ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳಾಗಿದ್ದು, ಮೊನ್ನೆ ( ನವೆಂಬರ್ 3 ) ಈ ಎಲ್ಲರ ವಿರುದ್ಧ ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯದಲ್ಲಿ ದೋಷಾರೋಪವನ್ನು ನಿಗದಿಪಡಿಸಲಾಯಿತು.
ಎಲ್ಲ ಆರೋಪಿಗಳಿಗೂ ನ್ಯಾಯಾಧೀಶರು ಏನೇನು ಕೇಸ್‌ಗಳನ್ನು ಅವರ ವಿರುದ್ಧ ಹಾಕಲಾಗಿದೆ, ಅವರ ವಿರುದ್ಧ ಇರುವ ಆರೋಪಗಳೇನು ಎಂದು ಸಾರಾಂಶ ವಿವರಿಸಿದ್ದು, ಎಲ್ಲರೂ ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಇದೆಲ್ಲ ಸುಳ್ಳು ಆರೋಪ ಎಂದು ತಿಳಿಸಿದ್ದಾರೆ. ಹೀಗಾಗಿ ನವೆಂಬರ್ 10ರಿಂದ ಈ ಪ್ರಕರಣದ ಟ್ರಯಲ್ಸ್ ಶುರುವಾಗಲಿದ್ದು, ಸರ್ಕಾರಿ ಪರ ವಕೀಲರು ಹಾಗೂ ಆರೋಪಿಗಳ ನಡುವೆ ವಾದ – ಪ್ರತಿವಾದ ಆರಂಭವಾಗಲಿದೆ.
ಇನ್ನು ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಒಟ್ಟು 11 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಅವುಗಳ ಪಟ್ಟಿ ಹಾಗೂ ಆ ಪ್ರಕರಣಗಳು ಸಾಬೀತಾದರೆ ವಿಧಿಸಬಹುದಾದ ಶಿಕ್ಷೆಗಳ ಕುರಿತಾದ ಮಾಹಿತಿ ಕೆಳಕಂಡ ಪಟ್ಟಿಯಲ್ಲಿದೆ.
ಐಪಿಸಿ ಸೆಕ್ಷನ್ 302 – ಕೊಲೆ – ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ
ಐಪಿಸಿ ಸೆಕ್ಷನ್ 120ಬಿ – ಕೊಲೆಗೆ ಸಂಚು – ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ
ಐಪಿಸಿ ಸೆಕ್ಷನ್ 364 – ಅಪಹರಣ – ಜೀವಾವಧಿ ಅಥವಾ 10 ವರ್ಷ ಜೈಲು
ಐಪಿಸಿ ಸೆಕ್ಷನ್ 201 – ಸಾಕ್ಷ್ಯನಾಶ – 7 ವರ್ಷದವರೆಗೂ ಜೈಲು
ಐಪಿಸಿ ಸೆಕ್ಷನ್ 384 – ಮೃತನಿಂದ ಸುಲಿಗೆ – 3 ವರ್ಷದವರೆಗೆ ಜೈಲು, ದಂಡ ಅಥವಾ ಎರಡೂ.
ಐಪಿಸಿ ಸೆಕ್ಷನ್ 504 – ನಿಂದನೆ – ಎರಡು ವರ್ಷಗಳವರೆಗೆ ಜೈಲು, ದಂಡ ಅಥವಾ ಎರಡೂ.
ಐಪಿಸಿ ಸೆಕ್ಷನ್ 149 – ಕಾನೂನುಬಾಹಿರ ಗುಂಪು ಸೇರುವುದು ಹಾಗೂ ಕೃತ್ಯ ಎಸಗುವುದು – ಗುಂಪಿನಲ್ಲಿ ಯಾರೇ ಕೃತ್ಯ ಎಸಗಿದ್ದರೂ ಎಲ್ಲರಿಗೂ ಸಮನಾದ ಶಿಕ್ಷೆ
ಐಪಿಸಿ ಸೆಕ್ಷನ್ 143 – ಅಕ್ರಮಕೂಟ – 6 ತಿಂಗಳವರೆಗೆ ಜೈಲು
ಐಪಿಸಿ ಸೆಕ್ಷನ್ 148 – ಮಾರಕಾಸ್ತ್ರಗಳಿಂದ ಗಲಭೆ – ಮೂರು ವರ್ಷಗಳವರೆಗೆ ಜೈಲು
ಐಪಿಸಿ ಸೆಕ್ಷನ್ 342 – ವ್ಯಕ್ತಿಯನ್ನು ಅಕ್ರಮವಾಗಿ ಬಂಧನಕ್ಕೊಳಪಡಿಸುವುದು – ಒಂದು ವರ್ಷ ಜೈಲು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


