ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮತ್ತೆ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯಪಾಲ ರವಿ ಅವರು ಸಾಂಪ್ರದಾಯಿಕವಾಗಿ ಅಧಿವೇಶನ ಆರಂಭಿಕ ಭಾಷಣ ಮಾಡಲು ಸದನಕ್ಕೆ ಆಗಮಿಸಿದರು. ರಾಷ್ಟ್ರಗೀತೆ ಹಾಡಲು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಸ್ಪೀಕರ್ ಎಂ ಅಪ್ಪಾವು ಅವರಿಗೆ ಮನವಿ ಮಾಡಿದರು ಆದರೆ ಅವರು ನಿರಾಕರಿಸಿದರು ಎಂದು ರಾಜ್ಯಪಾಲರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಆರೋಪಿಸಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಇಂದು ಭಾರತ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಮತ್ತೊಮೆ ಅಪಮಾನ ಮಾಡಲಾಗಿದೆ. ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟಿರುವ ಮೊದಲ ಮೂಲಭೂತ ಕರ್ತವ್ಯವಾಗಿದೆ. ಇದನ್ನು ಎಲ್ಲಾ ರಾಜಕಿಯ ಪಕ್ಷಗಳು ಅನುಸರಿಸಬೇಕು ಎದು ಹೇಳಿದೆ.
ಇದರಿಂದ ಬೇಸರಗೊಂಡ ರಾಜ್ಯಪಾಲರು, ಇದು ತೀವ್ರ ಕಳವಳಕಾರಿ ವಿಷಯ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಂತಹ ನಿರ್ಲಜ್ಜ ಅಗೌರವದ ಪಕ್ಷವಾಗಬಾರದು ಎಂದು ತೀವ್ರ ದುಃಖದಲ್ಲಿ ಸದನದಿಂದ ನಿರ್ಗಮಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


