ಸತತ ಎರಡು ದಿನಗಳ ಇಳಿಕೆಯ ನಂತರ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಗುರುವಾರ, ನವೆಂಬರ್ 6, 2025) ಏರಿಕೆ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹40 ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನದ ದರವು ₹1,11,750 ತಲುಪಿದೆ.
ಅದೇ ರೀತಿ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ₹1,21,910 ಆಗಿದೆ. ಬೆಳ್ಳಿ ದರವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, 100 ಗ್ರಾಂ ಬೆಳ್ಳಿಯ ಬೆಲೆ ₹15,150 ಇದೆ. ಬೆಂಗಳೂರಿನಲ್ಲೂ ದರಗಳು ಇದೇ ಮಟ್ಟದಲ್ಲಿದ್ದು, ಕೆಲವೆಡೆ (ತಮಿಳುನಾಡು, ಕೇರಳ) ಬೆಳ್ಳಿ ದರವು 100 ಗ್ರಾಂಗೆ ₹16,400 ರಷ್ಟಿದೆ. ವಿದೇಶಿ ಮಾರುಕಟ್ಟೆಯಲ್ಲೂ ಅಲ್ಪ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಇಂದಿನ ದರ ಏರಿಕೆಯನ್ನು ಗಮನಿಸಬೇಕಿದೆ.
ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 6ಕ್ಕೆ)
| ಪ್ರಕಾರ | ಬೆಲೆ (ರೂ.) |
|---|---|
| 24 ಕ್ಯಾರಟ್ ಚಿನ್ನ | 12,191 |
| 22 ಕ್ಯಾರಟ್ ಚಿನ್ನ | 11,175 |
| 18 ಕ್ಯಾರಟ್ ಚಿನ್ನ | 9,143 |
| ಬೆಳ್ಳಿ | 151.50 |
| ನಗರ | ಬೆಲೆ (ರೂ.) |
|---|---|
| ಬೆಂಗಳೂರು | 11,175 |
| ಚೆನ್ನೈ | 11,250 |
| ಮುಂಬೈ | 11,175 |
| ದೆಹಲಿ | 11,190 |
| ಕೋಲ್ಕತಾ | 11,175 |
| ಕೇರಳ | 11,175 |
| ಅಹ್ಮದಾಬಾದ್ | 11,180 |
| ಜೈಪುರ್ | 11,190 |
| ಲಕ್ನೋ | 11,190 |
| ಭುವನೇಶ್ವರ್ | 11,175 |
ಬೆಳ್ಳಿ ದರ
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 151.50 ರೂ. ಇದ್ದರೆ, 8 ಗ್ರಾಂಗೆ 1,212 ಹಾಗೂ 10 ಗ್ರಾಂಗೆ 1,515 ರೂ. ಮತ್ತು 1 ಕೆಜಿಗೆ 1,51,500 ರೂ. ಇದೆ.
200 ಗ್ರಾಂ ಚಿನ್ನಾಭರಣ ಕಳುವು: ಆಹ್ವಾನ ಪತ್ರಿಕೆ ನೆಪದಲ್ಲಿ ದರೋಡೆಕೋರ ದಂಪತಿಯ ಕೃತ್ಯ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


