ದುಬೈ: ಹೈಸ್ಪೀಡ್ ರೇಸಿಂಗ್ ಅಭ್ಯಾಸದ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದ್ದು, ನಟ ಅಪಾಯದಿಂದ ಪಾರಾಗಿದ್ದಾರೆ.
ಮುಂಬರುವ 24ಎಚ್ ದುಬೈ 2025ರ ರೇಸಿಂಗ್ ಅಭ್ಯಾಸದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ನಟ ಅಜಿತ್ ಕುಮಾರ್ ಅವರ ಕಾರು ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಅಜಿತ್ ಅವರು ಕಾರು ನಿಲುಗಡೆಗೆ ಬರುವ ಮೊದಲು ನಿಯಂತ್ರಣ ಕಳೆದುಕೊಂಡ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರನ್ನು ರಕ್ಷಿಸಲು ಕೆಲವರು ಧಾವಿಸಿದ್ದಾರೆ. ಬಳಿಕ ನಿಧಾನವಾಗಿ ನಟ ಅಜಿತ್ ಕಾರಿನಿಂದ ಕೆಳಗಿಳಿದು ಬಂದಿದ್ದಾರೆ. ಅದೃಷ್ಟವಶಾತ್ ನಟ ಅಜಿತ್ ಕುಮಾರ್ ಅವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಅಜಿತ್ ಕುಮಾರ್ ಮ್ಯಾಥ್ಯೂ ಡೆಟ್ರಿ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮೆರಾನ್ ಮೆಕ್ಲಿಯೋಡ್ ಅವರನ್ನು ಒಳಗೊಂಡ ತಂಡವು ಪೋರ್ಷೆ 992ರಲ್ಲಿ ಸ್ಪರ್ಧಿಸುತ್ತಿದೆ. ಇದು ಈವೆಂಟ್‌ನಲ್ಲಿ ಅತ್ಯಂತ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದಾಗಿದೆ. ತಾಂತ್ರಿಕ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ರೇಸಿಂಗ್ ಒದಗಿಸುತ್ತಿದೆ. ಇದು ತಂಡದ ಚೊಚ್ಚಲ ಪಂದ್ಯಕ್ಕೆ ಬಲವಾದ ಅಡಿಪಾಯವನ್ನು ಖಾತ್ರಿಪಡಿಸುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


