2024ರ ಜನವರಿಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯ ದೀಪಿಕಾ ಎಂಬ ಶಿಕ್ಷಕಿಯ ಶವ ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ವಿಚಾರವಾಗಿ ದೀಪಿಕಾ ಕುಟುಂಬಸ್ಥರು ದೀಪಿಕಾ ಸಾಯುವ ಮುನ್ನ ಕೊನೆಯದಾಗಿ ಕರೆ ಮಾಡಿರುವ ಅದೇ ಗ್ರಾಮದ ನಿತೀಶ್ ಎಂಬುವವನ ವಿರುದ್ಧ ಕೊಲೆ ಮಾಡಿರುವ ಆರೋಪ ಮಾಡಿ ದೂರು ನೀಡಿದ್ದರು. ಅತ್ತ ನಿತೀಶ್ ದೀಪಿಕಾ ಶವ ಸಿಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ. ಬಳಿಕ ಅತನ ಬಂಧನವೂ ಆಗಿ ವಿಚಾರಣೆ ಬಳಿಕ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು.
ಹೀಗೆ ಪ್ರಕರಣದಲ್ಲಿ ಆರೋಪಿಯಾಗಿರುವ ನಿತಿಶ್‌ನ ತಂದೆ ನರಸಿಂಹಗೌಡ ಅವರ ಹತ್ಯೆ ನಡೆದಿದೆ. ಇಂದು ಬೆಳಗ್ಗೆ ಮನೆಯಿಂದ ಹೊರಟ ನರಸಿಂಹಗೌಡ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು, ಪುತ್ರ ನಿತೀಶ್ ಹಾಗೂ ಪತ್ನಿ ದೀಪಿಕಾ ಕುಟುಂಬದವರೇ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಮಗಳ ಕೊಲೆಯನ್ನು ನಾನು ಮಾಡಿದ್ದೇನೆ ಎಂದು ತಿಳಿದುಕೊಂಡು ಈ ಕೃತ್ಯ ಎಸಗಿದ್ದಾರೆ, ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ನ್ಯಾಯಾಲಯ ನನಗೆ ಶಿಕ್ಷೆ ಕೊಡಲಿದೆ, ನನ್ನ ತಂದೆಯ ಚಲನವಲನಗಳನ್ನು ತುಂಬಾ ದಿನಗಳಿಂದ ಗಮನಿಸಿ ನಮ್ಮಕ್ಕನ ಮದುವೆಗೆ ಐದು ದಿನ ಇರುವಾಗ ಈ ಕೆಲಸ ಮಾಡಿದ್ದಾರೆ ಎಂದು ನಿತೀಶ್ ಆರೋಪಿಸಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


