ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆದ 2018 ಹಾಗೂ 2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಿದ್ದರು. ಈ ವರ್ಷಗಳಲ್ಲಿ ತೆರೆಗೆ ಬಂದಿದ್ದ ಹಾಗೂ ಸೆನ್ಸಾರ್ ಆಗಿದ್ದ ಚಿತ್ರಗಳ ಪೈಕಿ ಉತ್ತಮ ಚಿತ್ರಗಳು ಹಾಗೂ ಕಲಾವಿದರನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಡಿ. ಸತ್ಯ ಪ್ರಕಾಶ್ ನಿರ್ದೇಶಿಸಿದ್ದ ಒಂದಲ್ಲಾ ಎರಡಲ್ಲಾ ಚಿತ್ರಕ್ಕೂ ಸಹ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿತ್ತು. ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಮ್ಮ ಕುಟುಂಬ ಸಮೇತರಾಗಿ ಬಂದು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಉಮಾಪತಿ ಶ್ರೀನಿವಾಸ್ ಯಾರೋ ಒಬ್ಬರು ಸ್ಟಾರ್‌ಗಳಿಂದ ನಿರ್ಮಾಪಕರು ಎಂದಿದ್ದರು ಅವರಿಗೆ ಈಗಾಗಲೇ ನಾನು ಉತ್ತರ ಕೊಟ್ಟಿದ್ದೇನೆ, ನಿರ್ಮಾಪಕ ಹಾಗೂ ನಿರ್ದೇಶಕನಿಂದ ಸ್ಟಾರ್ ಹುಟ್ಟುತ್ತಾನೆ, ಬಳಿಕ ವೀಕ್ಷಕರು ಆತನನ್ನು ಸ್ಟಾರ್ ಮಾಡುತ್ತಾರೆ ಎಂದರು.
ಇನ್ನು ನಿರ್ಮಾಪಕನೇ ಅನ್ನದಾತ ಎಂದು ಮತ್ತೊಮ್ಮೆ ಹೇಳಿದ ಉಮಾಪತಿ ಶ್ರೀನಿವಾಸ್ ಈಗ ಏನಾಗಿಬಿಟ್ಟಿದೆ ಅಂದರೆ ಸ್ಟಾರ್ ಆದ ಬಳಿಕ ಅನ್ನದಾತರು ಬೇಕಾದಷ್ಟು ಜನ ಆಗಿಬಿಡ್ತಾರೆ. ಈ ಫ್ಯಾನ್‌ಕ್ಲಬ್‌ಗಳನ್ನು ಕಟ್ಟಿಕೊಂಡು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದರೆ ಅವರನ್ನು ಅನ್ನದಾತರು ಎಂದುಬಿಡ್ತಾರೆ. ಅದಲ್ಲ ಅನ್ನದಾತರು ಎಂದರೆ ಏಕೆಂದರೆ ಪ್ರತಿನಿತ್ಯ ಅನ್ನ ಕೊಡುವವರು ಅನ್ನದಾತರೇ ಹೊರತು ವರ್ಷಕ್ಕೊಂದು ಸರಿ ಅನ್ನ ಕೊಡುವವರು ಯಾವುದೇ ಕಾರಣಕ್ಕೂ ಅನ್ನದಾತರಾಗಲ್ಲ. ಅದಕ್ಕೆ ಹಿರಿಯರು ಹೇಳಿರುವುದು ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎಂದು. ಈ ಹರ್ಷದ ಕೂಳು ನಂಬಿಕೊಂಡು ವರ್ಷದ ಕೂಳು ಕಳೆದುಕೊಂಡರು ಅಂತ ನಿದರ್ಶನ ನಿಮ್ಮ ಮುಂದೆಯೇ ಇದೆ ಎಂದರು.
ಹೀಗೆ ಉಮಾಪತಿ ಶ್ರೀನಿವಾಸ್ ನೀಡಿದ ಹೇಳಿಕೆ ದರ್ಶನ್ ಹಿಂದೆ ಬಿದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲ ದರ್ಶನ್ ಅಭಿಮಾನಿಗಳ ಕುರಿತು ಹೇಳಿದಂತಿದೆ. ಹರ್ಷದ ಕೂಳಿನ ಹಿಂದೆ ಬಿದ್ದು ಜೈಲು ಪಾಲಾಗಿ ಇದೀಗ ವರ್ಷದ ಕೂಳನ್ನು ಅವರೂ ಸಹ ಕಳೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


