Sunday, September 20, 2026
spot_img
More
    spot_img
    HomeSportsCricketಹೊಸ ಕ್ರಿಕೆಟ್‌ ರೂಲ್ಸ್:‌ ಸಿಕ್ಸ್‌ ಬಾರಿಸಿದ ಬಾಲ್‌ ಪ್ರೇಕ್ಷಕರಿಗೆ ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬಹುದು!

    ಹೊಸ ಕ್ರಿಕೆಟ್‌ ರೂಲ್ಸ್:‌ ಸಿಕ್ಸ್‌ ಬಾರಿಸಿದ ಬಾಲ್‌ ಪ್ರೇಕ್ಷಕರಿಗೆ ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬಹುದು!

    ಕ್ರಿಕೆಟ್‌ನಲ್ಲಿ ಐಸಿಸಿ ನಿಯಮಗಳು ಕಠಿಣ ಹಾಗೂ ಆಟವನ್ನು ನಿಷ್ಠೆಯಿಂದ ಇರಿಸುವ ಕಡೆ ಗಮನ ಹರಿಸಿದರೆ, ಫ್ರಾಂಚೈಸಿ ಕ್ರಿಕೆಟ್‌ ಲೀಗ್‌ಗಳು ಮಾತ್ರ ಜನಪ್ರಿಯತೆಗಾಗಿ ಹೊಸ ಹೊಸ ನಿಯಮಗಳನ್ನು ಪರಿಚಯಿಸುತ್ತಲೇ ಇವೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಜಾರಿಗೆ ತಂದದ್ದು ಇದಕ್ಕೆ ಉತ್ತಮ ಉದಾಹರಣೆ.

    Advertisement

    ಅದೇ ರೀತಿ ಇದೀಗ ಕ್ರಿಕೆಟ್‌ ಆಸ್ಟ್ರೇಲಿಯಾ ಹೊಸದೊಂದು ನಿಯಮವನ್ನು ಜಾರಿಗೆ ತಂದಿದ್ದು, ಆಟಗಾರರು ಸಿಕ್ಸರ್‌ ಬಾರಿಸಿ ಆ ಚೆಂಡು ಪ್ರೇಕ್ಷಕರ ಬಳಿ ಹೋದರೆ ಯಾರು ಚೆಂಡನ್ನು ಪಡೆಯುತ್ತಾರೋ ಅವರೇ ಆ ಚೆಂಡನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಹೇಳಿದೆ.

    ಅಂದಹಾಗೆ ಇದು ಬಿಗ್‌ಬ್ಯಾಷ್‌ ಲೀಗ್‌ ಟೂರ್ನಿಗೆ ಮಾತ್ರ ಅನ್ವಯವಾಗಲಿದ್ದು, ಪುರುಷರ ಹಾಗೂ ವನಿತೆಯರ ಬಿಗ್‌ಬ್ಯಾಷ್‌ ಲೀಗ್‌ ಎರಡರಲ್ಲೂ ಈ ನಿಯಮ ಇರಲಿದೆ. ಆದರೆ ಪ್ರತಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮಾತ್ರ ಈ ನಿಯಮ ಇರಲಿದೆ. ಈ ಮೂಲಕ ಮೊದಲ ಓವರ್‌ನಲ್ಲಿ ಸಿಕ್ಸರ್‌ ಬಾರಿಸಿದಾಗ ಮಾತ್ರ ಈ ಸವಲತ್ತು ಪ್ರೇಕ್ಷಕರಿಗೆ ಸಿಗಲಿದೆ. ಇನ್ನು ಮೊದಲ ಓವರ್‌ನಲ್ಲಿ ಸಿಕ್ಸರ್‌ ಬಾರಿಸಿ ಆ ಚೆಂಡನ್ನು ಪ್ರೇಕ್ಷಕರು ಪಡೆದುಕೊಂಡರೆ, ಉಳಿದ ಪಂದ್ಯಕ್ಕೆ ಬೇರೆ ಚೆಂಡನ್ನು ಬಳಸಲಾಗುವುದು ಎಂದೂ ಸಹ ಸ್ಪಷ್ಟನೆ ನೀಡಲಾಗಿದೆ.

    ಪುರುಷರ ಬಿಗ್‌ಬ್ಯಾಷ್‌ ಲೀಗ್‌ ಇದೇ ಡಿಸೆಂಬರ್‌ 14ರಂದು ಶುರುವಾಗಲಿದ್ದು, ವನಿತೆಯರ ಬಿಗ್‌ಬ್ಯಾಷ್‌ ಲೀಗ್‌ ಇದೇ ನವೆಂಬರ್‌ 9ರಿಂದ ಆರಂಭವಾಗಲಿದೆ. ಇದೇ ಭಾನುವಾರದಿಂದ ವನಿತೆಯರ ಬಿಗ್‌ಬ್ಯಾಷ್‌ ಲೀಗ್‌ ಶುರುವಾಗುತ್ತಿದ್ದು, ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾರಿಯಾಗುತ್ತಿರುವ ಈ ನಿಯಮದಡಿಯಲ್ಲಿ ಮೊದಲ ಚೆಂಡನ್ನು ಯಾರು ಮನೆಗೆ ಕೊಂಡೊಯ್ಯಲಿದ್ದಾರೆ ನೋಡಬೇಕಿದೆ.

    ಚಿನ್ನಯ್ಯ ಹೇಳಿದ್ದು ಬಿಡಿ, ಸರಿಯಾಗಿ ತನಿಖೆ ಮಾಡಿ; ಧರ್ಮಸ್ಥಳ ಪ್ರಕರಣಕ್ಕೆ ಮಹಿಳಾ ಆಯೋಗ ಖಡಕ್‌ ಎಂಟ್ರಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading