ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಲವ್ ಜಿಹಾದ್’ ಆರೋಪದ ಗಂಭೀರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಹಣ ದೋಚಿದ ಆರೋಪ ಕೇಳಿಬಂದಿದೆ.
ಸಂತ್ರಸ್ತ ಯುವತಿಯು ಕಳೆದ ಮಾರ್ಚ್‌ನಲ್ಲಿಯೇ ಪೊಲೀಸರಿಗೆ ದೂರು ನೀಡಿದ್ದರೂ, ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ನ್ಯಾಯಕ್ಕಾಗಿ ಈಗ ಮಾಧ್ಯಮಗಳ ಮುಂದೆ ಬಂದಿದ್ದಾರೆ.
ಆರೋಪಿ ಉಸ್ಮಾನ್ ಸ್ನೇಹಿತರ ಮೂಲಕ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಯುವತಿಯು ಅನ್ಯಕೋಮಿನ ಕಾರಣಕ್ಕೆ ಪ್ರೀತಿಯನ್ನು ನಿರಾಕರಿಸಿದ್ದಾಗ, ಉಸ್ಮಾನ್ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಮತ್ತು ‘ಮತಾಂತರವಿಲ್ಲದೆ ಮದುವೆಯಾಗುತ್ತೇನೆ’ ಎಂದು ನಂಬಿಸಿ ಪ್ರೀತಿಗೆ ಒಪ್ಪಿಸಿದ್ದ.ಉಸ್ಮಾನ್ ಮಾತಿಗೆ ಮರುಳಾದ ಯುವತಿ, ಆತನೊಂದಿಗೆ ಸುಮಾರು ಒಂದೂವರೆ ವರ್ಷಗಳ ಕಾಲ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಳು
ಮದುವೆಗೆ ಷರತ್ತು: ‘ಮತಾಂತರಗೊಂಡರಷ್ಟೇ ಮದುವೆ’
ಯುವತಿಯು ಮದುವೆಯಾಗುವಂತೆ ಕೇಳಿದಾಗ, ಉಸ್ಮಾನ್ ಸಂಪೂರ್ಣವಾಗಿ ವರಸೆ ಬದಲಾಯಿಸಿದ್ದಾನೆ. “ಮತಾಂತರಗೊಂಡರಷ್ಟೇ ಮದುವೆ” ಎಂದು ಒತ್ತಾಯಿಸಿ, ಯುವತಿಗೆ ಮಾನಸಿಕ ಚಿತ್ರಹಿಂಸೆ ನೀಡಿದ್ದಾನೆ.ಆರೋಪಿ ಉಸ್ಮಾನ್, ವ್ಯಾಪಾರ ಮಾಡುವುದಾಗಿ ನಂಬಿಸಿ ಯುವತಿಯಿಂದ ಸುಮಾರು ₹12.2 ಲಕ್ಷ ನಗದು ಮತ್ತು ₹2 ಲಕ್ಷ ಬೆಲೆಬಾಳುವ ಚಿನ್ನಾಭರಣ (14.5 ಗ್ರಾಂ) ಪಡೆದು ವಂಚಿಸಿದ್ದಾನೆ.
ಯುವತಿಯ ಖಾಸಗಿ ಫೋಟೋಗಳನ್ನು ತೆಗೆದಿದ್ದ ಆರೋಪಿ, ಸಂಬಂಧ ಕಡಿತಗೊಳಿಸಲು ಯತ್ನಿಸಿದಾಗ ಆ ಫೋಟೋಗಳನ್ನು ಪಾಲಕರಿಗೆ ತೋರಿಸುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾನೆ.ಯುವತಿ ಮತಾಂತರಕ್ಕೆ ಒಪ್ಪದಿದ್ದಾಗ, ‘ದೆಹಲಿ ಪ್ರಕರಣದಂತೆ ತುಂಡು-ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇಡುತ್ತೇನೆ ಮತ್ತು ಇನ್ನೊಂದು ಮದುವೆ ಆಗುತ್ತೇನೆ’ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ,ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆಯಿಂದ ನೊಂದ ಯುವತಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಪೊಲೀಸರ ವಿರುದ್ಧ ಆರೋಪ
ಸಂತ್ರಸ್ತೆಯು ಮಾರ್ಚ್ ತಿಂಗಳಲ್ಲಿ ದೂರು ನೀಡಿದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ, ಯುವತಿ ಹೇಳಿದಂತೆ ಎಫ್‌ಐಆರ್ ದಾಖಲಿಸಿಲ್ಲ ಮತ್ತು ಸರಿಯಾದ ಚಾರ್ಜ್ ಶೀಟ್ (Charge Sheet) ಮಾಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಒತ್ತಾಯಿಸಿ ಸಂತ್ರಸ್ತೆ ಈಗ ಮಾಧ್ಯಮಗಳ ಮೊರೆ ಹೋಗಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಒಣ ಹವೆ ಮುಂದುವರಿಕೆ; ಸಿಲಿಕಾನ್ ಸಿಟಿಯಲ್ಲಿ ಮಂಜು-ಚಳಿ ಅಬ್ಬರ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


