Monday, November 2, 2026
spot_img
More
    spot_img
    HomeBreaking NewsHealth Tips;ಅಮೃತದಷ್ಟೇ ಶಕ್ತಿ ಹೊಂದಿರುವ ಅಮೃತ ಬಳ್ಳಿಯಮಹತ್ವ ಮತ್ತು ಆರೋಗ್ಯ ಪ್ರಯೋಜನಗಳು

    Health Tips;ಅಮೃತದಷ್ಟೇ ಶಕ್ತಿ ಹೊಂದಿರುವ ಅಮೃತ ಬಳ್ಳಿಯಮಹತ್ವ ಮತ್ತು ಆರೋಗ್ಯ ಪ್ರಯೋಜನಗಳು

    ಪುರಾತನ ಕಾಲದಿಂದಲೂ ಅಮೃತಬಳ್ಳಿಯನ್ನು ಆರ್ಯುವೇದದ ಔಷಧೀಯ ಪದ್ಧತಿಯಲ್ಲಿ ಬಳಿಸಿಕೊಂಡು ಬರಲಾಗುತ್ತಿದೆ. ಇದು ಅನೇಕ ರೋಗಗಳನ್ನು ಏಕಕಾಲದಲ್ಲಿ ನಿಯಂತ್ರಿಸಲು ಮತ್ತು ಗುಣಪಡಿಸಲು ಪರಿಣಾಮಕಾರಿಯಾಗುತ್ತಿತ್ತು. ಅಂತಹ ಒಂದು ಮೂಲಿಕೆಯೇ ಗಿಲೋಯ್. ಇದನ್ನು ಗುಡುಚಿ ಮತ್ತು ಅಮೃತಬಳ್ಳಿ ಎಂದೂ ಕರೆಯುತ್ತಾರೆ.ಅಮೃತ ಬಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.ಅಮೃತಬಳ್ಳಿಯ ಎಲೆ , ಕಾಂಡ, ಬೇರು ಎಲ್ಲವೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈಗ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯೆಂದರೆ ಜ್ವರ, ವೈರಲ್ ಫೀವರ್ ಇದರ ನಿವಾರಣೆಗೆ ಅಮೃತಬಳ್ಳಿ ರಾಮಬಾಣವಾಗಿ ಸಹಾಯ ಮಾಡುತ್ತದೆ. ಅಮೃತಬಳ್ಳಿ ಯಲ್ಲಿ ತಾಮ್ರ ಕಬ್ಬಿಣ ರಂಜಕ ಮತ್ತು ಕ್ಯಾಲ್ಸಿಯಂ ಮೆಗ್ನೀಷಿಯಂ ಮತ್ತು ಅನೇಕ ಗುಣಗಳು ಒಟ್ಟಾಗಿ ಎಲ್ಲಾ ರೀತಿಯ ಜ್ವರದಿಂದ ನಮ್ಮನ್ನು ದೂರ ಇಡಲು ಸಹಾಯ ಮಾಡುತ್ತದೆ.ಅಮೃತದಷ್ಟೇ ಶಕ್ತಿ ಹೊಂದಿರುವ ಅಮೃತ ಬಳ್ಳಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ತಿಳಿದುಕೊಳ್ಳಣ

    ಅಮೃತ ಬಳ್ಳಿಯ ಪ್ರಯೋಜನಗಳು(Benefits of Amrutha Balli)

    1.ಅಮೃತಬಳ್ಳಿ ಮತ್ತು ಹಸಿ ಶುಂಠಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ ಅರ್ಧಕ್ಕೆ ಇಳಿದ ಮೇಲೆ ಅದನ್ನು ಶೋಧಿಸಿ ಕುಡಿದರೆ ಸಂಧಿವಾತ ಮತ್ತು ಕಾಲುನೋವು ಗುಣವಾಗುತ್ತದೆ. (ಒಂದು ತಿಂಗಳ ಕಾಲ ಈ ಔಷಧಿಯ ಸೇವನೆ ಮಾಡಬೇಕು).

    2.ಅಮೃತ ಬಳ್ಳಿಯ ಪುಡಿ ಮತ್ತುಕಾಳು ಮೆಣಸಿನ ಪುಡಿಗಳನ್ನು ಹಾಕಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿದರೆ ಕೀಲು ನೋವು ನಿವಾರಣೆಯಾಗುತ್ತದೆ.

    3.ಅಮೃತಬಳ್ಳಿಯನ್ನು ಜಜ್ಜಿ ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದು ಅರ್ಧಲೋಟಕ್ಕೆ ಇಳಿದ ಮೇಲೆ ಅದಕ್ಕೆ ಅರ್ಧಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಸಂಧಿವಾತ, ಕಾಲು ಬೆರಳುಗಳಲ್ಲಿರುವ ನೋವು ನಿವಾರಣೆಯಾಗುತ್ತದೆ.

