ಈವರೆಗೆ ಮಹಿಳೆಯರಿಗಾಗಿ ಇದ್ದ ಗರ್ಭನಿರೋಧಕ ಮಾತ್ರೆಗಳು ಗಂಡಸರಿಗೂ ಬರುವ ಕಾಲ ಬಂದೇಬಿಟ್ಟಿದೆ. ಸದ್ಯ ಪುರುಷರಿಗೆ ಗರ್ಭನಿರೋಧಕ ಆಯ್ಕೆಗಳೆಂದರೆ ಕಾಂಡೋಮ್‌ಗಳು ಮತ್ತು ವ್ಯಾಸೆಕ್ಟಮಿ ಮಾತ್ರ. ಈಗ ಹೊಸ ಮಾತ್ರೆಗೆ ಅನುಮೋದನೆ ದೊರೆತರೆ, ಇದು ಈ ವರ್ಗದ ಮೊದಲ ಔಷಧವಾಗಲಿದೆ. ಈ ಕುರಿತ ಪ್ರಯೋಗದ ಮೊದಲ ಹಂತವು ಯಶಸ್ವಿಯಾಗಿದ್ದು, ಇನ್ನೆರಡು ಹಂತದ ಪರೀಕ್ಷೆ ನಡೆವುದು ಬಾಕಿ ಇದೆ.
ಗಂಡಸರಲ್ಲಿ ವೀರ್ಯ ಉತ್ಪಾದನೆ ತಡೆವ ಮಾತ್ರೆಯ ಪರೀಕ್ಷೆಯು 16 ಜನರಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಯಾವುದೇ ಅಡ್ಡ ಪರಿಣಾಮವಿಲ್ಲದೇ ಮೊದಲ ಹಂತ ಪಾಸಾಗಿದೆ. 15 ದಿನಗಳ ಕಾಲ ಅವರಿಗೆ ಊಟಕ್ಕಿಂತ ಮೊದಲು, ಊಟದ ಬಳಿಕ 10, 30, 90 ಮತ್ತು 180 ಎಂಜಿ ಮಾತ್ರೆ ಕೊಡಲಾಗಿದೆ. ಈ ವೇಳೆ ಹಾರ್ಮೋನ್, ಹೃದಯ ಬಡಿತ, ಕಿಡ್ನಿ, ಯಕೃತ್ ಮೇಲಿನ ಪರಿಣಾಮ, ಉರಿಯೂತ , ಲೈಂಗಿಕ ಆಸಕ್ತಿ, ಜೀವಕೋಶದ ಮೇಲಿನ ಪರಿಣಾಮಗಳನ್ನು ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಯಾವುದೇ ಅಡ್ಡ ಪರಿಣಾಮವೂ ಹೊರಹೊಮ್ಮಿಲ್ಲ ಎಂಬುದು ತಿಳಿದುಬಂದಿದೆ.
ಪುರುಷರ ಗರ್ಭನಿರೋಧಕ ಮಾತ್ರೆಯನ್ನು ‘ವೈಸಿಟಿ-529’ ಎಂದು ಹೆಸರಿಸಲಾಗಿದೆ. ಈ ಮಾತ್ರೆಯು ಪುರುಷರ ರೆಟಿನೊಯಿಕ್ ಆಮ್ಲದ ಸಂಕೇತವನ್ನು ದುರ್ಬಲಗೊಳಿಸುವ ಮೂಲಕ ವೀರ್ಯಾಣುಗಳ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. ಯೂನಿವರ್ಸಿಟಿ ಆಫ್ ಮಿನ್ನೇಸೋಟಾ ಕಾಲೇಜ್ ಆಫ್ ಫಾರ್ಮಸಿ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯವು ಯುವರ್‌ಚಾಯ್ಸ್ ಥೆರಪ್ಯೂಟಿಕ್ಸ್ ಸಹಯೋಗದೊಂದಿಗೆ ಈ ಮಾತ್ರೆ ಅಭಿವೃದ್ಧಿಪಡಿಸಿವೆ.
,ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರಿಗೆ ಶಾಕ್: ರಜೆ ಹಾಗೂ ವಾರದ ರಜೆ ರದ್ದು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


