ಕೊಳ್ಳೇಗಾಲ: ನಗರದ ಬೀದಿಗಳಲ್ಲಿ ಮಧ್ಯರಾತ್ರಿ ಎರಡು ಕಾಡಾನೆಗಳು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.
ಎರಡು ಗಂಡಾನೆಯ ಸಂಚಾರ ಮಧ್ಯರಾತ್ರಿ 1:30 ರ ಸಮಯದಲ್ಲಿ ದೇವಾಂಗಪೇಟೆ ಮಾರ್ಗವಾಗಿ ಮರಳೇಶ್ವರ ದೇವಾಲಯದ ರಸ್ತೆ ಹಾದು ಹೋಗಿ ಅಲ್ಲಿಂದ ಡಾ.ಅಂಬೇಡ್ಕರ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಹೋಗಿ ಬಂಕ್ ನ್ನು ಸುತ್ತು ಹಾಕಿ ಯಾವುದೇ ಹಾನಿ ಮಾಡದೇ ಆನಂದ ಜ್ಯೋತಿ ಕಾಲೋನಿ ಪಕ್ಕದ ಗದ್ದೆಯ ಮುಖಾಂತರ ಎಚ್.ಹೆಚ್ ರಸ್ತೆಗೆ ತಲುಪಿ ಬಳಿಕ ಶಾಗ್ಯ ಗುಡ್ಡದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಅರಣ್ಯ ಒಳಭಾಗಕ್ಕೆ 40ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸುಮಾರು 30-40 ಕಿಲೋಮೀಟರ್ ಹಾದು ಹೋದ ಈ ಆನೆಗಳು ಯಾವುದೇ ಸಾರ್ವಜನಿಕರ ಪ್ರಾಣ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿಲ್ಲ ಎಂದು ಅರಣ್ಯಾಧಿಕಾರಿ ಭರತ್ ಅವರು ಮಾಧ್ಯಮದವರಿಗೆ ತಿಳಿಸಿದ್ದರು.
ಕೊಳ್ಳೇಗಾಲ ಅರಣ್ಯ ಪ್ರದೇಶಗಳಿಂದ ಸುತ್ತುವರಿದಿದ್ದರೂ ಒಮ್ಮೆಯೂ ನಗರದ ಒಳಭಾಗಕ್ಕೆ ಪ್ರವೇಶಿಸಿರಲಿಲ್ಲ. ಇದೇ ಮೊದಲ ಬಾರಿಗೆ ಆನೆಗಳು ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