    4.ಅಮೃತ ಬಳ್ಳಿಯ ಪುಡಿ ಒಣಶುಂಠಿಯ ಪುಡಿ ಮತ್ತು ಹಿಪ್ಪಲಿಯ ಪುಡಿಯನ್ನು ಬೆರೆಸಿ ಕಷಾಯ ತಯಾರಿಸಿ, ಅದು ಅರ್ಧಕ್ಕೆ ಇಳಿದ ಮೇಲೆ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಸಲ ಕುಡಿದರೆ ಅಗ್ನಿಮಾಂದ್ಯ ಸಮಸ್ಯೆ ನಿವಾರಣೆಯಾಗುತ್ತದೆ.

    5.ಅಮೃತ ಬಳ್ಳಿ ಹಾಗೂ ತ್ರಿಫಲಾ ಪುಡಿ ಸೇರಿಸಿ ಕಷಾಯ ತಯಾರಿಸಿ, ಅದಕ್ಕೆ ಜೇನುತುಪ್ಪವನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದ ಜೊತೆ ಸೇರಿಸಿ ಸೇವನೆ ಮಾಡಿದರೆ ಮಲಬದ್ಧತೆಯ ಸಮಸ್ಯೆಯು ದೂರವಾಗುತ್ತದೆ.

    6.ಅಮೃತಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಶಂಖ ಪುಷ್ಪ ಹೂವುಗಳನ್ನು ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಬೆಚ್ಚಗಿನ ನೀರಿನಲ್ಲಿ ನೆನೆಸಿ ಅದನ್ನು ಹಿಂಡಿ ರಸವನ್ನು ನಲವತ್ತೈದು ದಿನಗಳ ಕಾಲ ಕುಡಿದರೆ ಹೃದಯದ ಆರೋಗ್ಯ ಸುಧಾರಣೆಯಾಗುತ್ತದೆ.

    7,ದಿನಕ್ಕೆ 3 ಬಾರಿ 10 – 20 ಮಿಲಿಯಷ್ಟು ಅಮೃತ ಬಳ್ಳಿಯ ಹಸಿ ರಸವನ್ನು ಸೇವಿಸಿದರೆ ಚರ್ಮ ರೋಗದಿಂದ ಮುಕ್ತಿ ದೊರೆಯುತ್ತದೆ. ಅಮೃತ ಬಳ್ಳಿ ಪುಡಿಗೆ ಶುಂಠಿ ಪುಡಿ ಮತ್ತು ಹಾಲು ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.

    8.ಅರ್ಧ ಚಮಚೆಯಷ್ಟು ಅಮೃತಬಳ್ಳಿ ಸತ್ವವನ್ನು ಬಿಸಿ ಹಾಲಿಗೆ ಸೇರಿಸಿ ಕುಡಿದರೆ ನಿಶ್ಯಕ್ತಿ ರಕ್ತಹೀನತೆ ನಿವಾರಣೆಯಾಗುತ್ತದೆ.

    9.ಜಜ್ಜಿದ ಅಮೃತಬಳ್ಳಿ ಮತ್ತು ಒಣದ್ರಾಕ್ಷಿಯನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧಕ್ಕೆ ಇಳಿದ ಮೇಲೆ ದಿನಕ್ಕೆ ಎರಡು ಸಲದಂತೆ ಎರಡು ವಾರ ಕಾಲ ಸೇವಿಸಿದರೆ ಕಾಮಾಲೆ ಮತ್ತು ಪಿತ್ತಾಶಯದ ತೊಂದರೆಗಳು ನಿವಾರಣೆಯಾಗುತ್ತದೆ.

    10.ಒಂದು ಲೋಟ ಹಾಲಿಗೆ ಅರ್ಧ ಚಮಚ ಅಮೃತಬಳ್ಳಿ ಸತ್ವವನ್ನು ಸೇರಿಸಿ ಕುಡಿಯುವುದರಿಂದ ಪುರುಷರ ವೀರ್ಯ ವೃದ್ಧಿಯಾಗುತ್ತದೆ.

    11.ಅಮೃತಬಳ್ಳಿಯ ರಸ, ಗೋಧಿ ಹುಲ್ಲಿನ ಜ್ಯೂಸ್, ತುಳಸಿ ಎಲೆಯ ರಸ, ಬೇವಿನ ಎಲೆ ರಸ ಇವುಗಳನ್ನು ಸೇರಿಸಿ ದಿನಕ್ಕೆ ಮೂರು ಸಲದಂತೆ ಒಂದು ತಿಂಗಳ ಕಾಲ ಸೇವಿಸಿದರೆ ಕ್ಯಾನ್ಸರ್ ರೋಗ ವಾಸಿಯಾಗುತ್ತದೆ.

    12.ಅಮೃತಬಳ್ಳಿಯ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ತಲೆನೋವು ನಿವಾರಣೆಯಾಗುತ್ತದೆ.



    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search