ನವದೆಹಲಿ: ಭಾರತವು ಇಂದು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ನಿಜ. ಆದರೆ, ದೇಶದ ಜನರ ಶ್ರೀಮಂತಿಕೆಯನ್ನು ಅಳೆಯುವ ಜಿಡಿಪಿ ತಲಾದಾಯದ (GDP per capita) ವಿಚಾರಕ್ಕೆ ಬಂದರೆ ಭಾರತವು ಶ್ರೀಲಂಕಾದಂತಹ ನೆರೆರಾಷ್ಟ್ರಗಳಿಗಿಂತಲೂ ಹಿಂದೆ ಬಿದ್ದಿದೆ. ಬೃಹತ್ ಆರ್ಥಿಕತೆಗೂ ಮತ್ತು ಜನರ ನೈಜ ಶ್ರೀಮಂತಿಕೆಗೂ ಇರುವ ವ್ಯತ್ಯಾಸವನ್ನು ಈ ವರದಿ ಬಿಚ್ಚಿಡುತ್ತದೆ.
ದೊಡ್ಡ ದೇಶಗಳಿಗಿಂತ ಪುಟ್ಟ ರಾಷ್ಟ್ರಗಳೇ ನಂ.1
ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ ಎನಿಸಿಕೊಂಡಿರುವ ಅಮೆರಿಕ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರೆ, ಚೀನಾ 74ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅಚ್ಚರಿಯೆಂದರೆ, ಮಾಲ್ಡೀವ್ಸ್‌ನಂತಹ ಪುಟ್ಟ ದ್ವೀಪ ರಾಷ್ಟ್ರವೇ ಚೀನಾಗಿಂತ ಮೇಲಿನ ಸ್ಥಾನದಲ್ಲಿದೆ.
ಇದಕ್ಕೆ ಕಾರಣ ಜಿಡಿಪಿ ಪಿಪಿಪಿ (GDP PPP) ಲೆಕ್ಕಾಚಾರ. ಇಲ್ಲಿ ದೇಶದ ಒಟ್ಟು ಆದಾಯವನ್ನು ಅಲ್ಲಿನ ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ಹಾಗಾಗಿಯೇ, ಕಡಿಮೆ ಜನಸಂಖ್ಯೆ ಇರುವ ಪುಟ್ಟ ದೇಶಗಳು ಇಂದು ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಾಗಿ ಮಿಂಚುತ್ತಿವೆ.
ಲೀಕ್ಟನ್‌ಸ್ಟೇನ್: 2,01,112 $2.
ಸಿಂಗಾಪುರ್: 1,56,969$
ಲುಕ್ಸೆಂಬರ್ಗ್: 1,52,394 $4.
ಐರ್ಲೆಂಡ್:1,47,878$
ಕತಾರ್: 1,22,283 $6.
ನಾರ್ವೇ: 1,06,694$
ಸ್ವಿಟ್ಜರ್ಲ್ಯಾಂಡ್: 97,659 $8.
ಬ್ರೂನೇ ದಾರುಸ್ಸಲಂ: 94,472$
ಗಯಾನ: 94,189 $10.
ಅಮೆರಿಕ: 89,598$
ಲೀಕ್ಟನ್‌ಸ್ಟೇನ್: ನಂ.1 ಶ್ರೀಮಂತ ದೇಶವಾಗಿದ್ದು ಹೇಗೆ?
ಕೇವಲ 10 ಬಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ಈ ಪುಟ್ಟ ದೇಶ (ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಇದೆ) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇದರ ಯಶಸ್ಸಿನ ರಹಸ್ಯ ಇಲ್ಲಿದೆ:
ಇಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಅತ್ಯಧಿಕ ಮೌಲ್ಯದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.ಇಲ್ಲಿನ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಸೆಕ್ಟರ್ ಜಗತ್ತಿನಲ್ಲೇ ಅತ್ಯಂತ ಬಲಿಷ್ಠವಾಗಿದೆ.ದೇಶದ ಆದಾಯವು ಕಡಿಮೆ ಜನರ ನಡುವೆ ಹಂಚಿಕೆಯಾಗುವುದರಿಂದ ಪ್ರತಿಯೊಬ್ಬರ ಸರಾಸರಿ ಆದಾಯ ಗಗನಕ್ಕೇರಿದೆ.
ಒಂದು ದೇಶ ಎಷ್ಟು ದೊಡ್ಡದಿದೆ ಎನ್ನುವುದಕ್ಕಿಂತ, ಅಲ್ಲಿನ ಪ್ರತಿಯೊಬ್ಬ ಪ್ರಜೆಯ ಆದಾಯ ಎಷ್ಟಿದೆ ಎಂಬುದು ಆ ದೇಶದ ನೈಜ ಸಮೃದ್ಧಿಯನ್ನು ನಿರ್ಧರಿಸುತ್ತದೆ.
ಶ್ರೀಮಂತ ದೇಶ ಎಂದು ಹೇಗೆ ನಿರ್ಧರಿಸಲಾಗುತ್ತದೆ?
ಕೇವಲ ಒಟ್ಟು ಆಂತರಿಕ ಉತ್ಪನ್ನ (GDP) ದೇಶದ ಶ್ರೀಮಂತಿಕೆಯನ್ನು ಅಳೆಯಲು ಸಾಲದು. ಅದರ ಬದಲು ಈ ಕೆಳಗಿನ ಮಾನದಂಡಗಳನ್ನು ಬಳಸಲಾಗುತ್ತದೆ:
ತಲಾ ಜಿಡಿಪಿ (GDP per capita): ದೇಶದ ಒಟ್ಟು ಉತ್ಪನ್ನವನ್ನು ಅಲ್ಲಿನ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತ. ಜನಸಂಖ್ಯೆ ಕಡಿಮೆಯಿದ್ದಷ್ಟೂ ಆ ದೇಶ ಶ್ರೀಮಂತವಾಗಿ ಕಾಣುತ್ತದೆ.
ಖರೀದಿ ಸಾಮರ್ಥ್ಯದ ಸಮಾನತೆ (Purchasing Power Parity – PPP): ಇದು ಆ ದೇಶದ ಹಣದುಬ್ಬರ ಮತ್ತು ಅಲ್ಲಿನ ವಸ್ತುಗಳ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಜನರ ಜೀವನಮಟ್ಟವನ್ನು ಅಳೆಯುವ ನಿಖರ ವಿಧಾನವಾಗಿದೆ.
ಬೆಳ್ಳಿ ಬೆಲೆಯಲ್ಲಿ 1,800 ರೂ. ಇಳಿಕೆ: ಚಿನ್ನದ ದರವೂ ಅಗ್ಗ; ಗ್ರಾಹಕರಿಗೆ ಸಿಹಿ ಸುದ್ದಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


