ಹಿರಿಯ ನಾಗರಿಕರಿಗೆ ತಮ್ಮ ಉಳಿತಾಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಆಕರ್ಷಕ ಆದಾಯ ಗಳಿಸಲು, ಭಾರತದಲ್ಲಿನ ಸಣ್ಣ ಹಣಕಾಸು ಬ್ಯಾಂಕುಗಳು (Small Finance Banks) ಈಗಲೂ ವಿಶ್ವಾಸಾರ್ಹ ಆಯ್ಕೆಯಾಗಿವೆ. ಅವು ಸ್ಥಿರ ಠೇವಣಿಗಳ (Fixed Deposit FD) ಮೇಲೆ ಅತ್ಯಧಿಕ ಬಡ್ಡಿದರಗಳನ್ನು ನೀಡುತ್ತಿವೆ, ಇದರಿಂದಾಗಿ ಹಿರಿಯ ನಾಗರಿಕರು ತಮ್ಮ ಉಳಿತಾಯವನ್ನು ಗರಿಷ್ಠಗೊಳಿಸಲು ಅವಕಾಶ ಸಿಕ್ಕಿದೆ.
ಪ್ರಸ್ತುತ, ಆರು ಸಣ್ಣ ಹಣಕಾಸು ಬ್ಯಾಂಕುಗಳು ಶೇ. 8.5 ಮತ್ತು ಅದಕ್ಕಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ.ಹಲವು ಬ್ಯಾಂಕುಗಳಲ್ಲಿ 8% ಕ್ಕಿಂತಲೂ ಹೆಚ್ಚು ಬಡ್ಡಿದರ ಲಭ್ಯವಿದೆ.ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ಸಾಮಾನ್ಯರಿಗಿಂತ ಹೆಚ್ಚುವರಿ 0.50% ಬಡ್ಡಿ ನೀಡಲಾಗುತ್ತದೆ.ಕೆಲವು ಬ್ಯಾಂಕುಗಳು 80 ವರ್ಷ ದಾಟಿದವರನ್ನು ಸೂಪರ್ ಸೀನಿಯರ್ ಸಿಟಿಜನ್ಸ್ ಎಂದು ಪರಿಗಣಿಸಿ, ಹಿರಿಯ ನಾಗರಿಕರಿಗಿಂತಲೂ ಹೆಚ್ಚಿನ ಬಡ್ಡಿ ನೀಡುತ್ತವೆ.ಕೆಲ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನೀಡುವದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಇವರಿಗೆ ನೀಡುತ್ತವೆ.
ವಿವಿಧ ಬ್ಯಾಂಕುಗಳಲ್ಲಿ ಎಫ್ಡಿ ದರಗಳು ಎಷ್ಟಿವೆ ಎನ್ನುವ ಮಾಹಿತಿ ಇಲ್ಲಿದೆ:
ಸಣ್ಣ ಫೈನಾನ್ಸ್ ಬ್ಯಾಂಕ್ಗಳಲ್ಲಿ ಹಿರಿಯ ನಾಗರಿಕರಿಗೆ ಎಫ್ಡಿ ದರಗಳು (ಸೆಪ್ಟೆಂಬರ್ 2025)
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ 8.50 ಬಡ್ಡಿ (2-3 ವರ್ಷ)
ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.5 ಬಡ್ಡಿ (18 ತಿಂಗಳು)
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.40 ಬಡ್ಡಿ (5 ವರ್ಷ)
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ (3 ವರ್ಷದ ಠೇವಣಿ)
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 7.95 ಬಡ್ಡಿ (2 ವರ್ಷದ ಠೇವಣಿ)
ಇಎಸ್ಎಎಫ್, ಈಕ್ವಿಟಾಸ್, ಎಯು, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ: ಶೇ 7.25ರಿಂದ ಶೇ. 8.0 ಬಡ್ಡಿ
ಖಾಸಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಎಫ್ಡಿ ದರ
ಯೆಸ್ ಬ್ಯಾಂಕ್: ಶೇ. 7.75
ಐಡಿಎಫ್ಸಿ ಬ್ಯಅಂಕು: ಶೇ. 7.5 ಬಡ್ಡಿ
ಇಂಡಸ್ಇಂಡ್ ಬ್ಯಾಂಕು: ಶೇ. 7.5 ಬಡ್ಡಿ
ಆರ್ಬಿಎಲ್ ಬ್ಯಾಂಕು: ಶೇ. 7.7 ಬಡ್ಡಿ
ಬಂಧನ್ ಬ್ಯಾಂಕು: ಶೇ. 7.7 ಬಡ್ಡಿ
ಎಕ್ಸಿಸ್, ಎಚ್ಡಿಎಫ್ಸಿ, ಐಸಿಐಸಿಐ, ಕೋಟಕ್ ಮಹೀಂದ್ರ ಬ್ಯಾಂಕುಗಳಲ್ಲಿ ಶೇ. 7.1ರಿಂದ ಶೇ. 7.50ಯವರೆಗೆ ಬಡ್ಡಿ
ಸರ್ಕಾರಿ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಎಫ್ಡಿ ದರಗಳು
ಎಸ್ಬಿಐ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ. 7.1 ಬಡ್ಡಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 7.5 ಬಡ್ಡಿ
ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶೇ. 7.2ರಿಂದ ಶೇ. 7.25 ಬಡ್ಡಿ
ಕೆನರಾ ಬ್ಯಾಂಕು: ಶೇ. 7 ಬಡ್ಡಿ
ಮೆಟ್ರೋ ದರ ಏರಿಕೆಗೆ ತೇಜಸ್ವಿ ಸೂರ್ಯ ಆಕ್ರೋಶ: ಸರ್ಕಾರದ ವಿರುದ್ಧ ತೀವ್ರ ಟೀಕೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


