Monday, November 2, 2026
spot_img
More
    spot_img
    HomeStateDistrictಈ ವಯಸ್ಸಿನಲ್ಲಿ ನನಗೆ ಇದೆಲ್ಲ ಯಾಕೆ ಬೇಕಪ್ಪ ಎನಿಸಿಬಿಡ್ತು: ವೀರೇಂದ್ರ ಹೆಗ್ಗಡೆ

    ಈ ವಯಸ್ಸಿನಲ್ಲಿ ನನಗೆ ಇದೆಲ್ಲ ಯಾಕೆ ಬೇಕಪ್ಪ ಎನಿಸಿಬಿಡ್ತು: ವೀರೇಂದ್ರ ಹೆಗ್ಗಡೆ

    ಧರ್ಮಸ್ಥಳ: ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ದಾಖಲಿಸಿದ್ದ ದೂರಿನ ಆಧಾರದ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತಿದ್ದು, ಪ್ರಕರಣದ ತನಿಖೆ ಕುರಿತ ಯಾವುದೇ ವರದಿಯನ್ನೂ ಎಸ್‌ಐಟಿ ಈವರೆಗೂ ಸಲ್ಲಿಸಿಲ್ಲ.

    ಹೀಗಾಗಿ ಈ ಪ್ರಕರಣ ಭಾರೀ ಕುತೂಹಲ ಕೆರಳಿಸಿದ್ದು, ಯಾವುದು ಸತ್ಯ, ಯಾವುದು ಸುಳ್ಳು, ಯಾರು ಕಿಡಿಗೇಡಿಗಳು ಎಂಬುದು ಇನ್ನೂ ಬಯಲಾಗಬೇಕಿದೆ. ಒಂದೆಡೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಕೆಲವರು ಗಂಭೀರ ಆರೋಪ ಮಾಡುತ್ತಿದ್ದರೆ, ಮತ್ತೊಂದೆಡೆ ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಧರ್ಮಸ್ಥಳದ ಪರ ಯಾತ್ರೆ ಹಾಗೂ ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ.

    ಅದರಂತೆ ನಿನ್ನೆ ( ಸೆಪ್ಟೆಂಬರ್‌ 5 ) ಧರ್ಮಸ್ಥಳದಲ್ಲಿ ಹಿಂದೂ ಜಾಗೃತಿ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆ ಸಹ ಭಾಗವಹಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದ ಸಮಾವೇಶದಲ್ಲಿ ಅನೇಕ ಜನರು ಬಂದಿದ್ದ ಕಾರಣ ತನಗೆ ಸೋಂಕು ತಗುಲಿದ್ದು, ಎರಡು ದಿನಗಳ ಕಾಲ ಜ್ವರ ಬಂದಿತ್ತು, ಆದರೆ ಇಲ್ಲಿಗೆ ಒಳಗೆ ಬರುವಾಗ ನಿಮ್ಮೆಲ್ಲರ ನಗು ನೋಡಿ ನಾನು ಎಲ್ಲವನ್ನೂ ಮರೆತೆ, ಇವರೂ ಸಹ ನಮ್ಮ ಹಾಗೆ ಯಾವುದೇ ಚಿಂತೆಯಲ್ಲಿಲ್ಲ ಎಂಬುದನ್ನು ನೋಡಿ ಬಹಳ ಸಂತೋಷವಾಯಿತು ಎಂದು ಹೇಳಿಕೊಂಡರು.

    ಹಾಗೆಯೇ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ತಮಗೆ ಪಟ್ಟಾಭಿಷೇಕ ನಡೆದ ದಿನವನ್ನೂ ಸಹ ವೀರೇಂದ್ರ ಹೆಗ್ಗಡೆ ನೆನಪಿಸಿಕೊಂಡರು. ಮೊದಲ ದಿನ ನನಗೇಕೆ ಈ ವಯಸ್ಸಿನಲ್ಲಿ ಬೇಕಿತ್ತು ಪಟ್ಟ ಎಂದು ಎನಿಸಿಬಿಟ್ಟಿತ್ತು. ನಾನು ಆಪೇಕ್ಷೆ ಪಟ್ಟು ಅಧಿಕಾರಕ್ಕೆ ಬಂದವನಲ್ಲ, ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ವಿರೋಧ ಎದುರಾಗಿತ್ತು, ನನಗೆ ಅತಿದೊಡ್ಡ ವಿದ್ಯಾಭ್ಯಾಸವಾಗಿತ್ತು. ಏಕೆಂದರೆ ಆಗಲೇ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದ್ದವು.

    ಧರ್ಮಸ್ಥಳ: ವಸಂತ್ ಗಿಳಿಯಾರ್ ವಿರುದ್ಧ ಒಡನಾಡಿ ಸ್ಟಾನ್ಲಿ ದೂರು

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search