Sunday, November 8, 2026
spot_img
More
    spot_img
    HomeLatest news19 ನಿಮಿಷದ ವೈರಲ್ ವಿಡಿಯೋ: ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ

    19 ನಿಮಿಷದ ವೈರಲ್ ವಿಡಿಯೋ: ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ

    19 ನಿಮಿಷದ ವೈರಲ್ ವಿಡಿಯೋ ಇಂಟರ್‌ ನೆಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಆದರೆ ಇದನ್ನು ಸೈಬರ್ ಕ್ರೈಂ ಮಾಡುವವರು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ಕ್ಷೇತ್ರದ ಹೊಸ ಟೆಕ್ನಿಕ್ ಇದಾಗಿದ್ದು, ವೈರಲ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ.

    ಯಾವುದೋ ಗುಪ್ತ ಫೈಲ್ ಅಥವಾ ಸುರಕ್ಷಿತ ಇಮೇಲ್ ಅಟ್ಯಾಚ್‌ಮೆಂಟ್ ಅಲ್ಲ. ಬದಲಿಗೆ 19 ನಿಮಿಷದ ಅತ್ಯಂತ ಜನಪ್ರಿಯ ವಿಡಿಯೋ ನೋಡಿ ಎಂದು ಹೇಳಿ ಸುಳ್ಳು ಭರವಸೆ ನೀಡುವ ಒಂದು ಮೋಸದ ಲಿಂಕ್ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು.

    ಮನುಷ್ಯನ ಸ್ವಾಭಾವಿಕ ಕುತೂಹಲ ಮತ್ತು ಇತರರು ನೋಡುತ್ತಿರುವ ಆಸಕ್ತಿದಾಯಕ ವಿಷಯ ನಮ್ಮ ಕೈ ತಪ್ಪಬಾರದು ಎಂಬ ಮಾಸಿನಸ ಸ್ಥಿತಿಯನ್ನು ಬಳಕೆ ಮಾಡಿಕೊಂಡು ಸೈಬರ್ ಕ್ರೈಂ ಮಾಡಲಾಗುತ್ತಿದೆ. ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅದು ಸೀದಾ ವಾಟ್ಸಪ್ ಅಥವ ಟೆಲಿಗ್ರಾಂಗೆ ಕರೆದುಕೊಂಡು ಹೋಗುತ್ತದೆ.

    ಆದರೆ ಅಲ್ಲಿ ವಿಡಿಯೋ ಇರುವುದಿಲ್ಲ. ಬದಲಿಗೆ ಇದು ಒಂದು ಸೈಬರ್ ದಾಳಿಗೆ ಕಾರಣವಾಗುತ್ತದೆ. ಅಂತಿಮವಾಗಿ ಇದು ನಿಮ್ಮ ಮೊಬೈಲ್‌ನಲ್ಲಿ ಬ್ಯಾಂಕಿಂಗ್ ಉದ್ದೇಶಕ್ಕಾಗಿ ತಯಾರಿಸಿದ ಟ್ರೋಜನ್ (Trojan) ಅನ್ನು ಸ್ಥಾಪನೆ ಮಾಡುತ್ತದೆ.

    ಇದರ ಮುಖ್ಯ ಗುರಿ ಮೊಬೈಲ್ ಬಳಕೆದಾರರು. ವೈರಲ್ ವಿಡಿಯೋ ಆಸೆಗೆ ಬಿದ್ದು ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್‌ನ ಚಟುವಟಿಕೆಯನ್ನು ಗಮನಿಸಿ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಲು ಬೇಕಾದ ಅನುಮತಿಗಳನ್ನು ರಹಸ್ಯವಾಗಿ ಪಡೆಯಲಾಗುತ್ತದೆ.

    19 ನಿಮಿಷದ ವೈರಲ್ ವಿಡಿಯೋ ಹೆಸರಿನಲ್ಲಿ ಡಿಜಿಟಲ್ ಫಿಶಿಂಗ್ ಮತ್ತು ಸಾಮಾಜಿಕ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸೈಬರ್ ಅಪರಾಧಿಗಳು ಬಂದಿದ್ದು, ಆಕರ್ಷಕ ಕ್ಲಿಕ್‌ಬೈಟ್ ಟೈಟಲ್‌ಗಳನ್ನು ಬಳಸಿ ಜನರನ್ನು ಮೋಸದ ಲಿಂಕ್ ಮೂಲಕ ವಂಚಿಸುತ್ತಿದ್ದಾರೆ.

