ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪ 2 ದ ರೂಲ್ ನಟನಿಗೆ ಸಿಹಿ ಹಾಗೂ ಕಹಿ ಎರಡನ್ನೂ ತಂದುಕೊಟ್ಟಂತಹ ಚಿತ್ರ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1800 ಕೋಟಿ ಗಳಿಸಿದ್ದು ಅತಿಹೆಚ್ಚು ಗಳಿಕೆ ಮಾಡಿದ ತೆಲುಗು ಸಿನಿಮಾ ಎಂದು ಒಂದೆಡೆ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿ ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಅಲ್ಲು ಅರ್ಜುನ್ ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಗಂಭೀರವಾಗಿದ್ದ ತೇಜಸ್ ಎಂಬ ಬಾಲಕನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಹೀಗೆ ಕಥೆ, ಕಲೆಕ್ಷನ್ ಮಾತ್ರವಲ್ಲದೇ ವೈಯಕ್ತಿಕವಾಗಿಯೂ ಅಲ್ಲು ಅರ್ಜುನ್ ಅವರನ್ನು ಭಾರೀ ಸುದ್ದಿಯಾಗುವಂತೆ ಮಾಡಿದ ಪುಷ್ಪ ದ ರೂಲ್ ಚಿತ್ರ ಇದೀಗ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ ಈ ಬಾರಿ ಪ್ರದರ್ಶನವಾಗುವ ಚಿತ್ರದಲ್ಲಿ ಮೆಗಾ ಬದಲಾವಣೆಯೊಂದಿದೆ.

ಹೌದು, ಚಿತ್ರದ ರನ್‌ಟೈಮ್‌ನಲ್ಲಿ ಈ ಬಾರಿ ವ್ಯತ್ಯಾಸವಿರಲಿದೆ. ಈ ಬಾರಿ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ ಚಿತ್ರವನ್ನು ಇದೇ ತಿಂಗಳ 11ರಿಂದ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಲಿದೆ. ಅಲ್ಲಿಗೆ ಈಗಾಗಲೇ 3.15 ನಿಮಿಷ ಇದ್ದ ಚಿತ್ರ ಜನವರಿ 11ರ ಬಳಿಕ 3.30 ನಿಮಿಷಗಳ ರನ್‌ಟೈಮ್ ಹೊಂದಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


