Monday, November 2, 2026
spot_img
More
    spot_img
    HomeBreaking Newsಸಾಂಪ್ರದಾಯಿಕ ಉತ್ತರ ಕರ್ನಾಟಕದ ಜೋಳದ ರೊಟ್ಟಿ;ಆರೋಗ್ಯಕರ ಮತ್ತು ರುಚಿಕರ ರೆಸಿಪಿ

    ಸಾಂಪ್ರದಾಯಿಕ ಉತ್ತರ ಕರ್ನಾಟಕದ ಜೋಳದ ರೊಟ್ಟಿ;ಆರೋಗ್ಯಕರ ಮತ್ತು ರುಚಿಕರ ರೆಸಿಪಿ

    ಜೋಳ ತಿಂದವ ಗಟ್ಟಿ’ ಎಂಬುದು ಹಳೆಯ ಗಾದೆ.ಜೋಳದ ರೊಟ್ಟಿ ಉತ್ತರ ಕರ್ನಾಟಕದ ಗ್ರಾಮೀಣ ಜೀವಿತದ ಪ್ರತೀಕವಾಗಿದೆ.ಉತ್ತರ ಉತ್ತರ ಕರ್ನಾಟಕದ ಭಾಗದಲ್ಲಿ ಜೋಳದ ರೊಟ್ಟಿ ತುಂಬಾನೇ ಫೇಮಸ್.ಜೋಳದ ರೊಟ್ಟಿ ರುಚಿ ಬಲ್ಲವನೇ ಬಲ್ಲ,ಜೋಳ (ಸೋರ್ಘಮ್) ಉತ್ತರ ಕರ್ನಾಟಕದ ಬಿಸಿಗಾಳಿಯ ಭೂಮಿಯಲ್ಲಿ ಬೆಳೆದ ಮುಖ್ಯ ಧಾನ್ಯವಾಗಿದೆ. ಇದು ಶಕ್ತಿ ಮತ್ತು ಆರೋಗ್ಯದ ಉಗಮವಾಗಿದೆ. ರೈತರು ತಮ್ಮ ದಿನವಿಡೀ ಕೆಲಸದ ನಂತರ ಬಿಸಿಬಿಸಿ ಜೋಳದ ರೊಟ್ಟಿಯನ್ನು ಎಣ್ಣೆಗಾಯಿ ಅಥವಾ , ಪುಡಿ ಚಟ್ನಿ ಜೊತೆಗೆ ಸವಿಯುವ ಮಜಾನೇ ಬೇರೆ.ಜೋಳದಲ್ಲಿ ಪ್ರತೀ 100ಗ್ರಾಂನಲ್ಲಿ 10-12 ಗ್ರಾಂನಷ್ಟು ಪ್ರೋಟೀನ್ ಇದ್ದು, ಇದು ಸ್ನಾಯುಗಳನ್ನು ಸರಿಪಡಿಸುವುದು ಮತ್ತು ಬೆಳವಣಿಗೆಗೆ ಸಹಕಾರಿ,ಜೋಳದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳು ಇದ್ದು, ಸಂಪೂರ್ಣ ಆರೋಗ್ಯ ಕಾಪಾಡಲು ಇದು ತುಂಬಾ ಸಹಕಾರಿ ಆಗಿರುವುದು.

    ಜೋಳದಲ್ಲಿ ನಾರಿನಾಂಶವು ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿ, ಕರುಳಿನ ಕ್ರಿಯೆ ನಿಯಂತ್ರಿಸುವುದು ಮತ್ತು ಆರೋಗ್ಯಕಾರಿ ತೂಕ ಕಾಪಾಡಲು ತುಂಬಾ ಒಳ್ಳೆಯದು.ಜೋಳದ ರೊಟ್ಟಿ ಇದೀಗ ಉತ್ತರ ಕರ್ನಾಟಕದ ಜನತೆಯ ಆಹಾರ ಮಾತ್ರವಲ್ಲ, ನಮ್ಮ ರಾಜ್ಯದ ಎಲ್ಲ ಭಾಗದವರ ಫೇವರಿಟ್‌ ಫುಡ್‌. ಅಷ್ಟೇ ಅಲ್ಲ, ಇಲ್ಲಿರುವ ಬೇರೆ ರಾಜ್ಯದವರೂ ಈ ರೊಟ್ಟಿ ತಿಂದು ಬಾಯಿ ಚಪ್ಪರಿಸುತ್ತಿದ್ದಾರೆ. ಅದಕ್ಕೇ ಬೆಂಗಳೂರಿನ ನಾನಾ ಭಾಗಗಳಲ್ಲಿ ಜೋಳದ ರೊಟ್ಟಿಯ ಹೋಟೆಲ್‌ಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ.ಜೋಳದ ರೊಟ್ಟಿ ಈಗ ಉತ್ತರ ಕರ್ನಾಟಕದವರ ಆಹಾರವಾಗಿ ಮಾತ್ರ ಉಳಿದಿಲ್ಲ, ಬದಲಿಗೆ ಎಲ್ಲರಿಗೂ ಇಷ್ಟವಾಗುವ ಆಹಾರದ ಲಿಸ್ಟಿಗೆ ಸೇರಿದೆ.ಜೋಳದ ರೊಟ್ಟಿ ಎಷ್ಟೇ ತಿಂದರೂ ಬೊಜ್ಜು ಬರಲ್ಲ.ದಿನದ ಮೂರು ಹೊತ್ತಿನಲ್ಲಿ ಎರಡು ಹೊತ್ತಾದರೂ ಜೋಳದ ರೊಟ್ಟಿಯಿಲ್ಲದೇ ಊಟ ಪೂರ್ಣಗೊಳ್ಳದು. ಜೋಳದ ರೊಟ್ಟಿ, ಈ ಭಾಗದ ಜನರ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆ ರೊಟ್ಟಿ ಬಡಿಯುವುದರ ಟಪ್-ಟಪ್ ಶಬ್ದವನ್ನು ದೂರದಿಂದಲೆ ಕೇಳಿಯೇ ಉತ್ತರ ಕನ್ನಡಿಗರ ಮನೆಯನ್ನುನಾವು ಗುರ್ತಿಸಬಹುದು.

