ನಿಮ್ಮ ಆತ್ಮೀಯರಂತೆ, ದೂರದ ಸಂಬಂಧಿಗಳಂತೆ, ಅಥವಾ ಹಳೆಯ ಪರಿಚಯಸ್ಥರಂತೆ ನಟಿಸಿ ಲಗ್ನ ಪತ್ರಿಕೆ ಹಿಡಿದು ಈ ಗ್ಯಾಂಗ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ‘ಆಶೀರ್ವಾದವೇ ಉಡುಗೊರೆ, ಬಂದು ಹರಸಿ’ ಎಂದು ಅತ್ಯಂತ ವಿನಯದಿಂದ ಆಹ್ವಾನಿಸುತ್ತಾರೆ.
ಅವರನ್ನು ಗುರುತಿಸಲಾಗದೆ ನೀವು ಗೊಂದಲಕ್ಕೀಡಾಗುತ್ತಿದ್ದಂತೆ, ಈ ಖತರ್ನಾಕ್ ಗ್ಯಾಂಗ್ ನಿಮ್ಮ ಮೇಲೆ ದಾಳಿ ಮಾಡಿ, ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡುತ್ತದೆ! ಇದು ಅವರ ಹೊಸ ತಂತ್ರ. ಇಂತಹ ‘ಲಗ್ನ ಪತ್ರಿಕೆ ದರೋಡೆ ಗ್ಯಾಂಗ್’ ಪ್ರಕರಣ ಇದೀಗ ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಬೆಳಕಿಗೆ ಬಂದಿದೆ.
ಅಪರಿಚಿತರು ಆಹ್ವಾನ ಪತ್ರಿಕೆ ಹಿಡಿದು ಬಂದರೆ, ತಕ್ಷಣ ಎಚ್ಚೆತ್ತುಕೊಳ್ಳಿ ಅವರನ್ನು ಗುರುತಿಸಲಾಗದೆ ನೀವು ಗೊಂದಲಕ್ಕೀಡಾಗುತ್ತಿದ್ದಂತೆ, ಈ ಖತರ್ನಾಕ್ ಗ್ಯಾಂಗ್ ನಿಮ್ಮ ಮೇಲೆ ದಾಳಿ ಮಾಡಿ, ಮನೆಯಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡುತ್ತದೆ! ಇದು ಅವರ ಹೊಸ ತಂತ್ರ. ಇಂತಹ ‘ಲಗ್ನ ಪತ್ರಿಕೆ ದರೋಡೆ ಗ್ಯಾಂಗ್’ ಪ್ರಕರಣ ಇದೀಗ ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಬೆಳಕಿಗೆ ಬಂದಿದೆ. ಅಪರಿಚಿತರು ಆಹ್ವಾನ ಪತ್ರಿಕೆ ಹಿಡಿದು ಬಂದರೆ, ತಕ್ಷಣ ಎಚ್ಚೆತ್ತುಕೊಳ್ಳಿ
ಘಟನೆ ನಡೆದಿದ್ದು ಹೇಗೆ?
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ಒಂದು ಆಘಾತಕಾರಿ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ರವಿಕುಮಾರ್ ಎಂಬ ಖಾಸಗಿ ಕಂಪನಿ ಉದ್ಯೋಗಿಯ ಮನೆಯಲ್ಲಿ ಬುಧವಾರ, ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದ ಖತರ್ನಾಕ್ ದಂಪತಿ ಮನೆಯೊಳಗೆ ನುಗ್ಗಿ ಸುಮಾರು 200 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ರವಿಕುಮಾರ್ ಅವರು ಕೆಲಸಕ್ಕೆ ಹೋದಾಗ, ಅವರ ಪತ್ನಿ ನಾಗವೇಣಿ ಮನೆಯಲ್ಲಿ ಒಬ್ಬರೇ ಇದ್ದರು.ದಂಪತಿ, ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಮನೆಗೆ ಬಂದಿದ್ದು, ಪರಿಚಯಸ್ಥರಂತೆ ನಟಿಸಿ ಒಳಗೆ ಪ್ರವೇಶಿಸಿದ್ದಾರೆ. ನಂತರ ಕುಡಿಯಲು ನೀರು ಕೇಳಿದ್ದಾರೆ.
ನಾಗವೇಣಿ ನೀರು ತರಲು ಅಡುಗೆ ಮನೆಗೆ ಹೋದಾಗ, ಪುರುಷ ಸದಸ್ಯ ಒಳನುಗ್ಗಿ ಅವರ ಕೈಕಾಲು ಕಟ್ಟಿ ಹಾಕಿ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ನಂತರ ಚಾಕು ಇಟ್ಟು ಬೆದರಿಸಿ ಬೀರುವಿನ ಲಾಕರ್ ಕೀ ಪಡೆದು ಕಳ್ಳತನ ಮಾಡಿದ್ದಾರೆ.
ಸುಮಾರು 200 ಗ್ರಾಂ ಚಿನ್ನಾಭರಣ ದೋಚಿದ ಜೋಡಿ ಪರಾರಿಯಾದ ನಂತರ, ನಾಗವೇಣಿ ಹೇಗೋ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ನೇಹಿತರು ಬಾಗಿಲು ತೆರೆದ ಬಳಿಕ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಮತ್ತು ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ‘ಲಗ್ನ ಪತ್ರಿಕೆ ಗ್ಯಾಂಗ್’ ಎಂಬ ಈ ಖತರ್ನಾಕ್ ಜೋಡಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


