ಬೆಂಗಳೂರು: ಕೊವಿಡ್ ಅಲೆಗೆ ಕೊಚ್ಚಿಹೋದ ಮಧ್ಯಮ ವರ್ಗದ ಜನರ ಬದುಕು ಟ್ಯಾಕ್ಸ್ ಅಬ್ಬರದ ನಡುವೆ ನಿಧಾನವಾಗಿ ಸರಿ ಹೋಗುತ್ತಿರುವ ಸಮಯದಲ್ಲಿಯೇ ಇದೀಗ ಎಲ್ಲೆಡೆ ಮತ್ತೊಂದು ಮೆಗಾ ವೈರಸ್ ಆಗಮನದ ಸದ್ದು ಜೋರಾಗಿ ಕೇಳಿಬರುತ್ತಿದೆ.
ಹೌದು, ಕೊವಿಡ್ ಮಾದರಿಯಲ್ಲಿಯೇ ಇದೀಗ ಎಚ್ಎಂಪಿವಿ ಎಂಬ ಹೊಸ ವೈರಸ್ ಚೀನಾದಲ್ಲಿ ಜನಿಸಿದ್ದು, ವಿಶ್ವವ್ಯಾಪಿ ಹರಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚೀನಾದಲ್ಲಿ ವೈರಸ್ ಈಗಾಗಲೇ ಉಲ್ಬಣವಾಗಿದ್ದು, ಆಸ್ಪತ್ರೆಗಳಲ್ಲಿ ಜನರು ಸಾಲುಗಟ್ಟಿ ನಿಂತಿರುವುದನ್ನು ವಿಡಿಯೊಗಳಲ್ಲಿ ಕಾಣಬಹುದಾಗಿದೆ.
ಇಂತಹ ವೈರಸ್ ಇಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ನಗರದ ಎಂಟು ತಿಂಗಳ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ ಎನ್ನಲಾಗಿದ್ದು, ವಿಚಿತ್ರವೆಂದರೆ ಮಗುವಿನ ಮೆಡಿಕಲ್ ವರದಿ ಬರುವ ಮೊದಲೇ ಆರೋಗ್ಯ ಇಲಾಖೆಯ ಮಾರ್ಗಸೂಚಿ ಎಲ್ಲೆಡೆ ವೈರಲ್ ಆಗಿದೆ. ಅದೂ ಸಹ ಜನವರಿ 4ರಂದು ಮುನ್ನೆಚ್ಚರಿಕೆಯಿಂದ ಮಾಡಿಟ್ಟುಕೊಂಡಿದ್ದ ಮಾರ್ಗಸೂಚಿ.
ಕಳೆದ ಬಾರಿ ಕೊರೊನಾ ವೈರಸ್ ಬಂದಾಗಲೂ ಇದೇ ರೀತಿ ಬೆಂಗಳೂರಿನಲ್ಲಿಯೇ ಮೊದಲ ಕೇಸ್ ಪತ್ತೆಯಾಗಿತ್ತು. ಆದರೆ ಆಗ ತಿಂಗಳ ಬಳಿಕ ಕೇರಳ ರಾಜ್ಯ ಮಾರ್ಗಸೂಚಿಯನ್ನು ಪ್ರಕಟಿಸಿದ ಬಳಿಕ ಅದರನ್ನು ಅನುಸರಿಸಿದ್ದ ಕರ್ನಾಟಕ ಈ ಬಾರಿ ವೈರಸ್ ಪತ್ತೆಯಾಗುವ ಮುನ್ನವೇ ಮಾರ್ಗಸೂಚಿಯನ್ನು ತಯಾರಿಸಿ ಇಟ್ಟುಕೊಂಡಿರುವುದು ಇದಕ್ಕಾಗಿ ಸಿದ್ಧತೆಯನ್ನು ನಡೆಸಿಕೊಂಡಿರುವುದು ಎದ್ದು ಕಾಣುತ್ತಿದೆ, ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


