Monday, November 2, 2026
spot_img
More
    spot_img
    HomeTop Storyಅಕ್ರಮವಾಗಿ ರೈತರ ಜಮೀನು ಕಬಳಿಸಿದ ಮಠದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

    ಅಕ್ರಮವಾಗಿ ರೈತರ ಜಮೀನು ಕಬಳಿಸಿದ ಮಠದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

    ತೀರ್ಥಹಳ್ಳಿ: ಭೂಮಿಯ ವಿಚಾರದಲ್ಲಿ ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದವರು ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯವೆಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಆಲಗೇರಿ ಗ್ರಾಮಸ್ಥರು ಮಠದ ಸ್ವಾಮೀಜಿ ಹಾಗೂ ಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಆಗ್ರಹಿಸಿದರು.

    ಹೌದು, ದೀರ್ಘಕಾಲದಿಂದ ರೈತರ ಸಾಗುವಳಿ ಅನುಭವದಲ್ಲಿರುವ ಆಲಗೇರಿಯ ಸ.ನ.08ರ ತೋಟ, ಖುಷ್ಕಿ ಸಾಗುವಳಿ ಜಾಗ, ಮನೆ ಎಲ್ಲವು ( ಒಟ್ಟು 6.35 ಎಕರೆ) ನಮ್ಮದು ಎಂದು ಮಠದ ಸ್ವಾಮೀಜಿಗಳು ಹೇಳಿದ್ದಾರೆ. ಆದರೆ ಗ್ರಾಮಸ್ಥರು ನಮ್ಮ ಪೂರ್ವಜರು ಇದ್ದ ಈ ಜಾಗ, ನಾವು ಜೀವನ ಕಟ್ಟಿಕೊಂಡ ಜಾಗ, ನಾವೇ ಮನೆ ಕಟ್ಟಿದ ಜಾಗವನ್ನು ಇಂದು ನಮ್ಮದಲ್ಲ ಎಂದರೆ ಹೇಗೆ ಎಂದು ಮಠದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

    ಪಟ್ಟಣದ ತಾಲೂಕು ಕಚೇರಿ ಮುಂದೆ ʼರೈತರ ಭೂಮಿಯನ್ನು ಕಬಳಿಸುವ ಭೀಮನಕಟ್ಟೆ ಮಠಕ್ಕೆ ಧಿಕ್ಕಾರʼ, ʼಭೀಮನಕಟ್ಟೆ ಮಠದ ಕ್ರಿಮಿನಲ್‌ ಕೃತ್ಯಗಳ ವಿಚಾರಣೆ ನಡೆಯಲಿʼ, ʼಭೀಮನಕಟ್ಟೆ ಮಠದ ಸ್ವಾಮಿಯನ್ನು ಮತ್ತು ಏಜೆಂಟ್‌ನನ್ನು ಕೂಡಲೇ ಬದಲಾಯಿಸಿ ಮತ್ತು ಬಂಧಿಸಿʼ, ನಕಲಿ ದಾಖಲೆಯನ್ನು ಸೃಷ್ಟಿಸಿ ಭೀಮನಕಟ್ಟೆ ಮಠಕ್ಕೆ ನೆರವಾದ ಮೋಜಣಿ ಸಿಬ್ಬಂದಿಗಳನ್ನು ಬಂಧಿಸಿʼ ಹಾಗೂ ʼವಿಶೇಷ ತನಿಖಾ ತಂಡ ರಚಿಸಿ ಭೀಮನಸೇತು ಮುನಿವೃಂದ ಮಠದ ಹಗರಣಗಳ ತನಿಖೆ ನಡೆಸಬೇಕುʼ ಎಂಬ ಬರಹಗಳುಳ್ಳ ಬೋರ್ಡ್‌ಗಳನ್ನು ಹಿಡಿದು ಗ್ರಾಮಸ್ಥರು ಹೋರಾಟ ನಡೆಸಿದ್ದಾರೆ.

    ದೂರು ಪತ್ರದಲ್ಲಿ ಮಠದ ಸ್ವಾಮೀಜಿಗಳು, ಮಠದ ಏಜೆಂಟ್‌ ಸಾಗರ ಭಟ್ಟ, ಕಂದಾಯ ಇಲಾಖೆ ನೌಕರ ಸುನೀಲ್‌ ಮತ್ತು ಮೋಜಣಿ ಇಲಾಖೆಯ ವಿಜಯಲಕ್ಷ್ಮಿ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದ್ದಾರೆ. ಮುಖ್ಯಮಂತ್ರಿಗಳು, ಕಂದಾಯ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ದೂರು ಪತ್ರವನ್ನು ಬರೆದಿದ್ದಾರೆ. ಅಲ್ಲದೇ ಇದೇ ಮೊದಲೇನಲ್ಲ ಈ ಹಿಂದಿನಿಂದಲೂ ಮಠದಿಂದ ಇಂತಹ ಕೃತ್ಯಗಳು ನಡೆದಿದ್ದು, ದೂರನ್ನೂ ನೀಡಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಆರೋಪಿಸಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search