Thursday, September 3, 2026
spot_img
More
    spot_img
    HomeLatest newsಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ಯಾಕಿಲ್ಲ? ಇದರ ಹಿಂದಿರುವ ಕಾರಣವೇನು

    ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ಯಾಕಿಲ್ಲ? ಇದರ ಹಿಂದಿರುವ ಕಾರಣವೇನು

    ಜಿಎಸ್‌ಟಿ ಕೌನ್ಸಿಲ್ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು 28% ರಿಂದ 40% ತೆರಿಗೆ ಸ್ಲ್ಯಾಬ್‌ಗೆ ಹಾಕಿರುವುದರಿಂದ ಧೂಮಪಾನಿಗಳು ಬೇಸರವಾಗಿದ್ದಾರೆ. ಆರೋಗ್ಯಕ್ಕೆ ಹಾನಿ ಮಾಡುವ ವಸ್ತುಗಳು ಹಾಗೂ ಅತ್ಯವಶ್ಯವಲ್ಲದ ಐಷಾರಾಮಿ ವಸ್ತುಗಳನ್ನು ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳೆಂದು ವರ್ಗೀಕರಿಸಲಾಗಿದೆ. ಇವುಗಳಿಗೆ ಗರಿಷ್ಠ ಜಿಎಸ್​ಟಿ ವಿಧಿಸಲಾಗುತ್ತಿದೆ. ಹೊಸ ಸಿಸ್ಟಂ ಪ್ರಕಾರ ಇವುಗಳಿಗೆ ಪ್ರತ್ಯೇಕವಾಗಿ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಲಾಗುತ್ತದೆ. ಆದರೆ ಮದ್ಯಪಾನಿಗಳಿಗೆ ಆರಾಮದಾಯಕ ಸುದ್ದಿ ಇದಾಗಿದೆ‌. ಮದ್ಯದ ಬೆಲೆಯಲ್ಲಿ GST ಯಾವುದೇ ಪರಿಣಾಮಬೀರುವುದಿಲ್ಲ.

    Advertisement

    ಮದ್ಯದ ಉತ್ಪನ್ನಗಳಿಗೆ ಸಿನ್ ಟ್ಯಾಕ್ಸ್ ಹಾಕಿಲ್ಲ. ಮೊದಲಿಗೆ ಈ ಆಲ್ಕೋಹಾಲ್ ಡ್ರಿಂಕ್​ಗಳನ್ನು ಜಿಎಸ್​ಟಿ ವ್ಯಾಪ್ತಿಯಿಂದಲೇ ಹೊರಗಿಡಲಾಗಿದೆ.ಆಲ್ಕೋಹಾಲ್​ಗೆ ಜಿಎಸ್​ಟಿ ಬದಲು ಅಬಕಾರಿ ಸುಂಕ ಅಥವಾ ಎಕ್ಸೈಸ್ ಡ್ಯೂಟಿಯನ್ನು ವಿಧಿಸಲಾಗುತ್ತದೆ. ಇದು ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರ.

    ಮದ್ಯ, ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಭಾರತದಲ್ಲಿ ಜಿಎಸ್‌ಟಿ ವ್ಯಾಪ್ತಿಗೆ ತರಲು ಆಗಿಲ್ಲ. ಈ ಮೂರು ಉತ್ಪನ್ನಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಆಗಿಲ್ಲ. ಮದ್ಯ, ಪೆಟ್ರೋಲ್‌ ಮತ್ತು ಡೀಸೆಲ್‌ ಜಿಎಸ್‌ಟಿ ವ್ಯವಸ್ಥೆಯಿಂದ ಇಂದಿಗೂ ಹೊರಗುಳಿದಿವೆ. ಇವುಗಳನ್ನು ಏಕೆ ಜಿಎಸ್‌ಟಿ ವ್ಯಾಪ್ತಿಗೆ ತರಲು ಆಗುತ್ತಿಲ್ಲ? ಇದರ ಹಿಂದಿರುವ ಆರ್ಥಿಕ ಮತ್ತು ಸಾಂವಿಧಾನಿಕ ಕಾರಣಗಳೇನು? ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಗುವ ಲಾಭ-ನಷ್ಟ ಏನು?

    ಭಾರತದಲ್ಲಿ ಮಾನವ ಬಳಕೆಯ ಮದ್ಯವನ್ನು ಜಿಎಸ್‌ಟಿಯಿಂದ ಹೊರಗಿಡಲು ಇರುವ ಅತ್ಯಂತ ಪ್ರಮುಖ ಕಾರಣವೆಂದರೆ, ಇದು ರಾಜ್ಯ ಸರ್ಕಾರಗಳ ಆದಾಯದ ಪ್ರಮುಖ ಮೂಲವಾಗಿದೆ. ಪ್ರಸ್ತುತ ವ್ಯವಸ್ಥೆಯಡಿಯಲ್ಲಿ, ಮದ್ಯದ ಮೇಲೆ ತೆರಿಗೆ ವಿಧಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ.

    ಭಾರತದ ಎಲ್ಲಾ ರಾಜ್ಯಗಳು ಒಟ್ಟಾಗಿ ಮದ್ಯದ ತೆರಿಗೆಯಿಂದ ವಾರ್ಷಿಕವಾಗಿ 90,000 ಕೋಟಿ ರೂಪಾಯಿಗೂ ಅಧಿಕ ಆದಾಯವನ್ನು ಗಳಿಸುತ್ತವೆ. ಅನೇಕ ರಾಜ್ಯಗಳಲ್ಲಿ ಅದರ ಒಟ್ಟು ತೆರಿಗೆ ಆದಾಯದ ಶೇ.25 ರಿಂದ 30ರಷ್ಟು ಭಾಗ ಕೇವಲ ಮದ್ಯದ ಮೇಲಿನ ತೆರಿಗೆಯಿಂದಲೇ ಬರುತ್ತದೆ. ಒಂದು ವೇಳೆ ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಈ ಆದಾಯವನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

    ಭಾರತೀಯ ಸಂವಿಧಾನದ ಅನುಚ್ಛೇದ 366 (12A) ಪ್ರಕಾರ ಮಾನವ ಬಳಕೆಯ ಆಲ್ಕೋಹಾಲ್‌ ಯುಕ್ತ ಮದ್ಯವನ್ನು ಜಿಎಸ್‌ಟಿಯಿಂದ ಸ್ಪಷ್ಟವಾಗಿ ಹೊರಗಿಡುತ್ತದೆ. ಈ ಅನುಚ್ಛೇದವು ಮದ್ಯದ ಮೇಲೆ ತೆರಿಗೆ ವಿಧಿಸುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading