Tuesday, September 22, 2026
spot_img
More
    spot_img
    HomeSportsCricketಸಿರಾಜ್‌ ಸಕ್ಸಸ್‌ ನೋಡಿ ಬುಮ್ರಾಗೆ ಶುರುವಾಯಿತು ಹೊಟ್ಟೆಕಿಚ್ಚು; ಈ ರೀತಿ ಅವಮಾನಿಸುವುದು ಎಷ್ಟು ಸರಿ?

    ಸಿರಾಜ್‌ ಸಕ್ಸಸ್‌ ನೋಡಿ ಬುಮ್ರಾಗೆ ಶುರುವಾಯಿತು ಹೊಟ್ಟೆಕಿಚ್ಚು; ಈ ರೀತಿ ಅವಮಾನಿಸುವುದು ಎಷ್ಟು ಸರಿ?

    ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಎರಡೂ ತಂಡಗಳೂ ತಲಾ ಎರಡು ಪಂದ್ಯಗಳಲ್ಲಿ ಗೆದ್ದಿದ್ದು, ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಸರಣಿ ಡ್ರಾ ಆಗಿದೆ.

    ಇನ್ನು ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ ಸುಲಭವಾಗಿ ಗೆಲ್ಲಲಿದೆ ಎಂಬ ಹಂತದಲ್ಲಿತ್ತು. ಆದರೆ ಮೊಹಮ್ಮದ್‌ ಸಿರಾಜ್‌ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಗೊಂಚಲನ್ನು ಪಡೆದುಕೊಂಡು ಇಂಗ್ಲೆಂಡ್‌ ತಂಡಕ್ಕೆ ಸೋಲನ್ನು ತಂದಿಟ್ಟರು.

    ಜತೆಗೆ ಪ್ರಸಿದ್ಧ್‌ ಕೃಷ್ಣ ಸಹ ಗೆಲುವಿಗೆ ಪ್ರಮುಖ ಕಾರಣರಾದರು. ಒಂದುವೇಳೆ ಈ ಇಬ್ಬರು ಬೌಲರ್‌ ಕೊಂಚ ಎಡವಿದ್ದರೂ 6 ರನ್‌ಗಳಿಂದ ಸೋತ ಇಂಗ್ಲೆಂಡ್‌ ಗೆಲುವಿನ ನಗೆ ಬೀರಿ ಸರಣಿಯನ್ನು ವಶಪಡಿಸಿಕೊಂಡುಬಿಟ್ಟಿರುತ್ತಿತ್ತು.

    ಈ ಒಂದು ಪಂದ್ಯ ಮಾತ್ರವಲ್ಲದೇ ಸಿರಾಜ್‌ ಸರಣಿಯುದ್ದಕ್ಕೂ ಉತ್ತಮ ಬೌಲಿಂಗ್‌ ಮಾಡಿ ತಂಡದ ಪರ ಸರಣಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎನಿಸಿಕೊಂಡರು.

    ಅತ್ತ ತಂಡದ ಮತ್ತೋರ್ವ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಆಡಿದ ಯಾವ ಪಂದ್ಯದಲ್ಲೂ ಭಾರತ ಈ ಸರಣಿಯಲ್ಲಿ ಗೆಲುವು ಸಾಧಿಸಿಲ್ಲ. ಅದರಲ್ಲೂ ಕೊನೆಯ ಪಂದ್ಯ ನಿರ್ಣಾಯಕವಾಗಿದ್ದರೂ ಬುಮ್ರಾ ಮಾತ್ರ ಕಣಕ್ಕಿಳಿಯಲಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಸಹ ಅಸಮಾಧಾನ ವ್ಯಕ್ತವಾಗಿವೆ.

    ಇದೇ ವೇಳೆ ಬುಮ್ರಾ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಒಂದೇ ಒಂದು ಪದವನ್ನೂ ಸಹ ಸಿರಾಜ್ ಬಗ್ಗೆ ಬರೆದುಕೊಳ್ಳದೇ ತಮ್ಮೊಳಗಿನ ಹೊಟ್ಟೆಕಿಚ್ಚನ್ನು ಹೊರಹಾಕಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಬುಮ್ರಾ ತನ್ನ ಫೋಟೊಗಳನ್ನು ಮಾತ್ರ ಹಂಚಿಕೊಂಡಿದ್ದು, ತಂಡದ ಇತರೆ ಆಟಗಾರರ ಬಗ್ಗೆ ಏನನ್ನೂ ಹಂಚಿಕೊಂಡಿಲ್ಲ. ವಿರಾಟ್ ಕೊಹ್ಲಿಯಂತಹ ದಿಗ್ಗಜ ಕ್ರಿಕೆಟಿಗರೇ ತಂಡದ ಆಟಗಾರರ ಶ್ರಮವನ್ನು ಹೊಗಳಿದ್ದರೆ, ಬುಮ್ರಾ ಮಾತ್ರ ಆಟಗಾರರ ಉತ್ತಮ ಪ್ರದರ್ಶನವನ್ನು ಕಡೆಗಣಿಸಿರುವುದು ಅಹಂ ಎಂದು ಟ್ರೋಲ್‌ ಮಾಡಲಾಗುತ್ತಿದೆ.

    ಆರ್‌ಬಿಐ : ಸಾಲಗಾರರಿಗೆ ಶುಭ ಸುದ್ದಿ RBI ರೆಪೋ ದರ ಯಥಾಸ್ಥಿತಿ 5.5% ಮುಂದುವರಿಕೆ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading