Thursday, September 24, 2026
spot_img
More
    spot_img
    HomeStateಶಿವಕುಮಾರ ಸ್ವಾಮೀಜಿ ಪ್ರತಿಮೆ ವಿಘ್ವಗೊಳಿಸಲು ಯೇಸು ಪ್ರೇರಣಯೇ ಕಾರಣ ಎಂದ ಅಪರಾಧಿ

    ಶಿವಕುಮಾರ ಸ್ವಾಮೀಜಿ ಪ್ರತಿಮೆ ವಿಘ್ವಗೊಳಿಸಲು ಯೇಸು ಪ್ರೇರಣಯೇ ಕಾರಣ ಎಂದ ಅಪರಾಧಿ

    ಬೆಂಗಳೂರು- ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜಿಗಳ ಪ್ರತಿಮೆ ವಿಘ್ನಗೊಳಿಸಲು ಯೇಸು ಕ್ರಿಸ್ತನ ಪ್ರೇರಣೆಯೇ ಕಾರಣ ಎಂದು ಆರೋಪಿ ಕೃಷ್ಣ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ನ. 30 ರಂದು ಡೆಲಿವರಿ ಬಾಯ್ ಆಗಿ ನಗರದಲ್ಲಿ ಕೆಲಸ ಮಾಡುತ್ತಿರುವ ಆಂಧ್ರ ಮೂಲದ 37 ವರ್ಷದ ಕೃಷ್ಣ ವೀರಭದ್ರನಗರದಲ್ಲಿದಲ್ಲಿರುವ ಶ್ರೀಗಳ ಪ್ರತಿಮೆಯನ್ನು ವಿಘ್ನಗೊಳಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಆತ ನನ್ನ ಈ ಕಾರ್ಯಕ್ಕೆ ಕನಸಿನಲ್ಲಿ ಯೇಸು ಕ್ರಿಸ್ತ ಬಂದು ಪ್ರತಿಮೆ ವಿಘ್ನ ಮಾಡುವಂತೆ ಪ್ರೇರಿಪಿಸಿದ್ದರಿಂದ ನಾನು ಆ ಕಾರ್ಯ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

    ಆಂಧ್ರಪ್ರದೇಶ ಮೂಲದ ಶ್ರೀಕಷ್ಣ ಎಂಬಾತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ತನ್ನ ಕನಸಿನಲ್ಲಿ ಯೇಸುಕ್ರಿಸ್ತನ ದರ್ಶನದಿಂದ ಪ್ರತಿಮೆಯನ್ನು ಧ್ವಂಸಗೊಳಿಸಲು ಪ್ರೇರೇಪಿಸಿರುವುದಾಗಿ ಹೇಳಿದ್ದಾರೆ. ಈ ವಿರೂಪತೆಯು ಪ್ರದೇಶದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿತು, ನಿವಾಸಿಗಳು ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಕೂಡಲೇ ಕಾರ್ಯಪ್ರವತ್ತರಾದ ಪೊಲೀಸರು ಕಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬೆಂಗಳೂರಿನ ಆರ್ಚ್‍ಬಿಷಪ್ ಡಾ.ಪೀಟರ್ ಮಚಾಡೊ ಅವರು ಆರೋಪಿಯ ಸಮರ್ಥನೆಯನ್ನು ಆಧಾರರಹಿತ ಮತ್ತು ಖಂಡನೀಯ ಎಂದು ಖಂಡಿಸಿದರು, ಕೋಮು ಪ್ರಚೋದನೆಯ ಪ್ರಯತ್ನಗಳಿಗೆ ಬಲಿಯಾಗದಂತೆ ಜನರನ್ನು ಒತ್ತಾಯಿಸಿದರು.

    ಇಂತಹ ಹೇಳಿಕೆಗಳ ಉದ್ದೇಶ ಕೇವಲ ಕೋಮು ಉದ್ವಿಗ್ನತೆ ಮತ್ತು ವೈಷಮ್ಯವನ್ನು ಹರಡುವುದು. ಶಾಂತಿ, ಸಹಾನುಭೂತಿ ಮತ್ತು ಜಾತ್ಯತೀತ ಮೌಲ್ಯಗಳ ಪ್ರತೀಕವಾಗಿದ್ದ ಶಿವಕುಮಾರ ಸ್ವಾಮೀಜಿಯಂತಹ ಮಹಾನ್ ಸಂತರಿಗೆ ಈ ಅಗೌರವ ಸ್ವೀಕಾರಾರ್ಹವಲ್ಲ ಎಂದು ಆರ್ಚ್ ಬಿಷಪ್ ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading