ಬೆಂಗಳೂರು;ಸರ್ಕಾರಿ ಸ್ವಾಮ್ಯದ ಬಾರತ ಸಂಚಾರ ನಿಗಮ ಲಿಮಿಟೆಡ್ (Bharat Sanchar Nigam Limited) ತನ್ನ ಸೇವೆಗಳಲ್ಲಿ ಹೊಸ ಬಗೆಯ ಪ್ಲಾನ್‌ಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಎಸ್‌ಎನ್ಎಲ್(BSNL) ಸಾಕಷ್ಟು ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡಿದೆ.91 ರೂಪಾಯಿಯ ಈ ಪ್ಲಾನ್ ಎಲ್ಲ ಗ್ರಾಹಕರಿಗೂ, ವಿಶೇಷವಾಗಿ ಎರಡು ಸಿಮ್ ಬಳಸುವ ಬಳಕೆದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ಲಾನ್‌ನಿಂದ 90 ದಿನಗಳವರೆಗೆ ಯಾವುದೇ ರೀತಿಯ ರೀಚಾರ್ಜ್ ಮಾಡುವ ತಲೆಬಿಸಿಯಿಲ್ಲ.ಬಳಕೆದಾರರು ಇನ್‌ಕಮಿಂಗ್(Incoming) ಕರೆಗಳು, ಬಿಎಸ್‌ಎನ್ಎಲ್(BSNL)ನ ಸಿಮ್ ಆ್ಯಕ್ಟೀವ್ ಆಗಿರುವುದು ಹಾಗೂ ಸಂದೇಶ ಸೇವೆ ನಿರಂತರವಾಗಿ ಲಭ್ಯವಾಗುತ್ತದೆ. ಬಳಕೆದಾರರು ತಮ್ಮ ಸಿಮ್ ಕಾರ್ಡ್‌ಗಳನ್ನು ನಿರಂತರ ರೀಚಾರ್ಜ್‌ಗಳ ಅಗತ್ಯವಿಲ್ಲದೇ 90 ದಿನಗಳವರೆಗೆ ಸಕ್ರಿಯವಾಗಿರಿಸಿಕೊಳ್ಳಲು ಸಾಧ್ಯಗೊಳಿಸುತ್ತದೆ.ಇನ್ನು BSNL ಸಿಮ್‌ನ್ನು ಎರಡನೇ ಆಯ್ಕೆಯಾಗಿಟ್ಟಿರುವ ಗ್ರಾಹಕರಿಗೆ ಉತ್ತಮವಾದ ರೀಚಾರ್ಜ್‌ಪ್ಲಾನ್. ಕಾರಣ ಸಿಮ್ ಆ್ಯಕ್ಚೀವ್ ಆಗಿರಲು ವಿಪರೀತ ಬೆಲೆಯ ಮೊತ್ತದ ರೀಚಾರ್ಜ್ ಮಾಡಬೇಕು ಎಂದೇನಿಲ್ಲ. 91 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, 3 ತಿಂಗಳು ಇನ್‌ಕಮಿಂಗ್ ಕರೆಗಳು, ಸಂದೇಶ ಸೇರಿದಂತೆ ಎಲ್ಲವೂ ಲಭ್ಯವಾಗಲಿದೆ.

ಇದೆಲ್ಲದ ಮಧ್ಯ ಕಂಪನಿಯು ತನ್ನ ಗ್ರಾಹಕರಿಗೆ ಅನುಕೂಲಕರ ರೀಚಾರ್ಜ್ ಪ್ಲಾನ್ ಒದಗಿಸುತ್ತಲೇ ಇದೆ,ನ್‌ನಲ್ಲಿ ಯಾವುದೇ ಡೇಟಾ, ಟಾಕ್‌ಟೈಮ್ ಲಭ್ಯವಿರುವುದಿಲ್ಲ. ಇದು ಸಿಮ್ ಆ್ಯಕ್ಟೀವ್ ಆಗಿಡಲು ಬಯಸುವವರಿಗೆ ನೀಡಿದ ಪ್ಲಾನ್. ವಿಶೇಷ ಅಂದರೆ ಇದರ ಮೇಲೆ ಆ್ಯಡ್ ಆನ್ ಡೇಟಾ,(Add on data) ಟಾಕ್ ಟೈಮ್ ಪ್ಯಾಕೇಜ್‌ಗಳನ್ನು ಅತೀ ಕಡಿಮೆ ಬೆಲೆಗೆ ರೀಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಗ್ರಾಹಕರು ಸಿಮ್ ಆ್ಯಕ್ಟಿವೇಶನ್ ಜೊತೆಗೆ ಡೇಟಾ ಸೇರಿದಂತೆ ಇತರ ಸೌಲಭ್ಯವನ್ನು ಬಳಸಿಕೊಳ್ಳಲು ಸಾಧ್ಯವಿದೆ.ಡೇಟಾ ಪ್ಲಾನ್‌ಗಳು(Data Plans): ಕೇವಲ ₹16rs ರಿಂದ ಡೇಟಾ ಪ್ಲಾನ್‌ಗಳು ಆರಂಭಗೊಳ್ಳುತ್ತವೆ. ₹58, ₹98, ₹198 ಪ್ಲಾನ್‌ಗಳ ಮೂಲಕ ಹೆಚ್ಚಿನ ಡೇಟಾ ಬಳಸಬಹುದಾಗಿದೆ.ಟಾಕ್‌ಟೈಮ್ ಪ್ಯಾಕ್‌ಗಳು(Talktime Packs) ಟಾಕ್‌ಟೈಮ್ ಬೆಲೆಗಳು ಕೂಡ ಜಾಸ್ತಿ ದುಬಾರಿ ಆಗಿಲ್ಲ. ಗ್ರಾಹಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ಟಾಕ್‌ಟೈಮ್ ಸೇರಿಸಿಕೊಳ್ಳಬಹುದಾಗಿದೆ.ಈ ಪ್ಲಾನ್‌ಗಳು ಬಡ ಮತ್ತು ಮಧ್ಯಮ ವರ್ಗದ ಜನತೆಗೆ ವಿಶೇಷ ಸಹಾಯ ಮಾಡುತ್ತವೆ.BSNL 91 ರೂಪಾಯಿಯ 90 ದಿನಗಳ ವ್ಯಾಲಿಡಿಟಿ ಪ್ಲಾನ್ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಕಾಲಾವಧಿಯ ಸೌಲಭ್ಯವನ್ನು ಬಯಸುವ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಿದೆ. ಇತರ ಪ್ಲಾನ್‌ಗಳಿಗೆ ಹೋಲಿಸಿದರೆ, ಇದು ಸಾಮಾನ್ಯ ಜನತೆ ಮತ್ತು ಬಜೆಟ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಅವಶ್ಯವಿರುವ ಡೇಟಾ ಪ್ಯಾಕ್ ಅನ್ನು ಯಾವಾಗ ಬೇಕಾದರೂ ರೀಚಾರ್ಜ್ ಮಾಡಿಕೊಳ್ಳಬಹುದು. 439 ರೂ. ಪ್ಲಾನ್‌ಗೆ ಪ್ರತ್ಯೇಕ ಡೇಟಾ ಪ್ಯಾಕ್ ಹಾಕಿಸಿಕೊಳ್ಳಲು ಅವಕಾಶ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


