ರಾಕಿಂಗ್ ಸ್ಟಾರ್ ಯಶ್.. ಕ್ರಿಕೆಟ್ ಲೋಕಕ್ಕೆ ವಿರಾಟ್ ಕೊಹ್ಲಿ ಹೇಗೋ ಸದ್ಯ ಕನ್ನಡ ಚಿತ್ರರಂಗದ ಪಾಲಿಗೆ ಯಶ್. ಆರಂಭದಿಂದಲೂ ಹೊಸತನದ ಸಿನಿಮಾಗಳನ್ನು ನೀಡಬೇಕು, ಕನ್ನಡ ಚಿತ್ರರಂಗದತ್ತ ಎಲ್ಲರೂ ತಿರುಗಿ ನೋಡುವ ಹಾಗೆ ಮಾಡಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡು ಸಾಧಿಸಿ ಯಶಸ್ವಿಯಾದ ನಟ.
ಕನ್ನಡ ಚಿತ್ರರಂಗ ದೇಶದಾದ್ಯಂತ ಮತ್ತೆ ಸದ್ದು ಮಾಡುವಂತೆ ಮಾಡಿದ್ದು ಇದೇ ಯಶ್ ಕೆಜಿಎಫ್ ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಲೇಬೇಕು ಎಂದು ಹಿಡಿದ ಹಠ. ಕೆಜಿಎಫ್ ಚಿತ್ರ ಸರಣಿ ಮೂಲಕ ಬೃಹತ್ ಗೆಲುವು ಸಾಧಿಸಿದ ಯಶ್ ಬೇರೆ ನಟರ ರೀತಿ ಆತುರಕ್ಕೆ ಬಿದ್ದು ಮನಬಂದಂತೆ ಸಿನಿಮಾ ಮಾಡದೇ ಸಮಯ ತೆಗೆದುಕೊಂಡು ಟಾಕ್ಸಿಕ್ ಎಂಬ ಚಿತ್ರವನ್ನು ಘೋಷಿಸಿದ್ದಾರೆ. ಅದೇ ರೀತಿ ಅದಕ್ಕಾಗಿ ವಿಶೇಷ ತಾಲೀಮು ನಡೆಸಿದ್ದು, ಹೊಸ ತಂತ್ರಜ್ಞಾನಕ್ಕೆ ಸರಿ ಹೊಂದುವ ಹಾಗೆ ಹೇಗೆ ನಟಿಸಬೇಕು, ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಯಾವ ರೀತಿ ನಟನೆ ಮಾಡಬೇಕು ಎಂಬ ತರಬೇತಿ ಪಡೆದುಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಹೀಗೆ ಇಡೀ ದೇಶದ ಜನ ಭರವಸೆಯಿಂದ ಕಾಯುತ್ತಿರುವ ಟಾಕ್ಸಿಕ್ ಚಿತ್ರಕ್ಕಾಗಿ ಯಶ್ ಹಗಲಿರುಳೆನ್ನದೇ ಕಷ್ಟಪಟ್ಟು ದುಡಿಯುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಯಶ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಯಶ್ ಬೆಂಗಳೂರಿನಲ್ಲಿ ನಡೆಯುತ್ತಿರುವ ತಮ್ಮ ಮನೆಗೆ ಬಾರದೇ ಶೂಟಿಂಗ್ ಕ್ಯಾರಾವ್ಯಾನ್‌ನಲ್ಲೇ ಮಲಗುತ್ತಿದ್ದಾರೆ ಇದರಿಂದ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬರ್ಥದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ.
ಯಶ್ ಮನೆಗೆ ಹೋಗಿಲ್ಲ, ಆದ್ದರಿಂದ ದಾಂಪತ್ಯದಲ್ಲಿ ಬಿರುಕು ಮೂಡಿರಬಹುದು ಎಂದು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುವುದು ಎಷ್ಟು ಸರಿ? ಚಿತ್ರೀಕರಣಕ್ಕಾಗಿ ಕುಟುಂಬದವರನ್ನು ಬಿಟ್ಟು ಕಷ್ಟಪಡುತ್ತಿರುವ ಕಲಾವಿದನ ವೈಯಕ್ತಿಕ ಜೀವನದ ಕುರಿತು ಹುಸಿ ಸುದ್ದಿ ಹಬ್ಬಿಸುವುದು ನಿಜಕ್ಕೂ ಮೂರ್ಖತನದ ಪರಮಾವಧಿಯೇ ಸರಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