    ಬೇಕಾಗುವ ಪದಾರ್ಥಗಳು:(Ingredients Required)

    ೧ ಕಪ್ ಜೋಳದ ಹಿಟ್ಟು , ೧.೨೫ ಕಪ್ ನೀರು, ೧/೨ ಟೀಸ್ಪೂನ್ ಅಡುಗೆ ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು, ಒಂದು ಕಾಟನ್ ಬಟ್ಟೆ ಮತ್ತು ಸ್ವಲ್ಪ ನೀರು

    ಜೋಳದ ರೊಟ್ಟಿ ತಯಾರಿಸುವ ವಿಧಾನ:(How to make Corn Roti)

    1.ಮೊದಲು, ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಜೋಳದ ಹಿಟ್ಟು, ಉಪ್ಪು ಮತ್ತು ಬಿಸಿ ನೀರು ಹಾಕಿ ಕುದಿಸಿ.

    2.ಕುದಿಯುವ ನೀರಿಗೆ ಜೋಳದ ಹಿಟ್ಟು ಸೇರಿಸಿ, ಒಮ್ಮೆ ಕೈಯಾಡಿಸಿ ಸ್ಟವ್ ಆಫ್ ಮಾಡಿ.

    3.ನಂತರ ಹಿಟ್ಟನ್ನು ಪೇಸ್ಟ್ ಆಗಿ ಮಿಶ್ರಣ ಮಾಡಿ. ಹಿಟ್ಟು ಜಿಗುಟಾಗಿದ್ದರೆ ಇನ್ನೂ ಸ್ವಲ್ಪ ಹಿಟ್ಟು ಸೇರಿಸಿ. ಇಲ್ಲದಿದ್ದರೆ, ಹಿಟ್ಟು ಗಟ್ಟಿಯಾಗಿದ್ದರೆ, ನಿಮ್ಮ ಕೈಗಳನ್ನು ಸ್ವಲ್ಪ ಒದ್ದೆ ಮಾಡಿ ಮತ್ತಷ್ಟು ಹಿಟ್ಟನ್ನು ಮಿಶ್ರಣ ಮಾಡಿ.

    4.ಬಿಸಿ ಆರಿದ ಮೇಲೆ ಕೈಗೆ ಹಿಟ್ಟು ಮುಟ್ಟಿಸಿ ಕೊಂಡು ಹಿಟ್ಟನ್ನು ಚೆನ್ನಾಗಿ ನಾದಿ.ಸ್ವಲ್ಪ ಒಣ ಹಿಟ್ಟನ್ನು ಮಧ್ಯದಲ್ಲಿ ಹಾಕಿ ಚೆನ್ನಾಗಿ ಒತ್ತಿರಿ. ಹೀಗೆ ಮಾಡುವುದರಿಂದ ಹಿಟ್ಟು ಮೃದುವಾಗುತ್ತದೆ.

    5.ಬಳಿಕ ರೊಟ್ಟಿ ಮಾಡುವಾಗ ಮಾಡುವಷ್ಟು ಸಣ್ಣ ಉಂಡೆಯನ್ನು ಮಾಡಿಕೊಂಡು ಅದಕ್ಕೆ ಒಣ ಹಿಟ್ಟು ಹಚ್ಚಿ ತಟ್ಟಬೇಕು.ಅಥವಾ ಲಟ್ಟಣಿಗೆಯಿಂದ ಲಟ್ಟಿಸಬಹುದು,ರೊಟ್ಟಿ ತಟ್ಟುವಾಗ ಅದನ್ನು ಅಂಟಿಕೊಳ್ಳದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.

    6.ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ.ಬಟ್ಟೆಯನ್ನು ನೀರಿನಲ್ಲಿ ಅದ್ದಿ ಇಡೀ ರೊಟ್ಟಿಯ ಮೇಲೆ ಮೆತ್ತಗೆ ಒತ್ತಿರಿ. ರೊಟ್ಟಿಯ ಮೇಲಿನ ನೀರು ಆರಿದ ಮೇಲೆ ರೊಟ್ಟಿಯನ್ನು ತಿರುಗಿಸಿ ಎರಡು ಬದಿ ಕಾಯಿಸಿ,


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search