ಮೈಸೂರು: ಸುಳ್ಳು ಆರೋಪ, ಆಧಾರ ರಹಿತ ಭಾಷಣ, ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ ನನ್ನ ಶಾಂತಿಯುತ ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಿರುವ ಉಡುಪಿ ಮೂಲದ ವಸಂತ ಗಿಳಿಯಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಡನಾಡಿ ಸೇವಾಸಂಸ್ಥೆ ನಿರ್ದೆಶಕ ಸ್ಟಾನ್ಲಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಸಂತ ಗಿಳಿಯಾರ್ ಅವರು ತಮ್ಮ ಭಾಷಣದಲ್ಲಿ ನನ್ನನ್ನು ಕ್ರೈಸ್ತ ಧರ್ಮದವನೆಂದು ಗುರುತಿಸಿದ್ದಾರೆ. ಹಿಂದೂ ಧರ್ಮ ಹಾಗೂ ದೇವ ಸ್ಥಾನವನ್ನು ಒಡೆಯಲು ಬಂದಿದ್ದಾನೆ ಎಂದು ಜಾಲತಾಣಗಳು, ಮಾಧ್ಯಮಗಳು, ಸಭೆಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ.
ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೋಮು ದ್ವೇಷ ಉಂಟು ಮಾಡುತ್ತಿದ್ದಾರೆ. ಸಮಾಜದ ಒಂದು ಭಾಗವನ್ನು ಎತ್ತಿಕಟ್ಟುತ್ತಿದ್ದಾರೆ, ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ ಜನರನ್ನು ಕೆಣಕುವಂತೆ ಮಾಡಿದ್ದು, ನನ್ನ ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸ್ಟಾನ್ಲಿ ಅವರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಸಂತ ಗಿಳಿಯಾರ್ ವಿರುದ್ಧ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸ್ಟಾನ್ಲಿ, ನಗರದ ಹೂಟಗಳ್ಳಿಯ ಒಡನಾಡಿ ಸೇವಾ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ನಿರ್ದೇಶಕರಲ್ಲಿ ಒಬ್ಬನಾಗಿ 35 ವರ್ಷಗಳಿಂದಲೂ ಮಹಿಳೆರು ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಕಾನೂನು ಪ್ರಕಾರವಾಗಿ ಹಾಗೂ ಸರ್ಕಾರಿ ಇಲಾಖೆಗಳ ಜೊತೆ ಸೇರಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು. ಬಹಳ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಸೌಜನ್ಯ ಎಂಬ ಅಪ್ರಾಪ್ತ ಹುಡುಗಿಯ ಅಪಹರಣ, ಅತ್ಯಾಚಾರ ಹಾಗೂ ಹತ್ಯೆಗೆ ಯಾವುದೇ ರೀತಿಯ ನ್ಯಾಯ ಲಭಿಸದೆ ಇರುವ ಕಾರಣ ಸಾಮಾಜಿಕ ಹೋರಾಟವೊಂದು ರಾಜ್ಯಾದ್ಯಂತ ನಡೆಯುತ್ತಿದೆ.
ಸ್ವಾಭಾವಿಕವಾಗಿಯೇ ಮಹಿಳಾ ಪರವಾದ ಒಡನಾಡಿ ಸಂಸ್ಥೆ ಹಾಗೂ ನಾನು ನೈತಿಕ ಹೊಣೆಗಾರಿಕೆಯೊಡನೆ ಆ ಬಾಲಕಿಗೆ ಸಿಗಬೇಕಾದ ನ್ಯಾಯಕ್ಕಾಗಿ ನಮ್ಮನ್ನು ತೊಡಗಿಸಿಕೊಂಡು ಸಂವಿಧಾನಾತ್ಮಕವಾದ ಹೋರಾಟವನ್ನು ನಡೆಸುತ್ತಾ ಬರುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ವಸಂತ ಗಿಳಿಯಾರ್ ಎಂಬವರು ಧರ್ಮದಂಗಲ್ ನಡೆಸಲು ಕಾರಣರಾಗುತ್ತಿದ್ದಾರೆ. ನನ್ನ ವಿರುದ್ಧ ಹಲವು ಬಾರಿ ವೈಯಕ್ತಿಕ ದ್ವೇಷ ಕಾರುತ್ತಿದ್ದಾರೆ. ಜಾಲತಾಣದಲ್ಲಿ ಹೇಳಿಕೆ ತಿರುಚಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ. ಎರಡು ಬಾರಿ ನೋಟಿಸ್ ಕಳುಹಿಸಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕಾರಣಕ್ಕೆ ಎಫ್‌ಐಆ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.
8% ಕ್ಕಿಂತ ಹೆಚ್ಚು ಬಡ್ಡಿ ನೀಡುತ್ತಿರುವ ಟಾಪ್ ಬ್ಯಾಂಕುಗಳು ಹೂಡಿಕೆ ಮಾಡುವ ಮುನ್ನ ತಿಳಿದುಕೊಳ್ಳಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


