‘ಕೊತ್ತಲವಾಡಿ’ ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿತ್ತು.ಆದರೆ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೆಲವೊಂದು ನೆಗೆಟಿವ್ ಅಂಶಗಳನ್ನು ಸಿನಿಮಾ ನೋಡಿದ ಪ್ರೇಕ್ಷಕರು ಹೇಳುತ್ತಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಮಾತನಾಡಿದ್ದಾರೆ. “ಎಲ್ಲರನ್ನು ಮೆಚ್ಚಿಸಲು ನಾವು ಸಿನಿಮಾ ಮಾಡೋಕೆ ಆಗಲ್ಲ. 4 ಅಡುಗೆ ಮಾಡಿದಾಗ ಎಲ್ಲವೂ ಎಲ್ಲರಿಗೂ ಇಷ್ಟವಾಗಲ್ಲ. ಒಬ್ಬರಿಗೆ ಇಷ್ಟವಾಗ್ಲಿಲ್ಲ ಅಂತ ತಕ್ಷಣಕ್ಕೆ ಮತ್ತೊಂದು ಮಾಡು ಕೊಡಬಹುದು. ಸಿನಿಮಾ ದಿಢೀರನೆ ಮಾಡುವುದಕ್ಕೆ ಆಗಲ್ಲ. ಮುಂದಿನ ದಿನಗಳಲ್ಲಿ ಯಾವುದನ್ನು ಸರಿಪಡಿಸಿಕೊಳ್ಳಬಹುದು ಎಂದು ನೋಡಿ ಒಳ್ಳೆ ಸಿನಿಮಾ ಮಾಡ್ತೀವಿ” ಎಂದಿದ್ದಾರೆ.
“ಯಶ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಬಂದವರಿಗೆ ಎಲ್ಲೋ ಒಂದು ಕಡೆ ನಿರಾಸೆಯಾಗಿರಬಹುದು. ಮೊನ್ನೆ ಎಲ್ಲೋ ಒಂದು ಕಡೆ ನೋಡಿದೆ. ಯಾರೋ ಒಬ್ಬರು ಮಾತಾಡುತ್ತಿದ್ದರು. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಮಾಡಬೇಕಿತ್ತು ಅಂತ ಅಂದರು. ಇಂತಹದ್ದೊಂದು ಒಪಿನಿಯನ್ ಬಂದಿದೆ. ನಾವೂ ಹೀಗೆ ಎಷ್ಟೋ ಸಾರಿ ಮಾತಾಡಿರುತ್ತೇವೆ. ಅದು ಬಿಟ್ಟರೆ ಮತ್ತೆಲ್ಲೂ ನೆಗೆಟಿವ್ ಕಮೆಂಟ್ ಬಂದಿಲ್ಲ. ಸಿನಿಮಾ ಆವರೇಜ್ ಆಗಿದೆ. ಆದರೆ, ಯಶ್ ಮನೆ ಸಿನಿಮಾ ಅಲ್ಲ ಅಂತ ಅನಿಸಿರಬಹುದು.” ಎಂದು ಪುಷ್ಪಾ ಅರುಣ್ ಕುಮಾರ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.
“ನಾನು ದುಡ್ಡು ಮಾಡಬೇಕು ಅಂತ ಇಲ್ಲಿಗೆ ಬಂದಿಲ್ಲ. ನನಗೆ ದುಡ್ಡು ಮಾಡುವ ಅವಶ್ಯಕತೆ ಈ ವಯಸ್ಸಿನಲ್ಲಿ ಇಲ್ಲ. ಜಾಸ್ತಿ ಬರಲಿ, ಕಮ್ಮಿ ಬರಲಿ ನಾನು ತಲೆ ಕೆಡಿಸಿಕೊಳ್ಳಲ್ಲ. ಸಿನ್ಮಾ ಬಜೆಟ್ ಬಗ್ಗೆ ಕೂಡ ಮಾತನಾಡಲ್ಲ, ಸಿನ್ಮಾ ಏನು ಕೇಳುತ್ತೋ ಎನ್ನುವನ್ನು ರಾಜಿಯಾಗದೇ ಕೊಟ್ಟಿದ್ದೇನೆ” ಎಂದು ಪುಷ್ಪಾ ವಿವರಿಸಿದ್ದಾರೆ.
,ನಾಗತ್ತೆ ನೆನೆದು ನಟ ಶಿವಣ್ಣ ಏನೆಲ್ಲ ಹೇಳಿದ್ದಾರೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


