Friday, March 20, 2026
spot_img
More
    spot_img
    HomeStateDistrictಧರ್ಮಸ್ಥಳ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಹೆಣ ಹೂತಿದ್ದು ಒಬ್ಬನೇ ಅಲ್ಲ ನಾನೂ ಸಹಾಯ ಮಾಡಿದ್ದೆ ಎಂದು...

    ಧರ್ಮಸ್ಥಳ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಹೆಣ ಹೂತಿದ್ದು ಒಬ್ಬನೇ ಅಲ್ಲ ನಾನೂ ಸಹಾಯ ಮಾಡಿದ್ದೆ ಎಂದು ಬಂದ ಮತ್ತೊಬ್ಬ!

    ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆಗಳ ದೂರು ನೀಡಿದ್ದ ಅನಾಮಿಕ ವ್ಯಕ್ತಿ ತಾನೇ ಹಲವಾರು ಹೆಣಗಳನ್ನು ಹೂತಿದ್ದಾಗಿ ಹೇಳಿಕೊಂಡಿದ್ದ.

    ಆರಂಭದಲ್ಲಿ ಈತನ ದೂರಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಆತ ದೂರಿನಲ್ಲಿ ಹೆಣ ಹೂತಿದ್ದ ಜಾಗಗಳನ್ನು ತಾನು ತೋರಿಸಲು ಸಿದ್ಧನಿರುವುದಾಗಿ ತಿಳಿಸಿದ ಕಾರಣ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿತು.

    ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಆರೋಪವಿದ್ದ ಕಾರಣ ಮಹಿಳಾ ಆಯೋಗ ಆರೋಪವನ್ನು ಗಂಭೀರವಾಗಿ ಪರಿಗಣಿಸಿತು. ಪರಿಣಾಮ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸಲು ಆದೇಶಿಸಿತು.

    ಅದರಂತೆ ಸದ್ಯ ತನಿಖೆ ನಡೆಯುತ್ತಿದ್ದು, ಅನಾಮಿಕ 13 ಸ್ಥಳಗಳನ್ನು ಗುರುತಿಸಿ ಉತ್ಖನನ ಕಾರ್ಯ ಚಾಲ್ತಿಯಲ್ಲಿದೆ. ಪಾಯಿಂಟ್‌ 6ರಲ್ಲಿ ಅಸ್ತಿಪಂಜರ ಪತ್ತೆಯಾಗಿದ್ದು, ಪಾಯಿಂಟ್‌ 11ರ ಪಕ್ಕದಲ್ಲಿದ್ದ ಬಂಗ್ಲ ಗುಡ್ಡದಲ್ಲಿ ಮೂರು ಅಸ್ತಿಪಂಜರಗಳು ಪತ್ತೆಯಾಗಿವೆ.

    ಹೀಗೆ ಅಸ್ತಿಪಂಜರ ಸಿಕ್ಕ ಬಳಿಕ ಅನಾಮಿಕನತ್ತ ಎಲ್ಲರ ಚಿತ್ತ ನೆಟ್ಟಿದ್ದು, ಇದೀಗ ಮತ್ತೋರ್ವ ಅನಾಮಿಕ ಸಾಕ್ಷಿ ದೂರುದಾರನಿಗೆ ಹೆಣ ಹೂಳಲು ಸಹಾಯ ಮಾಡಿದ್ದೆ ಎಂದು ಎಸ್‌ಐಟಿ ಅಧಿಕಾರಿಗಳ ಮುಂದೆ ಬಂದಿದ್ದಾನೆ.

    ಈತನನ್ನೂ ಸಹ ತನಿಖಾ ಸ್ಥಳಕ್ಕೆ ಕರೆಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

    ಧರ್ಮಸ್ಥಳ: ಮತ್ತೆ ಎಸ್‌ಐಟಿ ಅಧಿಕಾರಿಗಳನ್ನು ಗುಡ್ಡ ಹತ್ತಿಸಿದ ಅನಾಮಿಕ; ಇಂದು ಎಷ್ಟು ಅಸ್ತಿಪಂಜರ?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    ಶಾಕಿಂಗ್! ಪ್ರತಿಭಾವಂತ ಕುಸ್ತಿಪಟುಗೆ ಗಲ್ಲು—ಇರಾನ್‌ನಲ್ಲಿ ಪ್ರತಿಭಟನೆಗೆ ಬೆಲೆ ಜೀವವೇ?

    “ಇರಾನ್ ಕುಸ್ತಿಪಟು ಶಿಕ್ಷೆ ಪ್ರಕರಣ” ಇದೀಗ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ 19 ವರ್ಷದ ಯುವ ಕುಸ್ತಿಪಟು ಸಲեհ್ ಮೊಹಮ್ಮದಿ ಗಲ್ಲಿಗೇರಿಸಲ್ಪಟ್ಟ ಘಟನೆ ಮಾನವ ಹಕ್ಕುಗಳ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ....

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading