Friday, May 15, 2026
spot_img
More
    spot_img
    HomeLatest news2022ರ ಬಳಿಕ ಸೆಪ್ಟೆಂಬರ್ 7,8ರಂದು ಅತಿದೀರ್ಘ ಪೂರ್ಣ ಚಂದ್ರಗ್ರಹಣ; ಯಾವ ಸಮಯಕ್ಕೆ ಸಂಭವಿಸಲಿದೆ ಗ್ರಹಣ?

    2022ರ ಬಳಿಕ ಸೆಪ್ಟೆಂಬರ್ 7,8ರಂದು ಅತಿದೀರ್ಘ ಪೂರ್ಣ ಚಂದ್ರಗ್ರಹಣ; ಯಾವ ಸಮಯಕ್ಕೆ ಸಂಭವಿಸಲಿದೆ ಗ್ರಹಣ?

    ಬೆಂಗಳೂರು: 2022ರ ಬಳಿಕ ಅತಿ ದೀರ್ಘ ಪೂರ್ಣ ಚಂದ್ರಗ್ರಹಣ ಸೆಪ್ಟೆಂಬರ್ 7 ಮತ್ತು 8ರ ಮಧ್ಯದ ರಾತ್ರಿ ಸಂಭವಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. 2018ರ ಚಂದ್ರಗ್ರಹಣದ ನಂತರ ದೇಶದ ಎಲ್ಲ ಭಾಗಗಳಲ್ಲಿಯೂ ಪೂರ್ಣ ಚಂದ್ರಗ್ರಹಣ ಕಾಣಸಿಗುವುದು ಇದೇ ಮೊದಲು ಎಂದು ಹೇಳಿದ್ದಾರೆ.

    ಮುಂದಿನ ಚಂದ್ರಗ್ರಹಣಕ್ಕಾಗಿ 2028ರ ಡಿಸೆಂಬರ್ 2031ರವರೆಗೆ ಕಾಯಬೇಕಾಗುತ್ತದೆ ಎಂದು ಖಗೋಳಶಾಸ್ತ್ರ ಸೊಸೈಟಿ ಆಫ್ ಇಂಡಿಯಾದ ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷೆ ಮತ್ತು ಪುಣೆಯ ರಾಷ್ಟ್ರೀಯ ರೇಡಿಯೋ ಖಗೋಳ ಭೌತಶಾಸ್ತ್ರ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ದಿವ್ಯಾ ಒಬೆರಾಯ್ ಹೇಳಿದ್ದಾರೆ.

    ‌ಸೆಪ್ಟೆಂಬರ್‌ 7ರಂದು ರಾತ್ರಿ 9:57ಕ್ಕೆ ಚಂದ್ರನು, ಭೂಮಿಯ ಗಾಢ ನೆರಳಾದ ಅಂಬಾ ಒಳಗೆ ಪ್ರವೇಶಿಸಲು ಆರಂಭಿಸುತ್ತದೆ, ಇದು ಪಾರ್ಶ್ವ ಚಂದ್ರಗ್ರಹಣದ ಆರಂಭ. ನಂತರ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಆವರಿಸಲ್ಪಡುತ್ತಾ, 11:01 ಕ್ಕೆ ಅದು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ.

    ಸಂಪೂರ್ಣ ಚಂದ್ರಗ್ರಹಣವು 82 ನಿಮಿಷಗಳವರೆಗೆ, ಅಂದರೆ ರಾತ್ರಿ 12:23ರವರೆಗೆ, ಮುಂದುವರಿದು ಬಳಿಕ ಚಂದ್ರನು ನಿಧಾನವಾಗಿ ಅಂಬ್ರಾದಿಂದ ಹೊರ ಬರಲಾರಂಭಿಸಿ, ಈ ಪಾರ್ಶ್ವ ಹಂತವು 1:26ರ ವರೆಗೆ ಮುಂದುವರಿಯುತ್ತದೆ. ಸೆ. 7 ರಂದು ರಾತ್ರಿ 9.57ಕ್ಕೆ ಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಬಹುದು ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ಮಾಜಿ ನಿರ್ದೆಶಕಿ ಬಿ.ಎಸ್. ಶೈಲಜಾ ಹೇಳಿದರು.

    ಧರ್ಮಸ್ಥಳ: ವಸಂತ್ ಗಿಳಿಯಾರ್ ವಿರುದ್ಧ ಒಡನಾಡಿ ಸ್ಟಾನ್ಲಿ ದೂರು

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading