Monday, August 3, 2026
spot_img
More
    spot_img
    HomeEntertainmentಡೆವಿಲ್ ಟ್ರೈಲರ್: ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾ ಬರ್ತಾ ಇದೀನಿ ಚಿನ್ನ ಎಂದ...

    ಡೆವಿಲ್ ಟ್ರೈಲರ್: ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾ ಬರ್ತಾ ಇದೀನಿ ಚಿನ್ನ ಎಂದ ದರ್ಶನ್

    ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ವರೈಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

    Advertisement

    ಶುಕ್ರವಾರ Saregama Kannada ಯೂ ಟ್ಯೂಬ್ ಚಾನಲ್‌ನಲ್ಲಿ The Devil – Official Trailer ಬಿಡುಗಡೆ ಮಾಡಲಾಗಿದೆ. ಅವಲಕ್ಕಿ ಪವಲಕ್ಕಿ ಕಾಂಚಣ ಮಿಣ ಮಿಣ ಎಂದು ಮಾಸ್ ಡೈಲಾಗ್ ಮೂಲಕ ದರ್ಶನ್ ಅಭಿಮಾನಿಗಳ ಮುಂದೆ ಬಂದಿದ್ದಾರೆ.

    ‘ಡೆವಿಲ್’ ಸಿನಿಮಾ ಟ್ರೈಲರ್ ನೋಡಿದ ದರ್ಶನ್ ಅಭಿಮಾನಿಗಳು ಡಿಸೆಂಬರ್ 11ರ ಚಿತ್ರ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಈಗಾಗಲೇ ‘ಡೆವಿಲ್’ ಸಿನಿಮಾ ತಂಡ ಚಿತ್ರದ ಪ್ರಚಾರವನ್ನು ಆರಂಭಿಸಿದೆ.

    ನಟ ದರ್ಶನ್ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿಯೂ  ಚಿತ್ರದ ಟ್ರೈಲರ್ ಲಿಂಕ್ ಹಾಕಲಾಗಿದೆ. ‘ದಿ ಡೆವಿಲ್ ಟ್ರೈಲರ್ ಔಟ್ ನೌ! ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ. ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ. ಡಿಸೆಂಬರ್ 11ರಿಂದ ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!’ ಎಂದು ಪೋಸ್ಟ್‌ನಲ್ಲಿ ಹಾಕಲಾಗಿದೆ.

    ‘ಡೆವಿಲ್’ ದರ್ಶನ್ ಅಭಿಯನದ ಬಹುನಿರೀಕ್ಷಿತ ಚಿತ್ರವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರುವ ಮುನ್ನ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ದರ್ಶನ್ ಜೈಲಿನಿಂದ ಜಾಮೀನು ಪಡೆದು ಬಿಡುಗೆಡೆಯಾದ ಬಳಿಕ ಹಾಡುಗಳ ಚಿತ್ರೀಕರಣ ಪೂರ್ಣಗೊಳಿಸಿ ಈಗ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

    ದರ್ಶನ್ ನಟನೆಯ ‘ಸಾರಥಿ’ ಚಿತ್ರ ಬಿಡುಗಡೆಯಾಗುವಾಗ ಸಹ ಅವರು ಜೈಲಿನಲ್ಲಿದ್ದರು. ಈಗ ಪುನಃ ಅವರು ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾವನ್ನು ಹಿಟ್ ಮಾಡಬೇಕು ಎಂದು ದರ್ಶನ್ ಅಭಿಮಾನಿಗಳು ಪಣತೊಟ್ಟಿದ್ದಾರೆ. ಅಭಿಮಾನಿಗಳ ಒತ್ತಾಯದಂತೆ ಡಿಸೆಂಬರ್ 12ರ ಬದಲು 11ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

    ಅಲ್ಲದೇ ಡಿಸೆಂಬರ್ 11ರಂದು ಮೊದಲ ಶೋ ಬೆಳಗ್ಗೆ 6.30ಕ್ಕೆ ಆರಂಭವಾಗುತ್ತಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಯಾವಾಗ ಓಪನ್ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದು ಟ್ರೈಲರ್ ಮೂಲಕ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.

    ‘ಡೆವಿಲ್’ ಸಿನಿಮಾ ನಿರ್ದೇಶಕರು ಮಿಲನಾ ಪ್ರಕಾಶ್. ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಬಿಗ್ ಬಾಸ್ ಮನೆಯಲ್ಲಿರುವ ನಟ ಗಿಲ್ಲಿ ಸೇರಿದಂತೆ ಬಹುದೊಡ್ಡ ತಾರಾ ಬಳಗವೇ ಡೆವಿಲ್ ಚಿತ್ರದಲ್ಲಿದೆ.

    ಮಾಸ್ ಚಿತ್ರಗಳನ್ನು ಇಷ್ಟಪಡುವ ದರ್ಶನ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಈ ಚಿತ್ರವನ್ನು ಮಾಡಲಾಗಿದೆ. ಈಗಾಗಲೇ ಚಿತ್ರದ ‘ಇದ್ರೆ ನೆಮ್ದಿಯಾಗ್ ಇರ್ಬೇಕು’ ಹಾಡು ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

    ದರ್ಶನ್ ಪತ್ನಿ ವಿಜಯಲಕ್ಷ್ಮೀ ‘ಡೆವಿಲ್’ ಚಿತ್ರ ಬಿಡುಗಡೆ, ಪ್ರಮೋಶನ್ ಕುರಿತು ಚಿತ್ರ ತಂಡ ಮತ್ತು ಅಭಿಮಾನಿಗಳ ಸಂಘದ ಜೊತೆ ಕೆಲವು ದಿನಗಳ ಹಿಂದೆ ಸಭೆಯನ್ನು ನಡೆಸಿದ್ದರು. ಶುಕ್ರವಾರ ಟ್ರೈಲರ್ ಮೂಲಕ ಅಭಿಮಾನಿಗಳಿಗೆ ದರ್ಶನ್ ದರ್ಶನ ಕೊಟ್ಟಿದ್ದಾರೆ.

    ಡೆವಿಲ್ ಸಿನಿಮಾದ ಹಾಡಿನಲ್ಲಿ ದರ್ಶನ್ ಕುಳಿತಿರುವ ಕುರ್ಚಿಯನ್ನು ಅಭಿಮಾನಿಗಳು ನೋಡಲು ಪ್ರದರ್ಶನಕ್ಕೆ ಇಡಲಾಗಿತ್ತು. ಚಿತ್ರೀಕರಣ ಮುಕ್ತಾಯದ ಬಳಿಕ ಅಭಿಮಾನಿಗಳು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಚಿತ್ರತಂಡ ಅವಕಾಶ ಮಾಡಿಕೊಟ್ಟಿತ್ತು.

    ‘ಡೆವಿಲ್’ ಚಿತ್ರದ ಟ್ರೈಲರ್ ವೈರಲ್ ಆಗುತ್ತಿದೆ. ಧನುಷ್ ಅನ್ನುವ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ‘ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾ ಬರ್ತಾ ಇದೀನಿ ಚಿನ್ನ’ ಎಂಬ ಮಾಸ್ ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading