Sunday, November 1, 2026
spot_img
More
    spot_img
    HomeLatest newsಉದ್ಯೋಗ ಆಧಾರ್ ಎಂದರೇನು?ಉದ್ಯೋಗ ಆಧಾರ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

    ಉದ್ಯೋಗ ಆಧಾರ್ ಎಂದರೇನು?ಉದ್ಯೋಗ ಆಧಾರ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

    ಬೆಂಗಳೂರು;ಆಧಾರ್ ಕಾರ್ಡ್ ಎಂಬುವುದು ಪ್ರಸ್ತುತ ಅತೀ ಅಗತ್ಯ ದಾಖಲೆಯಾಗಿದೆ,ಆಧಾರ್ ಕಾರ್ಡ್‌ನಂತೆಯೇ ಉದ್ಯೋಗ ಆಧಾರ್ ಎಂಬ ಇನ್ನೊಂದು ಕಾರ್ಡ್ ಇದೆ. ಬಹುಶಃ ಎಲ್ಲರಿಗೂ ಅದರ ಬಗ್ಗೆ ತಿಳಿದಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ (MSME) ಸಚಿವಾಲಯವು ನೀಡುವ ವಿಶಿಷ್ಠ ಗುರುತಿನ ಸಂಖ್ಯೆಯೇ ಉದ್ಯೋಗ ಆಧಾರ್ ಆಗಿದೆ.ಪ್ರಸ್ತುತ ಇದನ್ನು ಉದ್ಯೋಗ್ ಆಧಾರ್ ಎಂದು ಕರೆಯಲಾಗುತ್ತದೆ. ಇದನ್ನು ಉದ್ಯಮಿಗಳಿಗೆ ನೀಡಲಾಗುತ್ತದೆ. ಉದ್ಯೋಗ್ ಆಧಾರ್ ಅನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 2015 ರಲ್ಲಿ ಪ್ರಾರಂಭಿಸಿತು,ಕೇಂದ್ರ ಸರ್ಕಾರವು ಜುಲೈ 2020 ರಲ್ಲಿ, ಹಿಂದಿನ ಉದ್ಯೋಗ್ ಆಧಾರ್ ಅನ್ನು ಬದಲಿಸಲು MSME ಗಳಿಗಾಗಿ ಉದ್ಯೋಗ್ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಿತು,ಉದ್ಯಮ ನೋಂದಣಿಗಾಗಿ PAN ಸಂಖ್ಯೆ ಅಥವಾ GSTIN ಆಧರಿಸಿ ಎಂಟರ್‌ಪ್ರೈಸ್ ವಿವರಗಳನ್ನು ಪರಿಶೀಲಿಸಬಹುದು. ಇದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ (UIN) ಆಗಿದ್ದು ಇದನ್ನು ಉದ್ಯೋಗ ಆಧಾರ್ ಅಥವಾ ವ್ಯವಹಾರಗಳಿಗೆ ಆಧಾರ್, MSME ನೋಂದಣಿ, ಇತ್ಯಾದಿ ಎಂದು ಕರೆಯಲಾಗುತ್ತದೆ.

    ಉದ್ಯೋಗ ಆಧಾರ್‌ಗೆ ಬೇಕಾದ ದಾಖಲೆಗಳು,

    • ಆಧಾರ್ ಕಾರ್ಡ್
    • ಮಾಲೀಕರ ಹೆಸರು
    • ಉದ್ಯಮದ ಹೆಸರು
    • ಸಂಸ್ಥೆಯ ಬಗ್ಗೆ ಮಾಹಿತಿ
    • ಬ್ಯಾಂಕ್ ವಿವರ
    • ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಷನ್ ಕೋಡ್
    • ಉದ್ಯೋಗದಲ್ಲಿರುವ ವ್ಯಕ್ತಿಗಳ ಸಂಖ್ಯೆ
    • ಜಿಲ್ಲಾವಾರು ಎಷ್ಟು ಕೇಂದ್ರಗಳು ಇವೆ ಎಂಬ ಮಾಹಿತಿ
    • ಉದ್ಯಮ ಆರಂಭ ಮಾಡಿದ ದಿನಾಂಕ

    ಉದ್ಯೋಗ ಆಧಾರ್‌ನ ಪ್ರಯೋಜನಗಳು

    • ನಿಮ್ಮ ಸಂಸ್ಥೆಯನ್ನು ಎಂಎಸ್‌ಎಂಇ(MSME) ಆಗಿ ನೊಂದಾಯಿಸುವ ಪ್ರಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ.
    • ಸ್ವಘೋಷಣೆ ಸೌಲಭ್ಯ
    • ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ
    • ಸರಕಾರದ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ
    • ಒಂದಕ್ಕಿಂತ ಹೆಚ್ಚು ಉದ್ಯೋಗ್ ಆಧಾರ್ ಅರ್ಜಿಗಳನ್ನು ಸಲ್ಲಿಸಬಹುದು.
    • *ನೇರ ತೆರಿಗೆಯ ತೆರಿಗೆ ವಿನಾಯಿತಿಗೆ ಸಹಾಯ ಮಾಡುತ್ತದೆ
    • *ನೀವು ಕಡಿಮೆ ದರದಲ್ಲಿ ಬಡ್ಡಿಯನ್ನು ಪಡೆಯಬಹುದು
    • *ಪೇಟೆಂಟ್ ನೋಂದಣಿಯ ಸಂದರ್ಭದಲ್ಲಿ 50% ಅನುದಾನ ಲಭ್ಯವಿದೆ
    • *ISO ಪ್ರಮಾಣೀಕರಣದ ಮರುಪಾವತಿ

    ಉದ್ಯೋಗ ಆಧಾರ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

    ನೀವು ಉದ್ಯೋಗ ಆಧಾರ್ ಕಾರ್ಡ್‌ಗೆ ರಿಜಿಸ್ಟರ್ ಮಾಡುವ ಮೊದಲು ನಿಮ್ಮ ಕೈಯಲ್ಲಿ ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಮುಖ್ಯವಾಗಿದೆ. ನೀವು ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಮೊದಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿ.

    1.ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಆಧಾರ್ ಕಾರ್ಡ್ ವಿವರ ಭರ್ತಿ ಮಾಡಿ

    2: ಬಾಕ್ಸ್ ಮೇಲೆ ಚೆಕ್ ಮಾಡಿ ಮೌಲ್ಯೀಕರಿಸಿ ಮತ್ತು ರಚಿಸಿ OTP ಮೇಲೆ ಕ್ಲಿಕ್ ಮಾಡಿ

    3. OTP ಹಾಕಿದ ಬಳಿಕ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ

    4. ಅಗತ್ಯ ದಾಖಲೆಗಳನ್ನು ಹಾಕಿ, ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ

    ಹಂತ 5. ಸ್ಕ್ರೋಲ್ ಡೌನ್ ಮಾಡಿ, Submit ಮೇಲೆ ಕ್ಲಿಕ್ ಮಾಡಿ

    6. ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಇನ್ನೊಂದು ಒಟಿಪಿ ಬರಲಿದೆ

    7.ಒಟಿಪಿ ಹಾಕಿ Submit ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search