ದೂತ ಸಮೀರ್ ಎಂಡಿ ಯಾರಿಗೆ ತಾನೇ ಗೊತ್ತಿಲ್ಲ. ಧರ್ಮಸ್ಥಳ ಹಾರರ್ ವಿಡಿಯೊಗಳನ್ನು ಮಾಡಿದ ಬಳಿಕ ಬಹುಬೇಗನೆ ವೈರಲ್ ಆದ ಈತನ ವಿರುದ್ಧ ಸದ್ಯ ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತನ ಕ್ಯಾಮೆರಾ, ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಗೋಲ್ಡನ್ ಕನ್ನಡಿಗ ಎಂಬ ಯುಟ್ಯೂಬರ್ ಸಮೀರ್ ವಿಡಿಯೊ ವೈರಲ್ ಆಗಲು ಕಾರಣವೇನೆಂಬುದನ್ನು ಯುನೈಟೆಡ್ ಮೀಡಿಯಾದ ಅಭಿ ಎಂಬಾತ ತನ್ನ ಬಳಿಯೇ ಹೇಳಿಕೊಂಡಿದ್ದ ಎಂದು ಸಹ ಹೇಳಿಕೊಂಡಿದ್ದಾನೆ,
ಸುಮಂತ್ ಹೇಳುವ ಪ್ರಕಾರ ಆತನಿಗೆ ಯುಟ್ಯೂಬರ್ ಚಂದನ್ ಗೌಡ ಎಂಬಾತನ ಕಡೆಯಿಂದ ಯುನೈಟೆಡ್ ಮೀಡಿಯಾದ ಅಭಿ ಎಂಬಾತ ಪರಿಚಿತನಂತೆ. ಆತನ ಜೊತೆ ಎರಡು ವರ್ಷಗಳ ಸ್ನೇಹವಿದೆಯಂತೆ. ಧರ್ಮಸ್ಥಳದ ವಿರುದ್ಧ ವಿಡಿಯೊ ಮಾಡಿದರೆ ಹಣ ಹಾಗೂ ಉಳಿದುಕೊಳ್ಳಲು ಜಾಗ ಎಲ್ಲವನ್ನೂ ಕೊಡುವುದಾಗಿ ಸ್ವತಃ ಅಭಿ ಈತನ ಬಳಿ ಹೇಳಿದ್ದನಂತೆ.
ಇಷ್ಟೆಲ್ಲ ಗಂಭೀರ ಆರೋಪಗಳನ್ನು ಮಾಡಿರುವ ಸುಮಂತ್ ಸಮೀರ್ ವಿಡಿಯೊ ವೈರಲ್ ಆಗಲು 300ರಿಂದ 400 ಟ್ರೋಲ್ ಪೇಜ್‌ಗಳು ಹಾಗೂ 50 ಕಂಟೆಂಟ್ ಕ್ರಿಯೇಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು ಎಂದೂ ಸಹ ಅಭಿ ಹೇಳಿದ್ದ ಎಂದು ಬಾಂಬ್ ಸಿಡಿಸಿದ್ದಾನೆ.
ಈ ವಿಷಯವನ್ನು ಯುಟ್ಯೂಬರ್ ಚಂದನ್ ಗೌಡ ಅವರ ಬಟ್ಟೆ ಅಂಗಡಿ ಉದ್ಘಾಟನೆಗೆ ತೆರಳಿದ್ದಾಗ ಸ್ವತಃ ಅಭಿಯೇ ತನ್ನ ಬಳಿ ಹೇಳಿದ್ದ ಎನ್ನುವ ಈ ಸುಮಂತ್ ಇಷ್ಟು ದಿನಗಳ ಕಾಲ ಯಾಕೆ ಈ ವಿಷಯವನ್ನು ಹೇಳಲಿಲ್ಲ ಎಂದು ಪ್ರಶ್ನೆ ಹಾಕಿದರೆ ಸ್ನೇಹಿತನಾಗಿದ್ದ ಕಾರಣ ಹೇಳಬಾರದು ಎಂದುಕೊಂಡಿದ್ದೆ, ಆದರೆ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಇರಲಾಗುತ್ತಿಲ್ಲ ಎಂದು ಹೇಳಿದ್ದಾನೆ.
60% ಕಮಿಷನ್ ಕೇಳಿದ ಆರೋಪ; ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ಗೆ ಕಾನೂನು ಸಂಕಷ್ಟ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