    ಸದ್ಯ ಭಾರೀ ಸುದ್ದಿಯಲ್ಲಿರುವ 19 ನಿಮಿಷದ ವೈರಲ್ ವಿಡಿಯೋ ಲಿಂಕ್ ಎಂಬ ಹೆಸರಿನ ಮೂಲಕ ಜನರನ್ನು ಆಕರ್ಷಿಸಲಾಗುತ್ತಿದೆ. ಜನರು ಯೋಚಿಸದೇ ಕ್ಲಿಕ್ ಮಾಡುವಂತೆ ಮಾಡಲಾಗುತ್ತದೆ. ಲಿಂಕ್ ಕ್ಲಿಕ್ ಮಾಡಿದ ನಂತರ ನಕಲಿ ಲ್ಯಾಂಡಿಂಗ್ ಪೇಜ್‌ಗಳ ಸರಣಿ ಬರುತ್ತದೆ. ಇದರಲ್ಲಿ ಜಾಹೀರಾತುಗಳು, ಮೋಸದ ಬಟನ್‌ಗಳು ಇರುತ್ತವೆ. ಬಳಕೆದಾರರು ಏನಾದರೂ ಕ್ಲಿಕ್ ಮಾಡಲೇಬೇಕಾದ ರೀತಿ ಇದನ್ನು ವಿನ್ಯಾಸ ಮಾಡಲಾಗಿದೆ.

    ಬಳಕೆದಾರರು ಒಮ್ಮೆ ಕ್ಲಿಕ್ ಮಾಡಿದ ಬಳಿಕ ಅಥವ ಅನುಮತಿ ನೀಡಿದ ಬಳಿಕ ವೀಡಿಯೊ ಪ್ಲೇಯರ್ ಎಂಬಂತೆ ಕಾಣುವ ಬಟನ್ ಒತ್ತಿದರೆ ಅವರಿಗೇ ತಿಳಿಯದಂತೆ Android ಬ್ಯಾಂಕಿಂಗ್ ಟ್ರೋಜನ್ ಅಥವಾ ಇನ್ಫೋಸ್ಟೀಲರ್ ಮಾಲ್‌ವೇರ್ ಸ್ಥಾಪನೆಯಾಗುತ್ತದೆ.  ಆದರೆ ಜನರು ವೀಡಿಯೊ ಆರಂಭವಾಗುತ್ತದೆ ಎಂದು ನಿರೀಕ್ಷೆ ಮಾಡುತ್ತಿರುತ್ತಾರೆ.

    ಬ್ಯಾಂಕಿಂಗ್ ಟ್ರೋಜನ್‌ನ ಸ್ಥಾಪನೆ ನಂತರ ಈ ಟ್ರೋಜನ್ ಸಂಪೂರ್ಣವಾಗಿ ನಿಮಗೆ ಅರಿವಿಲ್ಲದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ. ಬಳಕೆದಾರರು ಯಾವಾಗ ತಮ್ಮ ನಿಗದಿತ ಬ್ಯಾಂಕಿಂಗ್ ಆಪ್ ತೆರೆಯುತ್ತಾರೋ ಆಗ ಆ ಅಪ್ಲಿಕೇಶನ್ ನಕಲಿ ಲಾಗಿನ್ ಸ್ಕ್ರೀನ್ ತೋರಿಸುತ್ತದೆ. ಇದು ಎಷ್ಟು ನಿಖರವಾಗಿದೆ ಎಂದರೆ ಗುರುತಿಸುವುದು ಬಹಳ ಕಷ್ಟ.

    ಈ ನಕಲಿ ಸ್ಕ್ರೀನ್‌ನಲ್ಲಿ ಟೈಪ್ ಮಾಡಿದ ಎಲ್ಲ ಪಾಸ್‌ವರ್ಡ್, ಕಾರ್ಡ್ ಸಂಖ್ಯೆ, PIN ತಕ್ಷಣ ಸೈಬರ್ ಅಪರಾಧಿಯ ಸರ್ವರ್‌ಗೆ ರವಾನೆಯಾಗುತ್ತದೆ. ಇನ್ನೊಂದು ಅತ್ಯಂತ ಅಪಾಯಕಾರಿ ಅಂಶ ಎಂದರೆ ಇದು SMS ಸಂದೇಶಗಳನ್ನು ಕದ್ದಾಲಿಸುತ್ತದೆ.

    OTP ಅಥವಾ 2FA ಕೋಡ್‌ಗಳನ್ನೂ ಕದ್ದು ಬ್ಯಾಂಕಿನ ಎಲ್ಲ ಸುರಕ್ಷತಾ ವ್ಯವಸ್ಥೆಯನ್ನು ಮೀರಿ ನಿಮ್ಮ ಖಾತೆಗೆ ಲಾಗಿನ್ ಮಾಡುತ್ತದೆ. ಬದಲಾಗುತ್ತಿರುವ ಸೈಬರ್ ಅಪರಾಧದ ವ್ಯವಸ್ಥೆ ಹಣ ರಕ್ಷಣೆಗೆ ಬೆದರಿಕೆಯಾಗಿದೆ. ಯಾವುದೇ ಅನಧಿಕೃತ ಅಥವಾ ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಸದಾ ಎಚ್ಚರ ವಹಿಸಿ, ಕ್ಲಿಕ್ ಮಾಡದಿರಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search