ಕನ್ನಡದ ಬಿಗ್‌ಬಾಸ್ ಹನ್ನೊಂದನೇ ಸೀಸನ್ ಜಗದೀಶ್ ನಿರ್ಗಮನದ ನಂತರ ಮತ್ತೆ ಟಿಆರ್‌ಪಿ ಗಳಿಕೆಯಲ್ಲಿ ಯಶಸ್ಸು ಸಾಧಿಸಲು ಕಾರಣಕರ್ತನಾದ ಸ್ಪರ್ಥಿ ಎಂದರೆ ಅದು ಹನುಮಂತು ಎಂದರೆ ತಪ್ಪಾಗಲಾರದು. ಈ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ತನ್ನ ಮುಗ್ದತೆ ಹಾಗೂ ಕಲೆಯಿಂದ ಜನರ ಮನ ಗೆದ್ದಿದ್ದ ಹನುಮಂತು ಇಲ್ಲಿಯೂ ಸಹ ತನ್ನ ನೇರ ನುಡಿ ಹಾಗೂ ಮುಗ್ದತೆಯಿಂದ ವೀಕ್ಷಕರ ಫೇವರಿಟ್ ಆಗಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಕುರಿತ ಚರ್ಚೆಗಳು ನಡೆದಾಗ ಹನುಮಂತು ಪರ ಹೆಚ್ಚಿನ ಜನರು ಬ್ಯಾಟ್ ಬೀಸುತ್ತಿದ್ದು, ಸದ್ಯ ಅಂತಹ ನೆಟ್ಟಿಗರು ಮತ್ತೋರ್ವ ಸ್ಪರ್ಧಿ ಭವ್ಯ ಗೌಡ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಟಾಸ್ಕ್ ಮಾಡುವ ಸಂದರ್ಭದಲ್ಲಿ ಹನುಮಂತು ಮೇಲೆ ಭವ್ಯ ಗೌಡ ಕೈ ಮಾಡಿದ್ದಾರೆ.
ಚೆಂಡನ್ನು ಬುಟ್ಟಿಗೆ ತುಂಬುತ್ತಿದ್ದಾಗ ಹನುಮಂತು ಬುಟ್ಟಿ ಕಿತ್ತುಕೊಂಡ ಎಂಬ ಕಾರಣಕ್ಕೆ ಭವ್ಯ ಗೌಡ ಹನುಮಂತು ಮೇಲೆ ಕೈ ಮಾಡಿದ್ದಾರೆ. ವಿಡಿಯೊದಲ್ಲಿಯೂ ಸಹ ಇದು ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡಿರುವ ನೆಟ್ಟಿಗರು ಕಲರ್ಸ್ ಕನ್ನಡ ವಾಹಿನಿಯನ್ನು ಉಲ್ಲೇಖಿಸಿ ಇಷ್ಟೆಲ್ಲಾ ಆದರೂ ಭವ್ಯ ಗೌಡ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ, ಉತ್ತರ ಕರ್ನಾಟಕದ ಹಳ್ಳಿ ಹುಡುಗ, ಬಡವ, ತನ್ನದೇ ಪ್ರಚಾರದ ಬಳಗ ಇಲ್ಲ, ಹಾಗಂತ ಹೇಳೋರು ಕೇಳೋರು ಇಲ್ಲ ಅನ್ಕೊಂಡ್ರಾ? ಎಂದು ಪ್ರಶ್ನೆ ಹಾಕಿದ್ದಾರೆ.
ಅತ್ತ ವಿಡಿಯೊದಲ್ಲೂ ಸಹ ಹನುಮಂತು ಭವ್ಯ ಗೌಡ ತನ್ನ ಮೇಲೆ ಕೈ ಮಾಡಿದ್ದಾರೆ ಎಂದು ಹೇಳಿದ್ದು ಸೆರೆಯಾಗಿದ್ದು, ಸದ್ಯ ಚರ್ಚೆಗೀಡು ಮಾಡಿಕೊಟ್ಟಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


