ಮರೆವು ಬಹುತೇಕರನ್ನು ಕಾಡುವ ಸಮಸ್ಯೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.ತಜ್ಞರ ಪ್ರಕಾರ ಆಹಾರದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದಾಗಿ ವಿಷಯಗಳನ್ನು ನೆನಪಿನಲ್ಲಿಡಲು ಸಾಧ್ಯವಾಗುವುದಿಲ್ಲ. ಪೌಷ್ಟಿಕ ಆಹಾರ ಸೇವಿಸದೇ ಇರುವುದರಿಂದ ಮೆದುಳು ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹೀಗಿದ್ದಾಗ ನಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.ಇಂದಿನ ಜೀವನಶೈಲಿ ಕಾರಣದಿಂದ ನೆನಪಿನ ಶಕ್ತಿ ಕುಂಠಿತವಾಗುವುದನ್ನು ಈ ಮುಂದಿನ ಕ್ರಮಗಳ ಮೂಲಕ ತಪ್ಪಿಸಿಕೊಳ್ಳಬಹುದು.ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ. ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇದ್ದೆ ಇರುತ್ತದೆ ಹಾಗಾಗಿ ಇಂದು ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿದು ಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪಿನ ಶಕ್ತಿ ಹೆಚ್ಚುವುದಷ್ಟೇ ಅಲ್ಲ ಮಿದುಳಿನ ಆರೋಗ್ಯದ ವೃದ್ಧಿಯೂ ಕೂಡ ಆಗುತ್ತದೆ.

ಒಂದೆಲಗ ಎಲೆ
ಪ್ರತಿದಿನ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಎರಡು ಅಥವಾ ಮೂರು ಎಲೆಗಳನ್ನು ತಿನ್ನುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚುತ್ತದೆ. ಒಂದು ಚಮಚ ರಸಕ್ಕೆ ಜೇನುತುಪ್ಪ ಬೆರೆಸಿ ಕೊಡುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.ಯಾವುದೇ ಕೆಲಸ ಮಾಡಲು ಮನಸ್ಸು ಚುರುಕಾಗಿರಬೇಕು. ಹಾಗಾಗಿ ಹಸಿರು ಸೊಪ್ಪುಗಳನ್ನು ತಿನ್ನುವುದರಿಂದ ಮರೆಯುವ ಖಾಯಿಲೆಯಿಂದ ದೂರವಿರಬಹುದು.
ಶಂಖಪುಷ್ಪಿ(Conch flower)
ಇದೊಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ. ನೆನಪಿನ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಿದರೆ ಸಾಕು.ಶಂಖಪುಷ್ಪ ಸಿರಪ್ ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದು ಮುಖ್ಯವಾಗಿ ಆರೋಗ್ಯಕರ ಮೆದುಳು ಮತ್ತು ಮನಸ್ಸನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಮೂಲಕ ನರಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ,
ಬ್ರಾಹ್ಮೀ
ಬ್ರಾಹ್ಮೀ ಎಲೆಗಳನ್ನು ಜಜ್ಜಿ ರಸ ತೆಗೆದು ಇಲ್ಲವೆ ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇವನೆ ಮಾಡಿದರೆ ನಿದ್ರಾಹೀನತೆ, ಆತಂಕಗಳು ನಿವಾರಣೆಯಾಗುತ್ತದೆ. ಈ ಔಷಧಿಯ ಸೇವನೆಯಿಂದ ಸ್ಮರಣ ಶಕ್ತಿಯೂ ಹೆಚ್ಚುತ್ತದೆ.
ಹಾಲು(Milk)
ಪರಿಪೂರ್ಣ ಆಹಾರ ಎಂದು ಕರೆಯಲ್ಪಡು ಹಾಲಿನಲ್ಲಿ ಮೆದುಳಿನ ಅಂಗಾಂಶಗಳ ಬೆಳವಣಿಗೆಗೆ ಸಹಕಾರಿಯಾಗಿರುವ ವಿಟಮಿನ್ ಬಿ ಕಂಡು ಬರುತ್ತದೆ. ಹಾಗಾಗಿ, ಮಕ್ಕಳಿಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ 1 ಗ್ಲಾಸ್ ಹಾಲು ಕುಡಿಸುವುದರಿಂದ ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕರಿ ಆಗಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇದು ಮೂಳೆಗಳಿಗೆ ಬಲ ನೀಡುತ್ತದೆ. ದೇಹದ ಆರೋಗ್ಯಕ್ಕೆ ನಿತ್ಯ ಹಾಲು ಅತ್ಯಗತ್ಯ. ಇವು ದೇಹಕ್ಕೆ ಅಗತ್ಯವಿರುವ ಅನೇಕ ಸಮೃದ್ಧವಾದ ಪೋಷಕಾಂಶಗಳನ್ನು ನೀಡುತ್ತವೆ.
ಕುಂಬಳಕಾಯಿ ಬೀಜ(Pumpkin seed)
ಇದು ಚಿಕ್ಕ ಬೀಜವಾದರೂ ಇದರಲ್ಲಿ ಮೆಗ್ನಿಶಿಯಂ, ಕಬ್ಬಿಣಾಂಶ, ತಾಮ್ರ, ಸತುವಿನ ಅಂಶ ಸಮೃದ್ಧವಾಗಿದೆ. ಇದನ್ನು ಸಲಾಡ್ ರೂಪದಲ್ಲಿ ಮಕ್ಕಳಿಗೆ ನೀಡಬಹುದು.ಕುಂಬಳಕಾಯಿಯಲ್ಲಿ ಮೆಗ್ನಿಶಿಯಂ, ಕಬ್ಬಿನಾಂಶ ಮತ್ತು ನಾರಿನಾಂಶ ಅಧಿಕವಾಗಿದೆ.
ಬಾದಾಮಿ(Almonds)
ಬಾದಾಮಿಯು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುತ್ತದೆ,ಬಾದಾಮಿಯು ವಿಟಮಿನ್‌ಗಳು, ಖನಿಜಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್‌ಗಳಿಂದ ತುಂಬಿರುತ್ತದೆ. ಇದರಲ್ಲಿರುವ ಪೌಷ್ಟಿಕಾಂಶಗಳು ನಿಮ್ಮ ಸರ್ವತೋಮುಖ ಆರೋಗ್ಯಕ್ಕೆ ತುಂಬಾ ಸಹಕಾರಿ.ಬಾದಾಮಿ ವಿಟಮಿನ್ E ಹೊಂದಿದೆ. ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೆದುಳಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ನೆನಪಿನ ಶಕ್ತಿ ಕುಸಿತದ ಅಪಾಯವನ್ನು ಕಡಿಮೆ ಮಾಡುತ್ತದೆ.ಮಕ್ಕಳ ನೆನಪಿನ ಶಕ್ತಿ ಹೆಚ್ಚುತ್ತದೆ.
ಮೊಟ್ಟೆ
ಪ್ರೊಟೀನ್ ನ ಉತ್ತಮ ಮೂಲ ಎಂದು ಪರಿಗಣಿಸಲಾಗಿರುವ ಮೊಟ್ಟೆಯ ಹಳದಿ ಲೋಳೆಯಲ್ಲಿ ಮೆಮೋರಿ ಬೆಳವಣಿಗೆಗೆ ಸಹಾಯಕವಾದ ಕೋಲೀನ್ ಸಮೃದ್ಧವಾಗಿದೆ. ಹಾಗಾಗಿ, ಮಕ್ಕಳಿಗೆ ಪ್ರತಿದಿನ ಮೊಟ್ಟೆ ತಿನ್ನಿಸುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುವುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


