Friday, March 20, 2026
spot_img
More
    spot_img
    HomeCrimeಧರ್ಮಸ್ಥಳ: ಸೌಜನ್ಯ ಮನೆ ಬಳಿ ಯುಟ್ಯೂಬರ್ಸ್ ಮೇಲೆ ಪೈಪ್‌ನಿಂದ ಹಲ್ಲೆ!

    ಧರ್ಮಸ್ಥಳ: ಸೌಜನ್ಯ ಮನೆ ಬಳಿ ಯುಟ್ಯೂಬರ್ಸ್ ಮೇಲೆ ಪೈಪ್‌ನಿಂದ ಹಲ್ಲೆ!

    ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆಗಳ ಆರೋಪವನ್ನು ಮಾಡಿದ ಅನಾಮಿಕ ವ್ಯಕ್ತಿಯೋರ್ವ ದೂರು ದಾಖಲಿಸಿದ್ದು, ಸದ್ಯ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

    ಸಾಕ್ಷಿ ದೂರುದಾರ ತಾನೇ ಹೆಣಗಳನ್ನು ಹೂತಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದ ಕಾರಣ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದು, ಇಂದು ( ಆಗಸ್ಟ್‌ 6 ) ಎಂಟನೇ ದಿನದ ಉತ್ಖನನ ಕಾರ್ಯ ನಡೆದಿದೆ.

    ಇನ್ನು ಎಸ್‌ಐಟಿ ತನಿಖೆ ಆರಂಭವಾಗುತ್ತಿದ್ದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳೂ ಸಹ ಧರ್ಮಸ್ಥಳ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಕ್ಷಣ ಕ್ಷಣದ ಅಪ್‌ಡೇಟ್‌ಗಳನ್ನು ವೀಕ್ಷಕರಿಗೆ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ಅದೇ ರೀತಿ ಕರಾವಳಿ ಭಾಗದ ಜನಪ್ರಿಯ ಯಟ್ಯೂಬ್‌ ಚಾನೆಲ್‌ಗಳಾದ ಕುಡ್ಲ ರಾಂಪೇಜ್‌ ಹಾಗೂ ಯುನೈಟೆಡ್‌ ಮೀಡಿಯಾ ಕನ್ನಡ ಈ ಹಿಂದಿನಿಂದಲೂ ಈ ಪ್ರಕರಣದ ಕುರಿತ ವರದಿಗಳನ್ನು ಮಾಡುತ್ತಾ ಬಂದಿದ್ದವು.

    ಇದೇ ಚಾನೆಲ್‌ಗಳ ಸಿಬ್ಬಂದಿ ಸಹ ಎಸ್‌ಐಟಿ ತನಿಖೆ ವರದಿಗೆಂದು ಧರ್ಮಸ್ಥಳಕ್ಕೆ ಆಗಮಿಸಿದ್ದರು. ಇಂದು ಕೆಲ ಸ್ಥಳೀಯರು ಮಾಡುತ್ತಿದ್ದ ಈ ನಾಲ್ವರ ಮೇಲೆ ಹಲ್ಲೆ ನಡೆಸಿದ್ದು, ಕ್ಯಾಮೆರಾಗೂ ಹಾನಿ ಮಾಡಿದ್ದಾರೆ. ಸದ್ಯ ಇಬ್ಬರು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರು ಪೋಸ್ಟ್‌ ವರದಿಯ ಪ್ರಕಾರ ಈ ಘಟನೆ 2012ರಲ್ಲಿ ಅತ್ಯಾಚಾರವಾಗಿ ಕೊಲ್ಲಲ್ಪಟ್ಟಿದ್ದ ಸೌಜನ್ಯ ಮನೆ ಬಳಿ ನಡೆದಿದೆ ಎನ್ನಲಾಗಿದೆ. ಹಲ್ಲೆ ಮಾಡಿದವರು ದೊಡ್ಡ ಪೈಪ್‌ ಹಾಗೂಬ ಇತರೆ ವಸ್ತುಗಳನ್ನು ಹಿಡಿದು ಬಂದಿದ್ದರು ಎನ್ನಲಾಗಿದೆ.

    ಧರ್ಮಸ್ಥಳ: ಮತ್ತೆ ಎಸ್‌ಐಟಿ ಅಧಿಕಾರಿಗಳನ್ನು ಗುಡ್ಡ ಹತ್ತಿಸಿದ ಅನಾಮಿಕ; ಇಂದು ಎಷ್ಟು ಅಸ್ತಿಪಂಜರ?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading