ಅಡಿಲೇಡ್: ಇಲ್ಲಿನ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
ಈ ಪಿಂಕ್ ಬಾಲ್ ಹಗಲು – ರಾತ್ರಿ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 44.1 ಓವರ್‌ಗಳಲ್ಲಿ 180 ರನ್ ಗಳಿಸಿ ಆಲ್‌ಔಟ್ ಆಯಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 33 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಭಾರತ 94 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಪರ ಯಾವೊಬ್ಬ ಆಟಗಾರನೂ ಸಹ ಅರ್ಧಶತಕವನ್ನೂ ಬಾರಿಸಲಿಲ್ಲ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಪಡೆದು ಭಾರತದ ಪಾಲಿಗೆ ಕಂಟಕವಾಗಿ ಪರಿಣಮಿಸಿದರೆ, ಪ್ಯಾಟ್ ಕಮಿನ್ಸ್ ಹಾಗೂ ಬೋಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರು.
ಭಾರತದ ಮೊದಲ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಡಕ್‌ಔಟ್ ಆದರೆ, ಕೆಎಲ್ ರಾಹುಲ್ 37 ರನ್ ಗಳಿಸಿದರು. ಇನ್ನುಳಿದಂತೆ ಶುಭ್‌ಮನ್ ಗಿಲ್ 31, ವಿರಾಟ್ ಕೊಹ್ಲಿ 7, ರಿಷಭ್ ಪಂತ್ 21, ರೋಹಿತ್ ಶರ್ಮಾ 3, ನಿತಿಶ್ ರೆಡ್ಡಿ 42, ರವಿಚಂದ್ರನ್ ಅಶ್ವಿನ್ 22, ಹರ್ಷಿತ್ ರಾಣಾ ಡಕ್‌ಔಟ್, ಜಸ್‌ಪ್ರೀತ್ ಬುಮ್ರಾ ಡಕ್‌ಔಟ್ ಮತ್ತು ಮೊಹಮ್ಮದ್ ಸಿರಾಜ್ ಅಜೇಯ 4 ರನ್ ಕಲೆಹಾಕಿದರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: ತಂಡದ ಪರ ಉಸ್ಮಾನ್ ಖವಾಜಾ 13 ರನ್ ಕಲೆಹಾಕಿದರೆ, ನಾಥನ್ ಮೆಕ್‌ಸ್ವೀನಿ ಅಜೇಯ 38 ರನ್ ಮತ್ತು ಮಾರ್ನಸ್ ಲ್ಯಾಬುಶೆನ್ ಅಜೇಯ 20 ರನ್ ಗಳಿಸಿದರು.
ಭಾರತದ ಪರ ಜಸ್‌ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


