ಬೆಂಗಳೂರು: ದಿನವಿಡೀ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರಿಗೆ ಇದೀಗ ಹೈಜೀನ್ ಆನ್ ಗೋ ಹೆಸರಿನ ಸಂಚಾರಿ ಶೌಚಾಲಯವನ್ನು ರೂಪಿಸಲಾಗಿದೆ.
ರೆನಾಲ್ಟ್ ನಿಸಾನ್ ಟೆಕ್ನಾಲಜಿ ಅಂಡ್ ಬಿಸಿನೆಸ್ ಸೆಂಟರ್ ಇಂಡಿಯಾ ಕಂಪನಿಯು ಈ ಸಂಚಾರಿ ಶೌಚಾಲಯ ವಾಹನವನ್ನು ನೀಡಿದೆ.
ತೀವ್ರ ಸಂಚಾರ ದಟ್ಟಣೆಯಿರುವ ನಗರದ ವಿವಿಧ ರಸ್ತೆಗಳಲ್ಲಿ ಈ ಸಂಚಾರಿ ಶೌಚಾಲಯ ಲಭ್ಯವಿರುವಂತೆ ನೋಡಿಕೊಂಡು ಸಂಚಾರಿ ಪೊಲೀಸರಿಗೆ ಅನುಕೂಲ ಒದಗಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಕರ್ತವ್ಯದಲ್ಲಿದ್ದಾಗ ಸಂಚಾರಿ ಪೊಲೀಸರು ನಿರ್ಜಲೀಕರಣ,ಮೂತ್ರನಾಳದ ಸೋಂಕು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಮಹಿಳಾ ಸಿಬ್ಬಂದಿಯಂತೂ ಜನನಿಬಿಡ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವಾಗ ಇನ್ನೂ ಹೆಚ್ಚು ಕಷ್ಟ ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ಹೈಜೀನ್ ಆನ್ ಗೋ ವಾಹನಗಳನ್ನು ಸಿದ್ದಪಡಿಸಲಾಗಿದೆ.
2028 ಮಾರ್ಚ್ ವರೆಗೆ ಒಟ್ಟು 27 ತಿಂಗಳುಗಳ ಕಾಲ ಈ ವಾಹನಗಳನ್ನು ಸಂಚರಿಸಲಿದೆ.
ಈ ವಾಹನದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಹ್ಯಾಂಡ್ ವಾಶ್ ಮತ್ತು ನೈರ್ಮಲ್ಯ ಸಾಧನಗಳು, ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವ್ಯವಸ್ಥೆ, ಕನ್ನಡಿ ಮತ್ತು ಮೂಲಭೂತ ಸೌಕರ್ಯಗಳಿವೆ, ಪ್ರಥಮ ಚಿಕಿತ್ಸೆ ಮತ್ತು ಅಗ್ನಿಶಾಮಕ ಸಲಕರಣೆ, ಜಿಪಿಎಸ್ ಟ್ರ್ಯಾಕಿಂಗ್ ಸೇರಿವೆ.
ಶಿವಮೊಗ್ಗ: ಒಂದೇ ಮನೆಯಲ್ಲಿ ತಾಯಿ, ಮಗ ನೇಣಿಗೆ ಶರಣು; ಈ ಹಿಂದೆ ಮಾವ, ಸೊಸೆಯೂ ಇದೇ ಮನೆಯಲ್ಲಿ ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


