ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಹೊಸ ನೀತಿಯ ನಂತರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ , ಕಾಂಗ್ರೆಸ್ ಆಡಳಿತದಲ್ಲಿ ದಿನಬಳಕೆಯ ವಸ್ತುಗಳು, ಆಹಾರ ಮತ್ತು ಔಷಧಿಗಳಂತಹ ಪ್ರತಿಯೊಂದಕ್ಕೂ ತೆರಿಗೆ ವಿಧಿಸಲಾಗಿತ್ತು ಎಂದು ಹೇಳಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ.
ಹೊಸ ಪೀಳಿಗೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ 2.0) ಸುಧಾರಣೆ ಭಾರತದ ಆರ್ಥಿಕ ಬೆಳವಣಿಗೆಗೆ ಎರಡು ಪಟ್ಟು ವೇಗ ನೀಡಲಿದೆ. ಜನರ ಮೇಲಿನ ಹೊರೆ ಕಡಿಮೆ ಮಾಡುವ ಜತೆಗೆ ಉದ್ಯಮದ ಬೆಳವಣಿಗೆಗೆ ಬೆಂಬಲ ನೀಡಲಿದೆ, ಈ ದೀಪಾವಳಿಯು ದೇಶದ ಜನರಿಗೆ ಡಬಲ್ ಧಮಾಕಾ ತರಲಿದೆ ಎಂದು ನಾನು ಭರವಸೆ ನೀಡಿದ್ದೆ. ನವರಾತ್ರಿಯ ಮೊದಲ ದಿನದಿಂದಲೇ ಜನರಿಗೆ ಇದರ ಪ್ರಯೋಜನಗಳು ಲಭ್ಯವಾಗಲಿವೆ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಿಎಸ್‌ಟಿ ಮಂಡಳಿಯು ನಿನ್ನೆ ಘೋಷಿಸಿದ ತೆರಿಗೆ ದರಗಳ ಸರಳೀಕರಣದ ಅಡಿಯಲ್ಲಿ, ಆಹಾರ, ಔಷಧಿಗಳು, ಅಗತ್ಯ ವಸ್ತುಗಳು, ಕೃಷಿ ಉತ್ಪನ್ನಗಳು, ಹಸಿರು ಇಂಧನ, ಸಣ್ಣ ಕಾರುಗಳು ಮತ್ತು ಬೈಕ್‌ಗಳು ಸೇರಿದಂತೆ ಅನೇಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಮಕ್ಕಳು ತಿನ್ನುವ ಚಾಕೊಲೇಟ್‌ಗಳ ಮೇಲೂ ತೆರಿಗೆ ಹಾಕಿತ್ತು, ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯ ಬಂದಾಗಿನಿಂದ ಹಲವು ಹಂತದ ತೆರಿಗೆಯಿಂದ ಜನತೆ ಹೈರಾಣಾಗಿದ್ದರು. ನಮ್ಮ ಸರಕಾರ 2017ರಲ್ಲಿ ಜಿಎಸ್‌ಟಿ ತರುವ ಮೂಲಕ ಸುಧಾರಣೆ ಹಾದಿಗೆ ನಾಂದಿ ಹಾಡಿತು. ಹೊಸ ಪೀಳಿಗೆ ಸುಧಾರಣೆ ಮೂಲಕ ಮತ್ತಷ್ಟು ಸರಳಗೊಳಿಸಲಾಗಿದೆ. ಎಂದು ಮೋದಿ ಹೇಳಿದರು.
ಸಾಮಾನ್ಯ ಜನರ ಜೇಬಿನಿಂದ ಸ್ವಲ್ಪ ಹೊರೆಯನ್ನು ಇಳಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಆಹಾರ ವಸ್ತುಗಳು ಮತ್ತು ದಿನನಿತ್ಯದ ವಸ್ತುಗಳ ಮೇಲಿನ ಪರೋಕ್ಷ ತೆರಿಗೆಗಳನ್ನು ಕಡಿತಗೊಳಿಸಿದೆ. ಬುಧವಾರ (ಸೆಪ್ಟೆಂಬರ್ 3) ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 56 ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 10 ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಜಿಎಸ್‌ಟಿ ಮಂಡಳಿಯು ಅಸ್ತಿತ್ವದಲ್ಲಿರುವ ನಾಲ್ಕು ಹಂತದ ತೆರಿಗೆ ರಚನೆಯಾದ 5%, 12%, 18% ಮತ್ತು 28% ಅನ್ನು ಸರ್ವಾನುಮತದಿಂದ ಪರಿಷ್ಕರಿಸಿತು ಮತ್ತು 12% ಮತ್ತು 28% ತೆರಿಗೆ ವರ್ಗಗಳನ್ನು ತೆಗೆದುಹಾಕಿತು.
ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಹೊಂದಿರುತ್ತದೆ, ಇದು ಸೆಪ್ಟೆಂಬರ್ 22, ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


