಡನ್ನು ಕೂಡ ಹಾಕಲಾಗುತ್ತದೆ. ಈ ಹಾಡು ಕೂಡ ವೈರಲ್ ಆಗಿದೆ. ‘ಸು ಫ್ರಮ್ ಸೋ’ ಸಿನಿಮಾದಲ್ಲಿ ‘ಬಂದರು ಬಂದರು ಬಾವ ಬಂದರು..’ ಎಂಬ ಹಾಡು ಬಂದರೆ ಪುಷ್ಪರಾಜ್ ಎಂಟ್ರಿ ಆಯಿತು ಎಂದು ತಿಳಿದುಕೊಳ್ಳಬಹುದು.

    ಈ ಪಾತ್ರ ಮಾಡಿದ್ದು ಪುಷ್ಪರಾಜ್ ಬೋಳಾರ್ ಅವರು. ಇವರು ಕರಾವಳಿ ಪ್ರತಿಭೆ. ಈ ಮೊದಲು ‘ಕಾಂತಾರ’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ರಿಷಬ್ ಹಾಗೂ ಇತರರು ಜೈಲಿನಲ್ಲಿ ಇದ್ದಾಗ ನಗು ಉಕ್ಕಿಸುವ ಹಾಸ್ಯ ಮಾಡುತ್ತಾರೆ. ತುಳು ನಾಟಕ ಹಾಗೂ ಸಿನಿಮಾಗಳಲ್ಲಿ ಪುಷ್ಪರಾಜ್ ನಟಿಸಿ ಗಮನ ಸೆಳೆದಿದ್ದಾರೆ.  ‘ಸು ಫ್ರಮ್ ಸೋ’ನಲ್ಲಿ ಅವರು ಮಾಡಿದ ಪಾತ್ರ ಜನರ ಮೆಚ್ಚುಗೆ ಗಳಿಸಿದೆ.

    ‘ಒಂದೊಳ್ಳೆಯ ಪಾತ್ರ ಸಿಕ್ಕಿದೆ. ನಾನು ಈ ಪಾತ್ರಕ್ಕೆ ಎಷ್ಟು ಜೀವ ತುಂಬಿಸಿದೆನೋ ಗೊತ್ತಿಲ್ಲ. ಅದು ನಿರ್ದೇಶಕರಿಗೆ ಬಿಟ್ಟಿದ್ದು. ಜನರು ಪಾತ್ರ ಇಷ್ಟಪಡುತ್ತಿದ್ದಾರೆ. ಎಲ್ಲರೂ ಸಿನಿಮಾನ ಸಪೋರ್ಟ್ ಮಾಡಬೇಕು’ ಎಂದು ಪುಷ್ಪರಾಜ್ ಕೋರಿದ್ದಾರೆ.

    ,ನಾಗತ್ತೆ ನೆನೆದು ನಟ ಶಿವಣ್ಣ ಏನೆಲ್ಲ ಹೇಳಿದ್ದಾರೆ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search