ಮೈಸೂರು: ಕುವೆಂಪು ಸೇರಿ ಅದೆಷ್ಟೋ ಮಹಾನ್ ಸಾಧಕರಿಂದ ಮೆಚ್ಚುಗೆ ಪಡೆದುಕೊಂಡಿರುವ ಮೈಸೂರು ವಿಶ್ವವಿದ್ಯಾಲಯ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ವಿಷಯಗಳಿಗೆ ಸುದ್ದಿಯಾಗಿದ್ದಕ್ಕಿಂತ ತನ್ನಲ್ಲಿನ ನ್ಯೂನ್ಯತೆಗಳಿಂದಲೇ ಸದ್ದು ಮಾಡಿದ್ದು ಹೆಚ್ಚು.
ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಪ್ರಭಾ ಮಾರ್ಕ್ಸ್ ಕಾರ್ಡ್ ನೀಡಲು ಲಂಚ ಕೇಳುತ್ತಿದ್ದಾರೆ ಎಂದು ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿ ಕ್ರಾಫರ್ಡ್ ಹಾಲ್‌ನ ಮುಂಭಾಗದ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ಮಾಡಿದ್ದಾಳೆ.
ಈ ವಿಡಿಯೊವನ್ನು ಸಂಚಾರ ಟಿವಿ ಎಂಬ ಸುದ್ದಿ ವಾಹಿನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಾರ್ಕ್ಸ್ ಕಾರ್ಡ್‌ಗಾಗಿ 18 ಸಾವಿರ ಲಂಚ ಕೇಳಿದ್ದು, ರಸ್ತೆಯಲ್ಲಿ ಮಲಗಿ ವಿದ್ಯಾರ್ಥಿನಿ ಗೋಳಾಟ ಎಂದು ಬರೆದುಕೊಂಡಿದೆ.
ವಿಡಿಯೊದಲ್ಲಿ ವಿದ್ಯಾರ್ಥಿನಿ ರಸ್ತೆಗೆ ತನ್ನ ಬ್ಯಾಗ್ ಹಾಕಿ ಅದನ್ನೇ ತಲೆಹೊತ್ತನ್ನಾಗಿ ಮಾಡಿಕೊಂಡು ಮಲಗಿ ಪ್ರತಿಭಟಿಸಿ ತನ್ನ ಆಕ್ರೋಶ ಹೊರಹಾಕಿದ್ದಾಳೆ. ವಿದ್ಯಾರ್ಥಿನಿಯ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಭ್ರಷ್ಟರ ವಿರುದ್ಧ ಈ ರೀತಿ ಯುವ ಜನತೆ ಭಯಪಡದೇ ದನಿ ಎತ್ತಿದರೆ ಆಗ ಮಾತ್ರ ಭ್ರಷ್ಟಕೋರರು ಬುದ್ದಿ ಕಲಿಯಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


